likes-comments

ಲೈಕ್ಸ್ ಗಾಗಿ,ಪ್ರಚಾರಕ್ಕಾಗಿ ಜನ ಯಾವ ಮಟ್ಟಕ್ಕಿಳಿತಾರೆ ಗೊತ್ತಾ? ವೀಡಿಯೊ ನೋಡಿ ನೆಟ್ಟಿಗರಿಂದ ಛೀಮಾರಿ…

Entertainment/ಮನರಂಜನೆ

ನಮ್ಮ ಭಾರತ ದೇಶ ಎಂದರೆ ಈಗ ಪಡುವಣ ದೇಶದವರೂ ಆಕರ್ಷಿತರಾಗುತ್ತಿದ್ದಾರೆ. ಇಲ್ಲಿರುವ ಎಲ್ಲಾ ವಿಚಾರಗಳಿಗಿಂತ ಹೆಚ್ಚಾಗಿ ಧರ್ಮ, ಆಚರಣೆ, ಸಂಸ್ಕೃತಿ, ಸಂಪ್ರದಾಯ ಈ ವಿಚಾರಕ್ಕೆ ಅವರು ಮಾರುಹೋಗಿದ್ದಾರೆ. ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಸಂಸ್ಕಾರ ಎನ್ನುವ ಚೌಕಟ್ಟುಗಳು ನಮಗೆ ಒಂದು ಸಾಮಾಜಿಕ ಭದ್ರತೆಯನ್ನು ನೀಡುತ್ತವೆ. ಅವುಗಳನ್ನು ಮೀರಿದಂತೆ ಬದುಕಿದ್ದಾಗ ನಾವು ಹೆಚ್ಚು ಸುರಕ್ಷಿತವಾಗಿರುತ್ತೇವೆ.

ಈ ನಿಯಮಗಳು ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಅನ್ವಯ. ಆದರೆ ಹೆಣ್ಣು ಮಕ್ಕಳಿಗೆ ಮಾತ್ರ ಇದರಲ್ಲಿ ಇನ್ನು ಹೆಚ್ಚಿನ ಕಟ್ಟುನಿಟ್ಟು ಇದೆ. ಕಾರಣ ಬಹುಶಃ ಆ ಕಾಲದವರೆಗೂ ತಿಳಿದಿತ್ತು ಎನಿಸುತ್ತದೆ ಕಲಿಗಾಲದಲ್ಲಿ ಮುಂದೆ ಹೆಣ್ಣು ಮಕ್ಕಳಿಗೆ ಎಷ್ಟೆಲ್ಲಾ ತೊಂದರೆಗಳು ಬರಬಹುದು ಎಂದು. ಅದಕ್ಕಾಗಿಯೇ ಸಂಪ್ರದಾಯ ಎನ್ನುವ ವಿಚಾರದಲ್ಲಿ ಹೆಣ್ಣನ್ನು ಬಂಧಿಸಿ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದರು.

ಆದರೆ ಇಂದು ಪ್ರಪಂಚ ಎಷ್ಟರಮಟ್ಟಿಗೆ ಮುಂದುವರೆದಿದೆ ಎಂದರೆ ಹೆಣ್ಣು ಆಕಾಶದೆದ್ದಕ್ಕೂ ಹಾರಬಲ್ಲಳು. ಸಮುದ್ರದಲ್ಲಿ ಆಳಕ್ಕೆ ಈಜಿ ತಾನು ಅಂದುಕೊಂಡದ್ದನ್ನು ಸಾಧಿಸಿ ಬರಬಲ್ಲಳು. ಇಷ್ಟೆಲ್ಲಾ ಸಾಮರ್ಥ್ಯ ಇರುವ ಈಕೆ ಇಂದು ಸಹಜವಾಗಿ ಸಾಮಾಜಿಕ ಜಾಲತಾಣದಲ್ಲೂ ಕೂಡ ವಿಶ್ವದಾದ್ಯಂತ ವಿಸ್ತರಿಸಿಕೊಂಡಿದ್ದಾಳೆ. ಇಂದು ಜಗತ್ತೇ ಜನಪ್ರಿಯತೆ ಎನ್ನುವ ಅಡಿಕ್ಷನ್ಗೆ ಸಿಕ್ಕಿಕೊಂಡಿದೆ. ಈ ಜನಪ್ರಿಯತೆಯ ಗೀಳು ಹಳ್ಳಿ ಕುರಿಗಾಹಿ ಹೈದನಿಂದ ಹಿಡಿದು ದೇಶದ ಲೀಡರ್ ಗಳ ತನಕ ಬಿಟ್ಟಿಲ್ಲ.

