ಮೊಮ್ಮಗನ ತಲೆಗುದಲು ದೇವರಿಗೆ ಮುಡಿ ನೀಡಿ,ಬಿಸಿ ಬಿಸಿ ಇಡ್ಲಿ ಸವಿದ ಕುಮಾರಸ್ವಾಮಿ ಕುಟುಂಬ! ಮುದ್ದಾದ ವಿಡಿಯೋ ನೋಡಿ ಖುಷಿ ಪಟ್ಟ ಕನ್ನಡ ಜನತೆ!!

ರಾಜಕೀಯ ಹಾಗೂ ಸಿನಿಮಾ ಎರಡು ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ನಟ ನಿಖಿಲ್ ಕುಮಾರಸ್ವಾಮಿ ಇತ್ತೀಚಿಗೆ ಮಗ ಹುಟ್ಟಿದ ಸಂಭ್ರಮದಲ್ಲಿದ್ದಾರೆ. ಇನ್ನು ಒಂದು ವರ್ಷ ದಾಟಿದ ಮಗನಿಗೆ ನಿಖಿಲ್ ಕುಮಾರಸ್ವಾಮಿ ಮನೆ ದೇವರಿಗೆ ಮೂಡಿ ನೀಡಿ ಹರಕೆ ತೀರಿಸಿದ್ದಾರೆ. ನಿಖಿಲ್ ಕುಮಾರ ಸ್ವಾಮಿಯವರ ಇಡೀ ಕುಟುಂಬ ಈ ಸಂಭ್ರಮದಲ್ಲಿ ಭಾಗಿಯಾಗಿತ್ತು.

ಹೌದು, ನಿಖಿಲ್ ಕುಮಾರಸ್ವಾಮಿ ಈ ವರ್ಷದ ಕೃಷ್ಣ ಜನ್ಮಾಷ್ಟಮಿಯ ದಿನ ಮಗನಿಗೆ ಜುಟ್ಟು ಕಟ್ಟಿ ಸಾಂಪ್ರದಾಯಿಕ ಉಡುಗೆ ತೊಡಿಸಿ ಫೋಟೋಶೂಟ್ ಮಾಡಿಸಿ ಸಂಭ್ರಮಾಚರಣೆ ಮಾಡಿದ್ದರು. ಆದರೆ ಇದೀಗ ಸಂಪ್ರದಾಯದಂತೆ ತಮ್ಮ ಮನೆಯ ದೇವರಿಗೆ ಮಗನ ಮೂಡಿ ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಜೊತೆ ಅವರ ತಂದೆ ಹೆಚ್ ಡಿ ಕುಮಾರಸ್ವಾಮಿ ಯವರು ಕೂಡ ತಮ್ಮ ಮನೆಯ ದೇವರದ ಚೆನ್ನರಾಯಪಟ್ಟಣ ತಾಲೂಕಿನಲ್ಲಿರುವ ಯಲಿಯೂರು ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿಸಿದ್ದಾರೆ. ಮೊಮ್ಮಗನಿಗೆ ಒಳ್ಳೆಯದಾಗಲಿ ಎಂದು ವಿಶೇಷ ಪೂಜೆ ಮಾಡಿಸಿರುವ ಹೆಚ್ ಡಿ ಕುಮಾರಸ್ವಾಮಿ ಆ ದಿನಪೂರ್ತಿ ತಮ್ಮ ಇಷ್ಟದ ದೈವಿಕ ಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿದ್ದರು.

ಲಕ್ಷ್ಮಿ ದೇಗುಲದಲ್ಲಿ ಪೂಜೆಯನ್ನು ಮಾಡಿದ ಬಳಿಕ ಅಲ್ಲಿಯೇ ಮೊಮ್ಮಗನ ಮುಡಿ ಕೊಡುವ ಶಾಸ್ತ್ರ ಕೂಡ ನಡೆಸಿದರು. ಅದಾದ ಬಳಿಕ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕುಟುಂಬದವರು ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಕುಲದೇವರಾದ ದೇವೇಶ್ವರನಿಗೂ ಕೂಡ ವಿಶೇಷ ಪೂಜೆ ಸಲ್ಲಿಸಿದ್ದಾರೆ ಮೊಮ್ಮಗನಿಗೆ ಅವ್ಯಾನ ದೇವ್ ಎಂದು ಬೆಂಗಳೂರಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ್ದರು.

ಎಚ್ ಡಿ ಕುಮಾರಸ್ವಾಮಿ ಅದೇ ರೀತಿ ಈಗ ಮೂಡಿ ಕೊಡುವ ಶಾಸ್ತ್ರವನ್ನು ಕೂಡ ಬಹಳ ಶಾಸ್ತ್ರೋಕ್ತವಾಗಿ ನಡೆಸಿದ್ದಾರೆ.ಇನ್ನು ಸಂಪೂರ್ಣವಾಗಿ ಕುಟುಂಬದ ಯೋಗಕ್ಷೇಮಕ್ಕಾಗಿ ದೇವರ ಪೂಜೆ ಸಲ್ಲಿಸಲು ಬಂದಿದ್ದ ಹೆಚ್ ಡಿ ಕುಮಾರಸ್ವಾಮಿ ಅಲ್ಲಿಯೇ ತಮ್ಮ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ ಅಲ್ಲದೆ ದೇವಸ್ಥಾನದಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಪ್ರಸಾದವನ್ನು ಕೂಡ ಸ್ವೀಕರಿಸಿದ್ದು ವಿಶೇಷವಾಗಿತ್ತು.

ನಿಖಿಲ್ ಕುಮಾರಸ್ವಾಮಿ ಅವರ ಮುದ್ದಿನ ಮಗ ಅವ್ಯಾನ ದೇವ್. ಮಗನ ನಾಮಕರಣದ ಸಮಯದಲ್ಲಿಯೂ ಕೂಡ ಫೋಟೋ ಮಾಡಿಸಿರುವ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅವ್ಯಾನ್ ದೇವ್ ಜೊತೆಗಿನ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಮುದ್ದಾದ ಕುಟುಂಬಕ್ಕೆ, ಕುಮಾರಸ್ವಾಮಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ದೇವರಿಗೆ ಮಗನ ಮೂಡಿ ಅರ್ಪಿಸಿದ ನಂತರ ಸಂದರ್ಶನದಲ್ಲಿಯೂ ಕೂಡ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಈ ಮುದ್ದಾದ ಕುಟುಂಬಕ್ಕೆ ನೀವು ಪ್ರೀತಿಯಿಂದ ಹಾರೈಸಿ. ಈ ವಿಷಯದ ಬಗ್ಗೆ ನಿಮಗೆ ಏನು ಅನ್ನಿಸ್ತು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.

You might also like

Comments are closed.