Krithi Shetty : ಸಾಮಾನ್ಯವಾಗಿ ಸಿನಿಮಾಲೋಕದಲ್ಲಿ ಗುರುತಿಸಿಕೊಂಡಿರುವ ನಟಿಯರು ಸಿನಿಮಾ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಅದಲ್ಲದೇ ಸಿನಿಮಾರಂಗದಲ್ಲಿ ಬೇಡಿಕೆಯೂ ಹೆಚ್ಚಾಗುತ್ತಿದ್ದಂತೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತವೆ. ಹೌದು, ಟಾಲಿವುಡ್ ನಲ್ಲಿ ಬಾರಿ ಬೇಡಿಕೆಯನ್ನು ಹೊಂದಿರುವ ನಟಿ ಕೃತಿ ಶೆಟ್ಟಿ (Krithi Shetty) ಯವರು ಉಪ್ಪೇನಾ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಲಗ್ಗೆ ಇಟ್ಟರು. ಇದೀಗ ತೆಲುಗು (Telugu) ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ಕೃತಿ ಶೆಟ್ಟಿ ಯವರು ಕೂಡ ಸುದ್ದಿಯಾಗಿದ್ದಾರೆ.
ಕೃತಿ ಶೆಟ್ಟಿ ಸಿನಿ ಲೋಕದಲ್ಲಿ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅದರ ಜೊತೆಗೆ ಆಗಾಗ ಫೋಟೋ ಶೂಟ್( Photoshoot) ಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ನಟಿ ಕೃತಿ ಶೆಟ್ಟಿಯವರು ಸುದ್ದಿಯಾಗಿದ್ದು, ಸ್ಟಾರ್ ನಟನ ಮಗ ಕಿ-ರುಕುಳ ನೀಡುತ್ತಿದ್ದಾರೆ ಎನ್ನುವ ವಿಚಾರವಾಗಿ. ಇಂತಹದೊಂದು ಸುದ್ದಿಯೊಂದು ಸದ್ಯಕೆ ಹರಿದಾಡುತ್ತಿದೆ.
ಸ್ಟಾರ್ ಹೀರೋ (Star Hero)ಮಗನೊಬ್ಬ ಕೃತಿ ಶೆಟ್ಟಿ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ. ಹೇಗಾದರೂ ಮಾಡಿ ಕೃತಿ ಶೆಟ್ಟಿ ಜೊತೆ ಸ್ನೇಹ ಬೆಳೆಸುವಂತೆ ಕಿ-ರುಕುಳ ನೀಡುತ್ತಿದ್ದು, ಸಿನಿಮಾ ಕಾರ್ಯಕ್ರಮದಲ್ಲೂ ಕೃತಿ ಶೆಟ್ಟಿ ಜೊತೆಯೇ ಓಡಾಡಿ ತೊಂದರೆ ಕೊಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೆ ಕೃತಿ ಶೆಟ್ಟಿಗೆ ಫೋನ್ ಮಾಡಿ ಶೂಟಿಂಗ್ ನಿಲ್ಲಿಸಿ ಬರುವಂತೆ ಒತ್ತಾಯ ಮಾಡಿದ್ದು, ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಪಾರ್ಟಿ (ಪಾರ್ಟಿ) ಗೆ ಬರುವಂತೆ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಕೃತಿ ಶೆಟ್ಟಿಯವರೇ ಹೇಳಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಈ ಬಗ್ಗೆ ರಿವೀಲ್ ಮಾಡಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Tollywood actress krithi Shetty recent news
ಅದಲ್ಲದೇ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟಿ ಆ ನಟನ ಪುತ್ರನಿಗೆ ನಾನು ಯಾವುದೇ ಪಾರ್ಟಿಗೂ ಹೋಗಲ್ಲ ಎಂದು ಫೋನ್ ಕಟ್ ಮಾಡಿದ್ದಾರೆ. ಆದರೆ Krithi Shetty ಮಾತ್ರ ಆ ಸ್ಟಾರ್ ಹೀರೋನ ಮಗ ಯಾರು ಎನ್ನುವುದು ರಿವೀಲ್ ಆಗಿಲ್ಲ. ಇತ್ತ ಫ್ಯಾನ್ಸ್ ಕೂಡ ಸ್ಟಾರ್ ಹೀರೋ ಮಗು ಯಾರಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದಾರೆ. ಅದಲ್ಲದೇ ತೆಲುಗು ನಟನ ಮಗನ ಅಥವಾ ತಮಿಳು ನಟನ ಮಗನ ಎಂದು ಅಭಿಮಾನಿಗಳು ನಟಿಗೆ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಫ್ಯಾನ್ಸ್ ನ ಯಾವುದೇ ಪ್ರಶ್ನೆಗೆ ನಟಿ ಮಾತ್ರ ಉತ್ತರ ನೀಡಿಲ್ಲ.
ನಟಿ ಕೃತಿ ಶೆಟ್ಟಿ ಮೊದಲ ಹೃತಿಕ್ ರೋಷನ್ ನಟನೆಯ ಸೂಪರ್ 30 (Super 30) ನಟಿಸಿದ್ದರು. ಈ ಸಿನಿಮಾದ ಬಳಿಕ ‘ಉಪ್ಪೇನ’ (Uppena) ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಈ ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ತಂದು ಕೊಟ್ಟಿತು. ತದನಂತರದಲ್ಲಿ ‘ಶ್ಯಾಮ್ ಸಿಂಗ್ ರಾಯ್’ (Shyam Singh Ray) ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರು. ಆದಾದ ಬಳಿಕ ನಟಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬಂದವು. ಸದ್ಯಕ್ಕೆ ನಟಿ ಕೃತಿ ಶೆಟ್ಟಿ ಕೈ ತುಂಬಾ ಪ್ರಾಜೆಕ್ಟ್ ಗಳನ್ನು ಹೊಂದಿದ್ದು, ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.