ಸಾಮಾಜಿಕ ಜಾಲತಾಣ ಎನ್ನುವ ಇಂದ್ರಜಾಲ ಎಲ್ಲರನ್ನೂ ಆಕರ್ಷಿಸಿ ಮೋಡಿ ಮಾಡಿದೆ. ಪ್ರತಿಯೊಬ್ಬರಿಗೂ ಕೂಡ ಇಲ್ಲಿ ಇಂದು ಫೇಮಸ್ ಆಗುವ ಹುಚ್ಚು. ಮನೋರಂಜನೆ ಎನ್ನುವ ವಿಷಯ ಇಟ್ಟುಕೊಂಡು ಇಂದು ಜನ ನೇಮ್, ಫೇಮ್ ಪಡೆಯಲು ಸೋಶಿಯಲ್ ಮೀಡಿಯಾ ಹಿಂದೆ ಓಡುತ್ತಿದ್ದಾರೆ. ಆದರೆ ಎಲ್ಲವೂ ಒಂದು ಹಂತದವರೆಗೆ ಇದ್ದರೆ ಸರಿ. ಅತಿಯಾದರೆ ಅಮೃತವು ಕೂಡ ವಿಷ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ.

ಹದ್ದು ಮೀರಿ ಎಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲತೆ ಹೆಚ್ಚಾಯಿತು ಅದನ್ನು ಕಡಿವಾಣ ಹಾಕುವ ಸಲುವಾಗಿಯೇ ಟ್ರೋಲ್ ಗಳ ಪೇಜ್ ಗಳು ಅವರ ಹುಟ್ಟಡಗಿಸಲು ಹುಟ್ಟಿಕೊಂಡವು. ಆದರೆ ಟೋಲ್ ಆಗುವುದಕ್ಕೂ ಕೇರ್ ಮಾಡದೆ, ಮಾನ ಮರ್ಯಾದೆ ಹೋಗುತ್ತದೆ ಎನ್ನುವ ಅಂಜಿಕೆಯೂ ಇಲ್ಲದೆ ಇನ್ನೂ ಸಹ ಮಿತಿಮೀರಿ ಜನ ವರ್ತಿಸುತ್ತಿದ್ದಾರೆ.

ಅದರಲ್ಲಿ ಹೆಣ್ಣು ಮಕ್ಕಳು ಮತ್ತು ಮದುವೆಯಾಗಿರುವ ಹೆಂಗಸರುಗಳೇ ಹೆಚ್ಚು ಎನ್ನುವುದು ಈ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಮುಂದುವರೆದಿರುವುದು ದೇಶದ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂದು ಚಿಂತಿಸುವಂತೆ ಆಗಿದೆ. ಒಂದು ಮನೆಯ ಸಂಸ್ಕಾರ ಉಳಿಯುವುದು ಹೆಣ್ಣುಮಗಳಿಂದ ಅಥವಾ ಆ ಮನೆ ಗೃಹಿಣಿಯಿಂದ ಹೀಗಾಗಿ ಮನೆಯೇ ಮೊದಲ ಪಾಠಶಾಲೆ, ಸಮಾಜ ಚೆನ್ನಾಗಿರಬೇಕು ಎಂದರೆ ಸಂಸ್ಕೃತ ಪಾಠ ಮನೆಯಿಂದಲೇ ಶುರುವಾಗಿರಬೇಕು.

ತಾಯಿಯೇ ಮೊದಲ ಗುರುವಾಗಿರಬೇಕು ಎಂದು ಹೇಳಿಕೊಂಡು ಬೆಳೆದ ಮಂದಿ ನಾವು ಆದರೆ ಇಂದು ಮನೆಯಲ್ಲಿರುವ ಗೃಹಿಣಿಯರು ತಮ್ಮ ಜವಾಬ್ದಾರಿಯನ್ನು ಹಾಗೂ ಸ್ಥಾನದ ಘನತೆಯನ್ನು ಮರೆತು ಈ ರೀತಿ ಮೇಕಪ್ ಮಾಡಿಕೊಂಡು ಕ್ಯಾಮರಾ ಗೆ ಪೋಸ್ ಕೊಡುತ್ತಿರುವುದು ನೋಡಿದರೆ ಉಕ್ಕುವ ಕೋಪವನ್ನು ವಿವರಿಸಲು ಸಾಧ್ಯವಿಲ್ಲ.

 

View this post on Instagram

 

A post shared by Troll Halkats (@troll_halkats2.0)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...