ಪ್ರೀತಿ ಎಂಬುದು ಯಾವಾಗ ಯಾರ ಮೇಲೆ ಹೇಗೆ ಆಗುತ್ತದೆ ಎಂಬುದು ಹೇಳುವುದು ಕಷ್ಟ ಸಾಧ್ಯ.ಈ ಪ್ರೀತಿ ಎಂಬುದು ಹೇಗೆ ಹುಟ್ಟುತ್ತದೆ ಯಾವ ಸಮಯದಲ್ಲಿ ಯಾರ ಮೇಲೆ ಆಗುತ್ತದೆ ಊಹಿಸಲು ಕೂಡ ಸಾಧ್ಯವಿಲ್ಲ. ಈ ಪ್ರೀತಿಗೆ ಯಾವುದೇ ಜಾತಿ ಧರ್ಮಗಳಿಲ್ಲ ಹಣಕಾಸಿನ ಅವಶ್ಯಕತೆಯೂ ಇಲ್ಲ. ಹೌದು ಪ್ರೀತಿಸುವ ಒಳ್ಳೆಯ ಮನಸ್ಸು ಇದ್ದರೆ ಜಗವನ್ನೇ ಗೆಲ್ಲಬಹುದು ಎಂಬುದು ಪ್ರೇಮಿಗಳ ಲೆಕ್ಕಾಚಾರ.
ಕೆಲವು ಪ್ರೇಮಿಗಳು ಹತ್ತಾರು ವರ್ಷ ಪ್ರಯತ್ನಿಸಿ ತಮ್ಮ ಪ್ರೀತಿಯನ್ನು ಗೆದ್ದು ಮದುವೆಯಾಗುತ್ತಾರೆ ಇನ್ನು ಕೆಲವರು ತಿಂಗಳುಗಳಲ್ಲೇ ತಮ್ಮ ಮನೆಗಳಲ್ಲಿ ಒಪ್ಪಿಸಿ ಮದುವೆಯಾಗಿ ಬಿಡುತ್ತಾರೆ ಆದರೆ ಪ್ರೀತಿಯಲ್ಲಿ ಗೆದ್ದು ಸುಖ ಸಂಸಾರ ನಡೆಸುವವರಿಗಿಂತ ಪ್ರೀತಿಯಲ್ಲಿ ಸೋತು ಪ್ರಾಣ ಕಳೆದುಕೊಳ್ಳುವವರ ಮಂದಿಯೇ ಜಾಸ್ತಿ. ಆದರೆ ಕೆಲವೊಂದು ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ ಆದರೆ ಕೆಲ ನಟಿಯರು ಅದ್ಯಾಕೆ ಈ ರೀತಿ ಗೊತ್ತಿದ್ದು ಗೊತ್ತಿದ್ದು ಎರಡನೇ ಪತ್ನಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೋ ತಿಳಿಯದು ಎನ್ನುತ್ತಿದ್ದಾರೆ ಸದ್ಯ ಈಗಿನ ನೆಟ್ಟಿಗರು.
ಈಗಾಗಲೇ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಹಾಗೂ ದಕ್ಷಿಣ ಭಾರದ ಖ್ಯಾತ ನಟಿ ಪ್ರಿಯಾಮಣಿ ಸೇರಿದಂತೆ ಅನೇಕ ನಟಿಯರು ಸಿರಿವಂತ ಉದ್ಯಮಿಗಳ ಜೊತೆ ಎರಡನೇ ಮದುವೆಯಾಗಿದ್ದಾರೆ. ಅಂತೆಯೇ ಇದೀಗ ನಟಿ ಕೃತಿ ಕರಬಂಧ ಅವರ ಸರದಿಯಾಗಿದ್ದು ಕೃತಿ ಕರಬಂಧ ಕೂಡ ಇದೀಗ ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೃತಿಯವರ ಮದುವೆ ವಿಚಾರ ತಿಳಿಯುತ್ತಿದ್ದಂತೆ ಬಹಳಷ್ಟು ಅಭಿಮಾನಿಗಳು ಶುಭಾಶಯ ತಿಳಿಸಿದ್ದು ಮತ್ತಷ್ಟು ಜನ ಬೇರೆ ಹುಡುಗರೇ ಸಿಗಲಿಲ್ಲವಾ? ಅದ್ಯಾಕೆ ಹೀಗೆ ನಟಿಯರು ಎರಡನೇ ಮದುವೆ ಎನ್ನುತ್ತಿದ್ದಾರೆ.
