Kutty-Radhika

ನಾನು ಮಾಡಿದ ಆ ಒಂದು ತಪ್ಪಿನಿಂದ ಈಗಲೂ ಕಣ್ಣೀರು ಹಾಕುತ್ತಿದ್ದೇನೆ ಎಂದ ರಾಧಿಕಾ ಕುಮಾರಸ್ವಾಮಿ! ಯಾವ ತಪ್ಪು ಗೊತ್ತಾ?

Entertainment/ಮನರಂಜನೆ

ಕರಾವಳಿಯ ಬೆಡಗಿ ರಾಧಿಕಾ ಕುಮಾರಸ್ವಾಮಿ. ಇವರು ನೋಡಲು ಅಷ್ಟೇ ಸುಂದರವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ. ಇದೀಗ ನಟಿಯಾಗಿ, ನಿರ್ದೇಶಕಿಯಾಗಿಯು ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮೇಘ ಶಾಮ ‘ಚಿತ್ರದ ಮೂಲಕ ಸಿನಿಮಾರಂಗವನ್ನು ಪ್ರವೇಶ ಮಾಡಿದ ರಾಧಿಕಾ ಯಶಸ್ಸು ಕಾಣುತ್ತಾರೆ.ನಂತರ ‘ನಿನಗಾಗಿ ‘, ‘ಅಣ್ಣ ತಂಗಿ ‘, ‘ತವರಿಗೆ ಬಾ ತಂಗಿ’, ‘

ತಾಯಿ ಇಲ್ಲದ ತಬ್ಬಲಿ’ ಚಿತ್ರಗಳು ಸೂಪರ್ ಹಿಟ್ ಆಗಿ ಅಂದು ಬಾಕ್ಸ್ ಅಫೀಸನ್ನೆ ಕೊಳ್ಳೆ ಹೊಡೆದಿದ್ದವು. ಹೀಗಿದ್ದರೂ ರಾಧಿಕಾ ಅಂದು ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡು ಇದೀಗ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಆ ಅವಕಾಶವನ್ನು ನಾನು ಒಪ್ಪಿಕೊಳ್ಳಬೇಕಿತ್ತು ಎಂದಿದ್ದಾರೆ.ಅವಕಾಶ ಬೇರೆ ಯಾವುದೂ ಅಲ್ಲ ಪುನೀತ್ ರಾಜಕುಮಾರ್ ಅಂತಹ ದೊಡ್ಡ ನಟರೊಂದಿಗೆ ನಟಿಯಾಗಿ ನಟಿಸಲು ಬಂದ ಒಳ್ಳೆಯ ಅವಕಾಶ.

ಹೌದು ಮಿಲನ ಚಿತ್ರಕ್ಕೆ ನಟಿಯಾಗಿ ನಟಿಸಲು ಮೊದಲು ರಾಧಿಕಾ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ರಾಧಿಕಾ ಕುಮಾರಸ್ವಾಮಿ ಅನಾಥರು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದುದರಿಂದ ಅವರಿಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಇಲ್ಲ ಎಂದು ನಿರಾಕರಿಸಿದರಂತೆ. ಆಗ ನಾನು ಅವಕಾಶವನ್ನು ಒಪ್ಪಿಕೊಳ್ಳಬೇಕಿತ್ತು. ಆಗ ನಾನು ನಟಿಸಲು ಒಪ್ಪಿದ್ದಾರೆ ಎಂದು ಕಣ್ಣೀರು ಹಾಕುತ್ತಿರಲಿಲ್ಲ ಎಂದಿದ್ದಾರೆ.

ನಂತರ ಮಿಲನ ಚಿತ್ರಕ್ಕೆ ಪಾರ್ವತಿ ಮೆನನ್ ಅವರನ್ನು ಆಯ್ಕೆ ಮಾಡಲಾಯಿತು. ಈ ಚಿತ್ರದ ಮೂಲಕ ನಿರ್ದೇಶಕರಿಗೆ “ಮಿಲನ್ ಪ್ರಕಾಶ” ಎಂದೇ ಹೆಸರು ಬಂದಿತು. ಅಷ್ಟರಮಟ್ಟಿಗೆ ಈ ಚಿತ್ರ ಹೆಸರು ಹೆಸರು ಮಾಡಿತ್ತು. ಹಾಗೆ ಪ್ರೇಮಿಗಳಿಗೆ, ನವಜೋಡಿಗಳಿಗೆ ಒಂದು ರೀತಿಯ ಪಾಠ ಕಲಿಸಿತ್ತು. ಈ ಚಿತ್ರವನ್ನು ನಿರಾಕರಿಸಿ ನಾನು ತಪ್ಪು ಮಾಡಿದೆ ಎಂದು ಅನಿಸುತ್ತಿದೆ ಎನ್ನುತ್ತಿದ್ದಾರಂತೆ ರಾಧಿಕಾ ಕುಮಾರಸ್ವಾಮಿ

ಇದಾದ ನಂತರ ಅವರೊಂದಿಗೆ ನಟಿಸುವ ಅವಕಾಶ ನನಗೆ ಲಭಿಸಲಿಲ್ಲ ಎಂದು ಮರುಗುತ್ತಿದ್ದಾರೆ. ಅದಕ್ಕೆ ಹೇಳುವುದು ಓದುಗರೇ ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವ ಮೊದಲು ಅದರ ಕುರಿತು ತಿಳಿದುಕೊಳ್ಳಬೇಕು ಎಂದು. ನಂತರ ಮರುಗಿದರೆ ಪ್ರಯೋಜನ ಇಲ್ಲಾ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.