ಮಗ ತೆರಿಗೆ ಪಾವತಿಸುತ್ತಿದ್ದರು ಕೂಡ ಗೃಹಿಣಿ 2000 ರೂ. ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್.
Lakshmi Hebbalkar about gruha lakshmi scheme: ರಾಜ್ಯದಲ್ಲಿ ಇದೀಗ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಜಾರಿಯಾಗಿದ್ದು ಪ್ರತಿ ಮನೆಯ ಯಜಮಾನಿಯರು ಈ ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನದ ಘೋಷಣೆ ಆಗುವ ಮೊದಲೇ ಸಾಕಷ್ಟು ಅಪ್ಡೇಟ್ ಗಳು ಬಂದಿದ್ದವು. ಕೆಲವು ಷರತ್ತುಗಳ ಮೇರೆಗೆ ಇದೀಗ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ.
ಇದೀಗ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಇನ್ನೆರಡು ಷರತ್ತುಗಳನ್ನು ವಿಧಿಸಿದೆ. ಅನೇಕ ಮನೆ ಒಡತಿಯರಿಗೆ ಈ ಹೊಸ ಷರತ್ತುಗಳಿಂದ ಗೃಹ ಲಕ್ಷ್ಮಿಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹೊಸ ಷರತ್ತುಗಳ ಕುರಿತು ಚರ್ಚೆ ನಡೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಕಂಡೀಷನ್
ಇನ್ನು ಮನೆ ಒಡತಿಯ ಪತಿ ತೆರಿಗೆ ಅಥವಾ ಜಿಎಸ್ ಟಿ ರಿಟರ್ನ್ ಪಾವತಿಸುತ್ತಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ದೊರೆಯುವುದಿಲ್ಲ ಎಂದು ಈ ಹಿಂದೆ ರಾಜ್ಯ ಸರ್ಕಾರ ಘೋಷಿಸಿದೆ. ಗ್ರಹಿಣಿಯ ಮಕ್ಕಳು ಅಂದರೆ ಮಗ ಅಥವಾ ಮಗಳು ತೆರಿಗೆ ಅಥವಾ ಜಿಎಸ್ ಟಿ ರಿಟರ್ನ್ ಪಾವತಿಸುತ್ತಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ದೊರೆಯುವುದಿಲ್ಲ ಎಂದು ಸರ್ಕಾರ ಇತ್ತೀಚೆಗಷ್ಟೇ ಘೋಷಣೆ ಹೊರಡಿಸಿದೆ.
ಮಗ ತೆರಿಗೆ ಅಥವಾ ಜಿಎಸ್ ಟಿ ರಿಟರ್ನ್ ಪಾವತಿಸುತ್ತಿದ್ದರೆ ಅಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ನೀಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೆ ನೀಡಿದ್ದಾರೆ. ಮಗ ತೆರಿಗೆ ಪಾವತಿಸುತ್ತಿದ್ದರು ಕೂಡ ಗೃಹಿಣಿ 2000 ರೂ. ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯು ಆಗಸ್ಟ್ 15 ಸ್ವತಂತ್ರ ದಿನಾಚರಣೆಯ ದಿನದಂದು ಜಾರಿಗೆ ಬರುವುದಾಗಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಪ್ರತಿ ಮನೆಯ ಒಡತಿಗೆ ಮಾಸಿಕ 2,000 ರೂ. ಖಾತೆಗೆ ಜಮಾ ಆಗಲಿದೆ.
ಇನ್ನು ಜೂನ್ 15 ರಿಂದ ಜುಲೈ 15 ರ ವಳಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ನೀಡಲಾಗಿದೆ. ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ವಿವರಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.