ದೇಶದ ಬಹುಪಾಲು ಜನರಿಗೆ ಅನುಕೂಲವಾಗಲೆಂದು ಭಾರತ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಎಲ್ಲಾ ಕಾರ್ಮಿಕರಿಗೆ ಸಹಾಯ ಮಾಡಲು ಗುರುತಿನ ಚೀಟಿಯನ್ನು ನೀಡಿವೆ. ಈ ಕಾರ್ಡ್ ಅನ್ನು ಲೇಬರ್ ಕಾರ್ಡ್ ಎಂದು ಕರೆಯಲಾಗಿದೆ. ಈ ಕಾರ್ಡ್ ಫಲಾನುಭವಿಗಳಿಗೆ ಸರಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ.
ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಮಾಡಿಕೊಡಲಾಗುತ್ತದೆ. ಕಾರ್ಮಿಕ ಕಾರ್ಡ್ ಮಾಡಿಸಿಕೊಂಡರೆ ಕೆಲವು ಉಪಯೋಗಗಳಿವೆ. ಹಾಗಾದರೆ ಕಾರ್ಮಿಕ ಕಾರ್ಡ್ ಹೊಂದುವುದರಿಂದ ಸರ್ಕಾರದಿಂದ ಯಾವೆಲ್ಲಾ ಸೌಲಭ್ಯವನ್ನು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕಾರ್ಮಿಕ ಕಾರ್ಡ್ ಎನ್ನುವುದು ಕಾರ್ಮಿಕರ ಅಭಿವೃದ್ಧಿ, ಸುರಕ್ಷತೆ, ಭದ್ರತೆ, ಶಿಕ್ಷಣ ಮತ್ತು ರಕ್ಷಣೆಗಾಗಿ ಆಯಾ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾದ ಗುರುತಿನ ಚೀಟಿಯಾಗಿದೆ.
ಭಾರತದಲ್ಲಿರುವ ಲೇಬರ್ ಕಾರ್ಡ್ ಗಳ ವಿಧಗಳು
ಸಾಮಾಜಿಕ ಕಾರ್ಡ್
ಬಿಲ್ಡಿಂಗ್ ಕಾರ್ಡ್.
ಸಾಮಾಜಿಕ ಕಾರ್ಡ್ ಕೃಷಿ, ಕೃಷಿ ಮತ್ತು ಕಟ್ಟಡೇತರ ಚಟುವಟಿಕೆಗಳನ್ನು ನಿರ್ವಹಿಸುವ ಕಾರ್ಮಿಕರು ಈ ಕಾರ್ಡ್‌ಗೆ ಅರ್ಹರಾಗಿರುತ್ತಾರೆ.
ಬಿಲ್ಡಿಂಗ್ ಕಾರ್ಡ್ ಈ ಕಾರ್ಡ್ ಪರವಾನಗಿ ಪಡೆದ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿರುವವರು ಈ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಕೋವಿಡ್ 19 ಎರಡನೇ ಅಲೆಯ ಪರಿಣಾಮದ ಹಿನ್ನೆಲೆಯಲ್ಲಿ 3,000 ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಿದೆ. ಮೂರು ವರ್ಷ ಕಾರ್ಮಿಕ ಕಾರ್ಡ್ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ಸೌಲಭ್ಯ ದೊರೆಯುತ್ತದೆ. ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನು ಆಧರಿಸಿ ಎರಡು ಲಕ್ಷದವರೆಗೆ ಸಹಾಯಧನ ಸಿಗುತ್ತದೆ. ಟ್ರೈನಿಂಗ್ ಮತ್ತು ಟೂಲ್ ಕಿಟ್ ಮತ್ತು ಶ್ರಮ ಸಾಮರ್ಥ್ಯದಡಿ 20,000 ರೂಪಾಯಿ ಕೊಡಲಾಗುತ್ತದೆ.
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಸತಿ ಸೌಲಭ್ಯದಡಿ 2 ಲಕ್ಷ ರೂಪಾಯಿವರೆಗೆ ಸಹಾಯಧನ ಕೊಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವ ಮಹಿಳಾ ಫಲಾನುಭವಿಗೆ ಹೆರಿಗೆ ಸೌಲಭ್ಯದಡಿ ಮೊದಲ ಎರಡು ಮಕ್ಕಳಿಗೆ ಅಂದರೆ ಹೆಣ್ಣು ಮಗುವಿನ ಜನನಕ್ಕೆ 30,000 ರೂಪಾಯಿ ಮತ್ತು ಗಂಡು ಮಗುವಿನ ಜನನಕ್ಕೆ 20,000 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವವರು ನಿಧನರಾದಾಗ ಅಂತ್ಯಕ್ರಿಯ ವೆಚ್ಚದಡಿ 4,000 ರೂಪಾಯಿ ಮತ್ತು 50000 ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವವರ ಅವಲಂಬಿತರಿಗೆ ವೈದ್ಯಕೀಯ ಸೌಲಭ್ಯದಡಿ 300 ರೂಪಾಯಿಯಿಂದ ಹತ್ತು ಸಾವಿರ ರೂಪಾಯಿವರೆಗೆ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಅಪಘಾತ ಪರಿಹಾರದಡಿಯಲ್ಲಿ ಮರಣ ಹೊಂದಿದಲ್ಲಿ ರೂಪಾಯಿ 5 ಲಕ್ಷ , ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ 2ಲಕ್ಷ ರೂಪಾಯಿ ಮತ್ತು ಭಾಗಶಃ ದುರ್ಬಲತೆಯಾದಲ್ಲಿ 1ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗುತ್ತದೆ.
ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಥವಾ ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಪಾಸ್ ಸೌಲಭ್ಯ ಒದಗಿಸಲಾಗುತ್ತದೆ. ಕರ್ನಾಟಕ ರಾಜ್ಯದಾದ್ಯಂತ ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಯ ವಿದ್ಯಾಭ್ಯಾಸದಲ್ಲಿ ತೊಡಗಿರುವ ಇಬ್ಬರು ಮಕ್ಕಳಿಗೆ ಕೆಎಸ್ಆರ್ಟಿಸಿ ಬಸ್ ಪಾಸ್ ನೀಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿರುವ ಮಹಿಳಾ ಪಲಾನುಭವಿಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವವರೆಗೆ ವಾರ್ಷಿಕ 6000 ರೂಪಾಯಿ ನೀಡಲಾಗುತ್ತದೆ.
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಹೃದಯರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮಾ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ಸಂಬಂಧಿತ ಚಿಕಿತ್ಸೆ, ಮೂತ್ರಪಿಂಡದಲ್ಲಿ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ ಇ.ಎನ್.ಟಿ ಚಿಕಿತ್ಸೆ, ನರರೋಗ ಚಿಕಿತ್ಸೆ ಮುಂತಾದ ಶಸ್ತ್ರಚಿಕಿತ್ಸೆಗಳಿಗೆ 2 ಲಕ್ಷ ರೂಪಾಯಿವರೆಗೆ ವೈದ್ಯಕೀಯ ವೆಚ್ಚ ಸಹಾಯಧನದಡಿಯಲ್ಲಿ ಸಿಗುತ್ತದೆ. ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ 50,000 ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ. ಕಾರ್ಮಿಕ ಅನಿಲ ಭಾಗ್ಯದಡಿಯಲ್ಲಿ ಅನಿಲ ಸಂಪರ್ಕದೊಂದಿಗೆ 2 ಬರ್ನರ್ ಮತ್ತು ಸ್ಟೌವ್ ನೀಡಲಾಗುತ್ತದೆ.
-ಮಕ್ಕಳಿಗೆ ಉಚಿತ ಶಿಕ್ಷಣ,
-ಉಚಿತವಾಗಿ ಜೀವ ವಿಮೆ ಪ್ರಯೋಜನಗಳು,
-ದೊಡ್ಡ ಅಪಘಾತ ಅಥವಾ ದೊಡ್ಡ ಅಪಘಾತದ ಸಂದರ್ಭದಲ್ಲಿ ಸಾವು ಅಥವಾ ಗಾಯದ ಸಂದರ್ಭದಲ್ಲಿ ಸಹಾಯ.
-ಉಚಿತ ಆರೋಗ್ಯ ವಿಮೆ ಪ್ರಯೋಜನ,
-ಗರ್ಭಾವಸ್ಥೆಯಲ್ಲಿ ಮತ್ತು ಮಗುವಿನ ಹೆರಿಗೆಯ ಸಮಯದಲ್ಲಿ ಸಹಾಯ,
-ಸಲಿಕೆ ಮತ್ತು ಇತರ ಕೆಲಸದ ಉಪಕರಣಗಳನ್ನು ಖರೀದಿಸಲು ಹಣಕಾಸಿನ ಬೆಂಬಲ,
-ಮಗಳ ಮದುವೆಯ ಸಮಯದಲ್ಲಿ ಪ್ರಯೋಜನಗಳು,
-ಸೈಕಲ್ ಸಹಾಯವನ್ನು ಖರೀದಿಸುವುದು.
-ಮಕ್ಕಳಿಗಾಗಿ ವಿದ್ಯಾರ್ಥಿವೇತನ,
-ಕೌಶಲ್ಯಗಳ ಉನ್ನತೀಕರಣಕ್ಕೆ ಸಹಾಯ,
-ನಿರ್ಮಾಣ್ ಶ್ರಮಿಕ ಸುಲಭ್ ಆವಾಸ್ ಯೋಜನೆ,
-ಗೃಹ ಸಾಲ ಸೌಲಭ್ಯ.
-ಲೇಬರ್ ಕಾರ್ಡ್ ಗೆ ಬೇಕಾದ ಅಗತ್ಯವಾದ ದಾಖಲೆಗಳು
ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಖಾತೆ ಸಂಖ್ಯೆ, ಇಮೇಲ್ ಐಡಿ,
ಮೊಬೈಲ್ ನಂಬರ, ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ. ರಾಜ್ಯದ ಅಧಿಕೃತ ಕಾರ್ಮಿಕ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ. ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ಸಂಬಂಧಿತ ಕಾರ್ಮಿಕ ಇಲಾಖೆಯ ವೆಬ್ ಸೈಟ್ ಅನ್ನು ಕ್ಲಿಕ್ ಮಾಡಿ. ಮುಂದೆ, ಹೊಸ ಲೇಬರ್ ಕಾರ್ಡ್ ನೋಂದಣಿಗಾಗಿ ಹುಡುಕಿ. ಈಗ ಡ್ರಾಪ್ ಡೌನ್ ನಿಂದ ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿ.
ಅದರ ನಂತರ, ನಿಮ್ಮ ಮೊದಲ ಹೆಸರು, ಕೊನೆಯ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ. ನಿಮ್ಮ ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಸಾಮಾನ್ಯವಾಗಿ ವರ್ಷಕ್ಕೆ 90 ದಿನ ಕೆಲಸ ಮಾಡುವವರನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಬಹುದು. ಅವರು ತಮ್ಮ 90 ದಿನಗಳ ಪ್ರಮಾಣ ಪತ್ರಗಳ ಪಟ್ಟಿಯನ್ನು ಸಿದ್ಧಪಡಿಸುವ ಮೂಲಕ ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.