ಹೌದು ಗೂಗ್ಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಕೃತಿ ಕರಬಂಧ ಅವರು ನಂತರ ಶಿವರಾಜ್ ಕಯಮಾರ್ ನೆನಪಿರಲಿ ಪ್ರೇಮ್ ಚಿರು ಸರ್ಜಾ ಪ್ರೇಮ್ ಹಾಗೂ ಉಪೇಂದ್ರ ಅವರ ಜೊತೆ ಅಭಿನಯಿಸಿದರು. ನಂತರ ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡ ಅವರು ಟಾಪ್ ನಟಿಯಾಗುತ್ತಾರೆ. ಇದೀಗ ಮೂವತ್ತು ವರ್ಷದ ಕೃತಿಕರಬಂಧ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಬಾಲಿವುಡ್ ನ ಖ್ಯಾತ ನಟನ ಜೊತೆ ಎರಡನೇ ಮದುವೆಯಾಗಲಿದ್ದಾರೆ.
ಅವರು ವಿವಾಹ ವಾಗುತ್ತಿರುವ ಆ ನಟ ಮತ್ಯಾರೂ ಅಲ್ಲ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ರವರು. ಹೌದು ಇವರ ಜೊತೆ ಈ ಹಿಂದೆ ಸಿನಿಮಾವೊಂದರಲ್ಲಿ ಕೃತಿ ಅಭಿನಯಿಸಿದ್ದು ಆ ಸಮಯದಲ್ಲಿಯೇ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿ ಪ್ರೀತಿಗೆ ತಿರುಗುತ್ತಿದ್ದು ಆದರೆ ವಿಚಿತ್ರ ಎಂದರೆ ಅದಾಗಲೇ ಪುಲ್ಕಿತ್ ಸಾಮ್ರಾಟ್ ಮದುವೆಯಾಗಿದ್ದು ಕಾನೂನಿನ ಮೂಲಕ ಮೊದಲ ಹೆಂಡತಿಯಿಂದ ದೂರವಾಗಿದ್ದಾರೆ. ಸದ್ಯ ಇದೀಗ ಕೃತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಇನ್ನು ನಟಿ kriti kharbanda ಸಾಮಾಜಿಕ ಜಾಲತಾಣದಲ್ಲಿ ಆಗಾಗ ತನ್ನ ಪ್ರಿಯಕರ ಜೊತೆಗಿನ ಆತ್ಮೀಯವಾಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು ತಮ್ಮ ಪ್ರೀತಿಯ ವಿಚಾರವನ್ನು ಅದಾಗಲೇ ಬಹಿರಂಗಪಡಿಸಿದ್ದಾರೆ. ಯಾವುದೇ ಕಾರ್ಯಕ್ರಮವಾಗಲಿ ಸಮಾರಂಭವಾಗಲಿ ಸಿನಿಮಾ ಸಂಬಂಧಿತ ಸಮಾರಂಭಗಳಲ್ಲಿ ಸದಾ ಒಟ್ಟಾಗಿಯೇ ಕಾಣಿಸಿಕೊಳ್ಳುವ ಜೋಡಿ ಇದೀಗ ಮದುವೆಯ ನಿರ್ಧಾರ ಮಾಡಿದ್ದಾರೆ.
ಹೌದು ಮೂವತ್ತೇಳು ವರ್ಷದ ಪುಲ್ಕಿತ್ ಸಾಮ್ರಾಟ್ ಜೊತೆ ಮೂವತ್ತು ವರ್ಷದ ನಟಿ ಕೃತಿ ಕರಬಂಧ ಸಧ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಹೌದು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ನಟಿ ಕೃತಿ ಕರಬಂಧ ಕಳೆದ 4 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಕೃತಿ ಮತ್ತು ಪುಲ್ಕಿತ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಕೃತಿ ಆಗಲಿ ಪುಲ್ಕಿತ್ ಸಾಮ್ರಾಟ್ ಆಗಿಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.