Kumaraswamy

ಕುಮಾರಣ್ಣನ ಕಡೆಯಿಂದ ಬಂಪರ್ ಆಫರ್ ರೈತರ ಮಕ್ಕಳನ್ನು ಮದುವೆಯಾದ್ರೆ ಸಿಗೋ ಹಣ ಎಷ್ಟು ಗೊತ್ತಾ..

Today News / ಕನ್ನಡ ಸುದ್ದಿಗಳು

ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ (Election) ಪ್ರಾರಂಭವಾಗಲಿದ್ದು ಪ್ರತಿಯೊಂದು ಪಕ್ಷಗಳು ಕೂಡ ತಮ್ಮದೇ ಆದಂತಹ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಪ್ರತಿಯೊಂದು ಪ್ರಯತ್ನವನ್ನು ಕೂಡ ಮಾಡುತ್ತಿವೆ. ಆದರೆ ಈಗ ಸದ್ದು ಮಾಡುತ್ತಿರುವುದು (HD Kumaraswamy) ಕುಮಾರಣ್ಣನ ಹೊಸ ಆಫರ್. ಅಷ್ಟಕ್ಕೂ ಆ ಆಫರ್ ಏನು ಎಂಬುದನ್ನು ತಿಳಿಯೋಣ ಬನ್ನಿ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾಗಿರುವ ಕುಮಾರಣ್ಣ ನೀಡಿರುವ ಹೊಸ ಆಫರ್ ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ರೈತರ ಮಕ್ಕಳ ಪರವಾಗಿ ಹೊಸ ಯೋಜನೆ ಯನ್ನು ತುಮಕೂರಿನಲ್ಲಿ ನಡೆದಿರುವಂತಹ ಪ್ರಚಾರದಲ್ಲಿ ಹೇಳಿಕೊಂಡಿದ್ದು ಎಲ್ಲರೂ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ.

ತುಮಕೂರಿನ ತಿಪಟೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿರುವ ಮಾತು ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಕುಮಾರಣ್ಣನ ಭರವಸೆ ರೈತರ ಮಕ್ಕಳಲ್ಲಿ ಭರವಸೆಯನ್ನು ಮೂಡಿಸಿದೆ ಎನ್ನಬಹುದಾಗಿದೆ.

ಸಾಮಾನ್ಯವಾಗಿ ಪ್ರತಿಯೊಂದು ಹೆಣ್ಣಿನ ಮನೆಯವರು ತಮ್ಮ ಮಗಳನ್ನು ಮದುವೆಯಾಗುವಂತಹ ಗಂಡು ಇಂಜಿನಿಯರ್ ಡಾಕ್ಟರ್ ರೀತಿಯಲ್ಲಿ ಕೈತುಂಬ ಸಂಪಾದನೆ ಮಾಡುವಂತಹ ಕೆಲಸದಲ್ಲಿ ಇರಬೇಕು ಎನ್ನುವುದಾಗಿ ಬಯಸುತ್ತಾರೆ. ಹೀಗಾಗಿ ರೈತರ ಮಕ್ಕಳ ಮದುವೆಯನ್ನು ಮಾಡಿಸುವುದು ಅಷ್ಟೊಂದು ಸುಲಭವಲ್ಲ ಆದರೆ ಈಗ ಕುಮಾರಣ್ಣ ಕೂಡ ಇದಕ್ಕೆ ಪರಿಹಾರವನ್ನು ನೀಡಲು ಹೊರಟಿದ್ದಾರೆ.

ಹೌದು ಗೆಳೆಯರೇ, ತುಮಕೂರಿನ ರಥಯಾತ್ರೆಯ ಸಂದರ್ಭದಲ್ಲಿ ಕುಮಾರಸ್ವಾಮಿಯವರು ರೈತರ ಮಕ್ಕಳನ್ನು ಮದುವೆಯಾದರೆ 2 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಇದು ಕೇವಲ ನಾವು ಚುನಾವಣೆಯಲ್ಲಿ ಗೆದ್ದರೆ ಮಾತ್ರ ಎಂಬುದಾಗಿ ಕೂಡ ಇದಕ್ಕೆ ಸೇರಿಸಿದ್ದಾರೆ. ಈ ಮೂಲಕ ರೈತರ ಮತವನ್ನು ಪಡೆಯಲು ಕುಮಾರಣ್ಣ ಒಳ್ಳೆ ಐಡಿಯಾ ಹಾಕಿಕೊಂಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

ಕುಮಾರಣ್ಣ ಗೆಲ್ತಾರೋ ಇಲ್ವೋ ಗೊತ್ತಿಲ್ಲ ಆದರೆ ರೈತರ ಮಕ್ಕಳ ಮದುವೆಯನ್ನು ಮಾಡಿಸುವಲ್ಲಿ ಪ್ರಯೋಗಾತ್ಮಕ ಆಫರ್ ಅನ್ನು ನೀಡಿರುವ ಕುಮಾರಣ್ಣನ ಯೋಚನಾ ಶೈಲಿ ನಿಜಕ್ಕೂ ಕೂಡ ಚೆನ್ನಾಗಿದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.