kranthi

ಕ್ರಾಂತಿ ಚಿತ್ರದ ಹಾಡಿಗೆ ಕೂದಲು ಹಾರಿಸಿ ಕುಣಿದ ರಚಿತಾರಾಮ್…ಕ್ಯೂಟ್ ವಿಡಿಯೋ

CINEMA/ಸಿನಿಮಾ Entertainment/ಮನರಂಜನೆ

Rachita Ram | Shake It Pushpavathi | Kranti: ಕ್ರಾಂತಿ ಚಿತ್ರದ ಶೇಕ್ ಇಟ್ ಪುಷ್ಪವತಿ ಸಾಂಗ್ ನಿಧಾನವಾಗಿ ಸದ್ದು ಮಾಡಲು ಶುರು ಮಾಡಿದೆ. ಪಾರ್ಟಿ ನಂಬರ್‌ಗೆ ನಿಮಿಕಾ ರತ್ನಾಕರ್ ಜೊತೆ ನಟ ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಇದಿಗ ‘ಪುಷ್ಪವತಿ ಹುಕ್ ಸ್ಟೆಪ್ ಚಾಲೆಂಜ್ ಶುರುವಾಗಿದ್ದು, ಅಭಿಮಾನಿಗಳು ಶೇಕ್ ಇಟ್ ಪುಷ್ಪವತಿ ಎಂದು ಕುಣಿದು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

ಹರಿಕೃಷ್ಣ ಸಂಗೀತ ನೀಡಿರುವ ಪುಷ್ಪವತಿ ಸಾಂಗ್‌ಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಸ್ವತಃ ಹರಿಕೃಷ್ಣ ದನಿಯಾಗಿದ್ದು ಸಖತ್ ಕಿಕ್ ಕೊಡ್ತಿದೆ. ತೆಲುಗಿನ ಗಣೇಶ್ ಮಾಸ್ಟರ್‌ ಕೊರಿಯೋಗ್ರಫಿಯಲ್ಲಿ ಸಾಂಗ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಮೂಡಿ ಬಂದಿದೆ.

ದರ್ಶನ್ ಅಭಿಮಾನಿಗಳು ರಿಪೀಟ್ ಮೋಡ್‌ನಲ್ಲಿ ಸಾಂಗ್‌ ಕೇಳಿ ಎಂಜಾಯ್ ಮಾಡ್ತಿದೆ. ಕೇಳ್ತಾ ಕೇಳ್ತಾ ಮೈ ಕುಣಿಸುತ್ತಿದ್ದಾರೆ. ಇದೀಗ ಚಿತ್ರದ ನಾಯಕಿ ರಚಿತಾ ರಾಮ್ ರತ್ನಾಕರ್ ಪುಷ್ಪವತಿ ಹುಕ್ ಸ್ಟೆಪ್ ಚಾಲೆಂಜ್ ಶುರು ಮಾಡಿದ್ದಾರೆ.

ಪುಷ್ಪವತಿ ಹುಕ್ ಸ್ಟೆಪ್ ಚಾಲೆಂಜ್…

ಸಾಂಗ್ ಶೂಟಿಂಗ್ ಸೆಟ್‌ನಲ್ಲೇ ನಟಿ ರಚಿತಾ ಹಾಗೂ ನಿಮಿಕಾ ಪುಷ್ಪವತಿ‌ ಹುಕ್ ಸ್ಟೆಪ್ ಟ್ರೈ ಮಾಡಿದ್ದಾರೆ. ಅದರ ಸಣ್ಣ ಝಲಕ್ ಅನ್ನು ಇಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಚ್ಚು ರೀಲ್ ವಿಡಿಯೋ ಶೇರ್ ಮಾಡಿ ರೀಲ್ ವಿತ್ ಪುಷ್ಪವತಿ ಎಂದು ಬರೆದುಕೊಂಡಿದ್ದಾರೆ.

ಇನ್ನು ನಿಮಿಕಾ ‘ಪುಷ್ಪವತಿ ಹುಕ್ ಸ್ಟೆಪ್ ಚಾಲೆಂಜ್’ ಎಂದು ಬರೆದು ವಿಡಿಯೋ ತೇಲಿ ಬಿಟ್ಟಿದ್ದಾರೆ. ಇದೀಗ ಅಭಿಮಾನಿಗಳು ಇದನ್ನು ಫಾಲೋ ಮಾಡ್ತಿದ್ದಾರೆ.ರಚ್ಚು ಸ್ಟೆಪ್ ಗೆ ಅಭಿಮಾನಿಗಳು ವಾವ್ಹ್ ಅಂದಿದ್ದಾರೆ. ಇಂತಹ ಬಿಂದಾಸ್ ಸಾಂಗ್‌ಗಳು ಬಂದಾಗ ಹುಕ್ ಸ್ಟೆಪ್ ಚಾಲೆಂಜ್ ಸಾಮಾನ್ಯ.ಈ ಹಿಂದೆ ‘ಬಸಣ್ಣ ಬಾ’ ಹುಕ್‌ ಸ್ಟೆಪ್‌ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ‌ಶೇಕ್ ಇಟ್ ಪುಷ್ಪವತಿ ಸರದಿ. ಸೋಶಿಯಲ್ ಮೀಡಿಯಾದಲ್ಲೀಗ ಪುಷ್ಪವತಿ ಹವಾ ಜೋರಾಗಿದೆ.ರಚ್ಚು ಸ್ಟೆಪ್ ಗೆ ಅಭಿಮಾನಿಗಳು ವಾವ್ಹ್ ಅಂದಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.