kranthi-dialog-copy

ಕ್ರಾಂತಿ ಟ್ರೈಲರ್ ಅಲ್ಲಿ ಬರುವ ಡೈಲಾಗ್ ಅನ್ನು ಕಪಿಲ್ ಶರ್ಮ ಷೋ (ಮಜಾ ಟಾಕೀಸ್ ಕನ್ನಡ ಅವತರಣಿಕೆ) ಇಂದ ಕದ್ದಿದ್ದು. ಯಾರೆಲ್ಲ ಗಮನಿಸಿದ್ರಿ

CINEMA/ಸಿನಿಮಾ Entertainment/ಮನರಂಜನೆ

ಹಲವು ದಿನಗಳಿಂದ ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ಹಬ್ಬ ಬಂದಂತಾಗಿದೆ. ಇಂದು ಡಿ ಬಾಸ್ ಅಭಿನಯದ ‘ಕ್ರಾಂತಿ’ (Kranti Trailer) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಬಾರಿ ಪ್ರಮಾಣದಲ್ಲಿ ವೀಕ್ಷಕರು ಆಗಮಿಸಿದ್ದಾರೆ.

ಹೌದು… ದರ್ಶನ ಅಭಿಮಾನಿಗಳು ಹಲವು ದಿನಗಳಿಂದ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆಗೆ ಕಾತುರತೆಯಿಂದ ಇದ್ದರು. ಇದೀಗ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನರಿಂದ ವೀಕ್ಷಣೆಯಾಗಿದೆ. ಈ ಮೂಲಕ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಕ್ರಾಂತಿ ಚಿತ್ರದ ಟ್ರೈಲರ್ ನಲ್ಲಿ… ದುಷ್ಟನ ಕೈಯಿಂದ ಶಾಲೆಯನ್ನು ರಕ್ಷಿಸುವ ಶ್ರೀಮಂತನೊಬ್ಬ ತನ್ನೆಲ್ಲ ಕೆಲಸಗಳನ್ನು ಬಿಟ್ಟು, ಶತ್ರುಗಳೊಂದಿಗೆ ಹೊರಡುವ ಮಾಸ್ ಕಥಾ ಹಂದರವನ್ನು ಹೊಂದಿದೆ. ದರ್ಶನಗೆ ಎದುರಾಗಿ ರವಿಶಂಕರ್ ಖಡಕ್ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ.

ಈ ಟ್ರೈಲರ್ ಹಲವು ರಹಸ್ಯವನ್ನು ಇಟ್ಟುಕೊಂಡಿದ್ದು, ಸಿನಿಮಾ ವೀಕ್ಷಣೆಗಾಗಿ ಅಭಿಮಾನಿಗಳನ್ನು ಸೆಳೆಯುವಂತಿದೆ. ಇದರಲ್ಲಿ ರವಿಚಂದ್ರನ್, ಸುಮಲತಾ ಅಂಬರೀಷ್ ಹಾಗೂ ದಾರ್ಶನಿಗೂ ಏನು ಸಂಬಂಧ ಎಂದು ತಿಳಿಯುತ್ತಿಲ್ಲ. ಅಲ್ಲದೇ ಶ್ರೀಮಂತನೊಬ್ಬ ಶಾಲೆಯ ರಕ್ಷಣೆಗೆ ಇಳಿಯಲು ಕಾರಣಗಳೇನು ಎನ್ನುವ ಕೆಲವೊಂದಿಷ್ಟು ರಹಸ್ಯಗಳನ್ನು ಇದು ಕಾಯ್ದುಕೊಂಡಿದೆ.

ಟ್ರೈಲರ್ ನೋಡಿ ಮೆಚ್ಚಿದ ಅಭಿಮಾನಿಗಳು
ನಿನ್ನೆ ಬಿಡುಗಡೆಯಾದ ಕ್ರಾಂತಿ ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳು ಚಿತ್ರದ ಟ್ರೈಲರ್ ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಕ್ರಾಂತಿ ಚಿತ್ರದ ಟ್ರೈಲರ್ ನೋಡಿ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಇನ್ನೊಂ ದು ಇತಿಹಾಸವನ್ನ ಸೃಷ್ಟಿ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಯುಟ್ಯೂಬ್ ನಲ್ಲಿ ಸಾಧನೆ ಮಾಡಿದ ಕ್ರಾಂತಿ
ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆಯನ್ನ ಕಂಡಿರುವ ಕ್ರಾಂತಿ ಚಿತ್ರದ ಟ್ರೈಲರ್ ಆದ್ಯ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನ ಕಾಣುವುದರ ಮೂಲಕ ಯುಟ್ಯೂಬ್ ನಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು.

ಚಿತ್ರದಲ್ಲಿ ನಟ ದರ್ಶನ್ ಅವರು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದು ಈ ಚಿತ್ರದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...