ಕಾರ್ಮಿಕ ಇಲಾಖೆ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿಸುದ್ದಿಯನ್ನು ನೀಡಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಕಲಿಕೆ ಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ಈ ಯೋಜನೆಯನ್ನು ರೂಪಿಸಲಾಗಿದೆ. ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ತಡೆಯಲು ಮತ್ತು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
Labour card benefits 2021- ಕಾರ್ಮಿಕ ಕಾರ್ಡ್ ಇದ್ದವರಿಗೆ 55,000 ರೂಪಾಯಿ ಸಹಾಯಧನ.
ಕಲಿಕೆ ಭಾಗ್ಯ ಯೋಜನೆಯಲ್ಲಿ ನರ್ಸರಿಯಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸಹಾಯಧನ ಸಿಗಲಿದೆ ಎಂದು ನೋಡೋಣ. ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನರ್ಸರಿಯಿಂದ ಹಿಡಿದು ಕಾಲೇಜು ಮಟ್ಟದ ಉನ್ನತವಾದ ಶಿಕ್ಷಣ ಪಡೆಯಲು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಿಂದ 3 ಸಾವಿರ ರೂಪಾಯಿಂದ 55 ಸಾವಿರ ರೂಪಾಯಿಗಳವರೆಗೂ ಸಹಾಯಧನವನ್ನು ಪಡೆಯಬಹುದಾಗಿದೆ.ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಯಾವೆಲ್ಲಾ ದಾಖಲಾತಿಗಳನ್ನು ಹೊಂದಿರಬೇಕು ಎಂದರೆ,
- ವಿದ್ಯಾರ್ಥಿಯ ಪೋಷಕರು ಕಾರ್ಮಿಕ ಇಲಾಖೆಯಿಂದ ನೋಂದಣಿಯಾಗಿರುವ ಬಗ್ಗೆ ಸ್ಮಾರ್ಟ್ ಕಾರ್ಡ್ ಅಥವಾ ಕಾರ್ಮಿಕ ಗುರುತಿನ ಚೀಟಿ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.
- ವಿದ್ಯಾರ್ಥಿಯ ಇತ್ತೀಚಿನ 2 ಪಾಸ್ಪೋರ್ಟ್ ಸೈಜಿನ ಫೋಟೋಗಳು.
- ವಿದ್ಯಾರ್ಥಿಯ ಅಂಕಪಟ್ಟಿ.
- ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಬಗ್ಗೆ ವ್ಯಾಸಂಗ ಪ್ರಮಾಣ ಪತ್ರ.
Labour card benefits 2021- ಕಾರ್ಮಿಕ ಕಾರ್ಡ್ ಇದ್ದವರಿಗೆ 55,000 ರೂಪಾಯಿ ಸಹಾಯಧನ.
ಈ ಎಲ್ಲಾ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಕಲಿಕೆ ಭಾಗ್ಯ ಯೋಜನೆಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳ ತಂದೆ, ತಾಯಿ ಅಥವಾ ಇತರೆ ಪೋಷಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಆಗಿರಬೇಕು. ಕಟ್ಟಡ ಕಾರ್ಮಿಕರ ಮಂಡಳಿಯಿಂದ labour office ನಲ್ಲಿ ನೋಂದಣಿಯಾಗಿರಬೇಕು.ಈ ನೋಂದಣಿ ಚಾಲ್ತಿಯಲ್ಲಿರಬೇಕು. ಅಂದರೆ ಕಾರ್ಮಿಕರ ಕಾರ್ಡ್ ಚಾಲ್ತಿಯಲ್ಲಿ ಇರಬೇಕು.
Labour card benefits 2021- ಕಾರ್ಮಿಕ ಕಾರ್ಡ್ ಇದ್ದವರಿಗೆ 55,000 ರೂಪಾಯಿ ಸಹಾಯಧನ.
ಕಲಿಕೆ ಭಾಗ್ಯ ಯೋಜನೆಯಲ್ಲಿ ಸಹಾಯಧನ ಪಡೆಯಲು ಇಚ್ಚಿಸುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕ್–https://serviceonline.gov.in/karnataka/