LIFE-OF-PRIYANKA-MALLA-MOVIE

ನನ್ನ ಲೈಫ್ ನಲ್ಲಿ ತುಂಬಾ ಕಷ್ಟದ ಪಾತ್ರ ಮಾಡಿದ್ದು ಮಲ್ಲ ಚಿತ್ರದಲ್ಲಿ ಎಂದ ನಟಿ ಪ್ರಿಯಾಂಕ! ರವಿ ಮಾಮ ಬಗ್ಗೆ ಹೇಳಿದ್ದೇನು ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ, ತಮ್ಮ ಕ್ರೇಜಿನೆಸ್ ಮೂಲಕವೇ ಅಪಾರ ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿರುವಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಎಂತಹ ಅತ್ಯದ್ಭುತ ನಟ ಎಂಬುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ತಮ್ಮ ಅಮೋಘ ಅಭಿನಯದ ಮೂಲಕ ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದು, ಹಿಟ್ ಸಿನಿಮಾಗಳ ಸರದಾರ ಎಂದೇ ಗುರುತಿಸಿಕೊಂಡಿದ್ದಾರೆ.

ಇನ್ನು ರವಿಚಂದ್ರನ್ ಅವರ ಸಿನಿಮಾದಲ್ಲಿ ಹೀರೋಯಿನ್ಗಳನ್ನು ನೋಡುವುದೇ ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಖುಷಿ. ಹೌದು ಸ್ನೇಹಿತರೆ ನಟಿಯರಿಗೆ ಸಿನಿಮಾದಲ್ಲಿ ಬಹಳ ಪ್ರಾಮುಖ್ಯತೆ ನೀಡುವಂತಹ ರವಿಚಂದ್ರನ್, ಅವರ ಗ್ಲಾಮರ್ ಬ್ಯೂಟಿಯನ್ನು ಎಕ್ಸ್ಪೋಸ್ ಮಾಡಿಸುವಲ್ಲಿ ಎತ್ತಿದ ಕೈ ಎಂದರೆ ತಪ್ಪಾಗಲಾರದು. ಹೀಗೆ ರವಿಚಂದ್ರನ್ ಅವರ ಕುರಿತು ಸಂದರ್ಶನವೊಂದರಲ್ಲಿ ಯಾರಿಗೂ ತಿಳಿಯದಂತಹ ಮಾಹಿತಿಯೊಂದನ್ನು ನಟಿ ಪ್ರಿಯಾಂಕ ಉಪೇಂದ್ರ ಬಿಚ್ಚಿಟ್ಟಿದ್ದು.

ಮಲ್ಲನ ಕುರಿತು ಈ ನಟಿ ಹೇಳಿದ್ದಾದರೂ ಏನು ಎಂಬುದನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ನಟಿ ಪ್ರಿಯಾಂಕ ಉಪೇಂದ್ರರವರು ರವಿ ಚಂದ್ರನ್ರವರ ಡೈರೆಕ್ಷನ್ ಸ್ಟೈಲ್ ಕುರಿತು ಹೇಳಿದ್ದು ಹೀಗೆ “ರವಿ ಸರ್ ಗೆ ಡೈರೆಕ್ಷನ್ನಲ್ಲಿ ಒಂದು ವಿಶೇಷವಾದ ಸ್ಟೈಲ್ ಇದೆ. ಅವರಿಗೆ ಸಿನಿಮಾದಲ್ಲಿ ಯಾವ ಸೀನ್ ಬೇಕಾಗಿರುತ್ತೋ ಅದರ ಕುರಿತು ಕ್ಲಿಯರ್ ಮೈಂಡ್ ಸೆಟ್ ಇರುತ್ತದೆ.

PhotoGrid Site 1652854105178

ಅಲ್ಲದೆ ಪ್ರತಿಯೊಂದು ಸಾಂಗ್ನಲ್ಲೂ ತಮ್ಮ ಕ್ರಿಯೇಟಿವಿಟಿಯನ್ನು ಎಕ್ಸ್ಪೋಸ್ ಮಾಡ್ತಾರೆ. ಹೀರೋಯಿನ್ ಗಳಿಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಅವರ ಸಿನಿಮಾದಲ್ಲಿ ನಟಿಯರಿಗೆ ಬಹಳನೇ ಸ್ಪೇಸ್ ಇರುತ್ತದೆ. ಹೀಗಾಗಿ ಎಲ್ಲಾ ನಟಿಯರು ರವಿಚಂದ್ರನ್ ಸರ್ ಸಿನಿಮಾಗಳ ಮೂಲಕ ಬಹಳ ಬೇಗ ಗುರುತಿಸಿಕೊಳ್ಳಬಹುದು. ಎಲ್ಲಾ ಸಿನಿಮಾದಲ್ಲೂ ನಟಿಯರಿಗೆ ಪವರ್ಫುಲ್ ಕ್ಯಾರೆಕ್ಟರ್ ಮುಖ್ಯವಾದ ಪಾತ್ರಗಳು ಹಾಗೂ ನಟಿಯರು ಚೆನ್ನಾಗಿ ಕಾಣಿಸಬೇಕು ಎಂಬ ಯೋಚನೆ ಅವರಲ್ಲಿರುತ್ತದೆ.

ಅಲ್ಲದೆ ಅವರು ರೋಮ್ಯಾಂಟಿಕ್ ಸಾಂಗ್ಗಳನ್ನು ಶೂಟ್ ಮಾಡುವ ತರ ಬೇರೊಂದು ಡೈರೆಕ್ಟರ್ ಮಾಡಲು ಸಾಧ್ಯವೇ ಇಲ್ಲ. ಮಲ್ಲ ಸಿನಿಮಾದಲ್ಲಿ ಅವರೊಂದಿಗೆ ಅಭಿನಯಿಸಿದ್ದು, ನನ್ನ ಭಾಗ್ಯವಾಗಿತ್ತು ನಾನು ಆಡಿಷನ್ನಲ್ಲಿ ಸೆಲೆಕ್ಟ್ ಆಗುವಾಗ ಯಮ್ಮೊ ಯಮ್ಮೊ ನೋಡ್ದೆ ನೋಡ್ದೆ ಹಾಡಿನ ಶಾಟ್ ಒಂದನ್ನು ಶೂಟ್ ಮಾಡಲಾಯಿತು. ಅದರ ಒಂದು ಕ್ಲಿಪ್ ರವಿಚಂದ್ರನ್ ಅವರಿಗೆ ಬಹಳ ಇಷ್ಟವಾದ ಕಾರಣ ಈ ಸಿನಿಮಾಗೆ ನೀನೇ ನನ್ನ ಹೀರೋಯಿನ್ ಎಂದು ಹೇಳಿದರು.

ಅದು ನನಗೆ ಬಹಳ ಖುಷಿಯಾಯಿತು ಅಲ್ಲದೆ ಈ ಒಂದು ಸಿನಿಮಾದಿಂದಾಗಿ ನನಗೆ ಕನ್ನಡ ಸಿನಿಮಾರಂಗದಲ್ಲಿ ಒಂದು ಬಿಗ್ ಬೇಸ್ಮೆಂಟ್ ಸಿಕ್ತು” ಎಂದು ನಟಿ ಪ್ರಿಯಾಂಕ ಉಪೇಂದ್ರರವರು ರವಿಚಂದ್ರನ್ ಅವರ ಅತ್ಯದ್ಭುತ ಡೈರೆಕ್ಷನ್ ಕಲೆಯನ್ನು ಹಾಡಿಹೊಗಳಿದರು. ನಿಮಗೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕ್ರೇಜಿನೆಸ್ ಇಷ್ಟವಾಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.