ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್‌ಗೆ ಇರುವ ಕ್ರೇಜ್ ಅನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತೆ. ಈಗಾಗೇ ಇವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಾಲೆಂಜ್ ಮಾಡಿ ಗೆದ್ದಿವೆ.
ಈಗ ‘ಕ್ರಾಂತಿ’ ಸಿನಿಮಾದ ಸರದಿ. ಕಳೆದ ಹಲವು ದಿನಗಳಿಂದ ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿರುವ ತಂಡ ಅಭಿಮಾನಿಗಳಿಗೆ ಸಪ್ರೈಸ್ ಕೊಟ್ಟಿದೆ. ಕೊನೆಯ ಹಂತದ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾದ ಅಪ್‌ಡೇಟ್‌ಗಾಗಿ ಮುಂದೆ ಓದಿ.
ದರ್ಶನ್ ಮುಂದಿನ ಸಿನಿಮಾ ‘ಕ್ರಾಂತಿ’. ವಿ.ಹರಿಕೃಷ್ಣ ನಿರ್ದೇಶಿಸುತ್ತಿರುವ ಈ ಸಿನಿಮಾ ಟಾಕಿ ಪೋಷನ್ ಸದ್ದಿಲ್ಲದೆ ನಡೆದಿತ್ತು. ಈಗ ಇಡೀ ತಂಡ ಪೋಲ್ಯಾಂಡ್‌ಗೆ ಪಯಣ ಬೆಳೆಸಿದೆ. ದರ್ಶನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಅವರ ಪುತ್ರಿ ಪ್ರೈವೆಟ್ ಜೆಟ್‌ನಲ್ಲಿ ಪಯಣ ಬೆಳೆಸಿದ್ದಾರೆ. ಕೊನೆಯ ಹಂತದ ಚಿತ್ರೀಕರಣಕ್ಕೆ ‘ಕ್ರಾಂತಿ’ ಸಿನಿಮಾ ವಿದೇಶದಲ್ಲಿ ಬೀಡು ಬಿಟ್ಟಿದೆ. ಇವರೊಂದಿಗೆ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ತಂಡ ಪ್ರತ್ಯೇಕವಾಗಿ ಪಯಣ ಬೆಳೆಸಿದೆ ಎನ್ನಲಾಗಿದೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.