ಡ್ರೈವರ್ ಸೀಟ್ ಬಳಿ ಬಸ್ ಹತ್ತಿದ ಮಹಿಳೆ,ರೊಚ್ಚಿಗೆದ್ದ ಕಂಡಕ್ಟರ್ ಮಾಡಿದ್ದೇನು ಗೊತ್ತಾ

ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ದೇಗುಲಗಳಿಗೆ ಬರುವ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಿದೆ, ಹೆಚ್ಚು ಹೆಚ್ಚು ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ನಿತ್ಯ ಸಾವಿರಾರು ಮಹಿಳೆಯರು ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇತ್ತ ಕಾರವಾರದ ಮುರುಡೇಶ್ವರದಲ್ಲಿ ದೇವಸ್ಥಾನದ ದಾರಿಯಲ್ಲಿ ಮಹಿಳೆಯರ ಮೆರವಣಿಗೆಯೇ ಎದುರಾಗುತ್ತಿದೆ.

ಉತ್ತರ ಕರ್ನಾಟಕ ಭಾಗದ ಮಹಿಳೆಯರು ತಂಡೋಪ ತಂಡವಾಗಿ ಮುರುಡೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು ವಾರಂತ್ಯ ಎನ್ನದೇ ವಾರದ ಮಧ್ಯೆಯೂ ದೇವಸ್ಥಾನಗಳು ಫುಲ್‌ ರಶ್‌ ಆಗುತ್ತಿವೆ.ಆದರೆ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿದ ಕಳೆದ ವಾರದಿಂದ ದೇಗುಲಕ್ಕೆ ಆಗಮಿಸುವ ಭಕ್ತ ಮಹಿಳೆಯರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಮಾಹಿತಿ ಪ್ರಕಾರ ದೇಗುಲಕ್ಕೆ ನಿತ್ಯ ಎರಡೂವರೆ ಸಾವಿರ ಮಂದಿ ಭಕ್ತರು ಆಗಮಿಸುತ್ತಿದ್ದರು. ಆದರೆ ವಾರದ ಅವಧಿಯಿಂದ ಅದು ಸುಮಾರು ಒಂದೂವರೆ ಸಾವಿರ ಹೆಚ್ಚಾಗಿದೆ. ಈಗ ಪ್ರತಿದಿನ ದೇಗುಲಕ್ಕೆ ಬರುವವರ ಸಂಖ್ಯೆ 4 ಸಾವಿರ ದಪ್ಪಟ್ಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಬಸ್ ಹತ್ತಲು ಮಹಿಳೆಯರು ಪರದಾಡಿದ್ದಾರೆ. ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ಕೂತು ಕೊನೆಗೆ ಬಸ್ ಬಂದಾಗ ಹತ್ತಲು ಮುಗಿಬಿದ್ದಿದ್ದಾರೆ.

ಈ ವೇಳೆ ಮಹಿಳೆ ಬಸ್‌ನಲ್ಲಿ ಸೀಟ್ ಇಲ್ಲ, ಕಾಲು ಹಾಕಲು ಕೂಡಾ ಜಾಗ ಇಲ್ಲ ಅಂತ ಕೊನೆಗೆ ಡ್ರೈವರ್ ಸೀಟ್‌ನಿಂದಲೇ ಹತ್ತಿದ್ದಾರೆ.ಇನ್ನು ರಾಮದುರ್ಗದಲ್ಲಿ ಬಸ್ ರಶ್ ಅಲ್ಲಿ ನಿಲ್ಲಲಾಗದೆ ಬಾಗಿಲ ಬಳಿ ನಿಂತಿದ್ದ ಹುಡುಗಿ ಜಾರಿ ಬಿದ್ದಿದ್ದಾಳೆ. ರಾಜ್ಯಾದ್ಯಂತ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ಇರುವ ಹಿನ್ನೆಲೆ ಧಾರ್ಮಿಕ ಸ್ಥಳವಾದ ಶೃಂಗೇರಿಗೆ ಜನರು ಹರಿದು ಬರುತ್ತಿದ್ದಾರೆ. ಅದರಲ್ಲೂ ಮಹಿಳೆಯರೇ ಹೆಚ್ಚಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ಖಾಲಿಯಿದ್ದರೂ ಅದನ್ನು ಹತ್ತದೇ ಫ್ರೀ ಪ್ರಯಾಣಕ್ಕಾಗಿ ಮಹಿಳೆಯರು ಸರ್ಕಾರಿ ಬಸ್‌ಗಳನ್ನೇ ಮುತ್ತಿಕೊಳ್ಳುತ್ತಿದ್ದಾರೆ ಹಾಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ತೊಂದರೆ ಅನುಭವಿಸುತ್ತಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

You might also like

Comments are closed.