ಧರ್ಮಸ್ಥಳಕ್ಕೆ ಸದ್ಯಕ್ಕೆ ಹೋಗಬೇಡಿ,ಕುಕ್ಕೆ ಸುಬ್ರಮಣ್ಯದಲ್ಲಿ ತುಂಬಿ ಹರಿಯುತ್ತಿದೆ ನದಿ,ಏನಾಗಿದೆ ಈ ವಿಡಿಯೋ ನೋಡಿ‌

ಸ್ವಲ್ಪ ದಿನ ಮಟ್ಟಿಗೆ ಧರ್ಮಸ್ಥಳಕ್ಕೆ ಹೋಗಬೇಡಿ|| ಭಾರಿ ಭಯಂಕರ ಮಳೆ!!ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಕ್ಷರ ಸಹ ಅಬ್ಬರಿಸಿ ಬೊಬ್ಬಿರಿದಿದೆ. ಮಂಗಳೂರು, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ, ಹೊರನಾಡು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಿಂದಲೂ ಸಹ ಅತ್ಯಂತ ಮಳೆ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಾವೂರಿನಲ್ಲಿ ಗುರವರ 8.30 ರಿಂದ 9 ಗಂಟೆ ಅವಧಿಯಲ್ಲಿ ಕೇವಲ ಅರ್ಧ ಗಂಟೆಯಲ್ಲಿ 6 cm ಮಳೆ ದಾಖಲಾಗಿದೆ. ಬುಧವಾರದಿಂದ ಗುರುವಾರ ಬೆಳಿಗ್ಗೆ 8:30ರ ವೇಳೆಗೆ ಉಡುಪಿ ಜಿಲ್ಲೆಯ ನಾಡಾದಲ್ಲಿ 24.8 ಸೆಂಟಿಮೀಟರ್. ದಕ್ಷಿಣ ಕನ್ನಡ ಜಿಲ್ಲೆಯ ಮಾವಳ್ಳಿಯಲ್ಲಿ 21 ಸೆಂಟಿಮೀಟರ್ ಅಧಿಕ ಮಳೆ ಸುರಿಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಕರಾವಳಿ ದಕ್ಷಿಣ ಕನ್ನಡ ಭಾಗದಲ್ಲಿ ಮಳೆ ಕ್ರಮೇಣ ಹೆಚ್ಚಾಗಿದೆ ಇದರಿಂದ ಜಿಲ್ಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶ ಪರಿಸ್ಥಿತಿ ಜನ ಜೀವನ ಅಸ್ತ ವ್ಯಸ್ತವಾಗಿದೆ.ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ನಾಲ್ಕು ದಿನ ಮುಂದುವರಿಯುತ್ತದೆ ಕರಾವಳಿಯ ಉಡುಪಿ.ದಕ್ಷಿಣ ಕನ್ನಡ, ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಜೋರು ಮಳೆ ಬೀಳಲಿದ್ದು ಇದೆ ಕಾರಣ ಶುಕ್ರವಾರ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಗುರುವಾರ ಶುಕ್ರವಾರ ಶನಿವಾರ ಕೂಡ ಆರೆಂಜ್ ಅಲರ್ಟ್ ಇದೆ.ಶನಿವಾರದಿಂದ ಮೂರು ದಿನ ಮಳೆಯ ಆರ್ಭಟ ತುಸು ಕಡಿಮೆ ಆಗುವ ಸಾಧ್ಯತೆ ಇದೆ.

ಹೀಗಾಗಿ ಈ ಮೂರು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೂಡ ವರದಿ ಮಾಡಿದೆ. ಉಜಿರೆಯಿಂದ ಧರ್ಮಸ್ಥಳಕ್ಕೆ ಸಂಪರ್ಕಿಸುವ ರಸ್ತೆಯ ಶಾಂತಿ ಭವನದ ಬಳಿ ಮಣ್ಣ ಸಂಖ್ಯೆ ಎಂಬಲ್ಲಿ ನದಿ ನೀರು ರಸ್ತೆಗೆ ಬಂದು ಅವಾಂತರ ಸೃಷ್ಟಿಸಿದೆ. ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದಾಳೆ, ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿದು ನಿಂತಿದ್ದು ವಾಹನಗಳ ಸಂಚಾರ ಸುಮಾರು 2 ಗಂಟೆಗಳ ಅಧಿಕ ಕಾಲ ಸ್ಥಗಿತ ಗೊಂಡಿತ್ತು. ಆದಕಾರಣ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ತಿಗಳ ಸಂಖ್ಯೆಯು ಹೆಚ್ಚಾಗಬಹುದು ನದಿ ನೀರು ರಸ್ತೆಗೆ ಸೇರಿದ ಕಾರಣ ಜನರಿಗೆ ತೊಂದರೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.







You might also like

Comments are closed.