koppal-farmer

ಕೇವಲ 20 ಕ್ರೇಟ್ ಟಮೋಟೊ ಮಾರಿ 58,000 ಲಾಭ ಗಳಿಸಿ ಜಾಕ್ ಪಾಟ್ ಹೊಡೆದ ಕೊಪ್ಪಳದ ರೈತ.!

Today News / ಕನ್ನಡ ಸುದ್ದಿಗಳು

ಅತ್ತೆಗೊಂದು ಕಾಲವಿದ್ದರೆ ಸೊಸೆಗೂ ಒಂದು ಕಾಲ ಬರುತ್ತದೆ ಎನ್ನುವ ಗಾದೆಯಂತೆ ರೈತನಿಗೂ ಈಗ ಒಳ್ಳೆ ಕಾಲ ಬಂದಿದೆ. ಅದರಲ್ಲೂ ಟಮೋಟೋ ಬೆಳೆದ ರೈತನಿಗಂತೂ ಇದು ಸುವರ್ಣ ಸಮಯ ಎನ್ನಬಹುದು. ಯಾಕೆಂದರೆ ರಾಜ್ಯದಲ್ಲಿ ಕಳೆದೆರಡು ವಾರದಿಂದ ಟಮೋಟೋಗೆ ವಿಪರೀತವಾಗಿ ಬೆಲೆ ಏರಿಕೆ ಆಗಿದೆ. ಈ ಕಾರಣದಿಂದ ಪ್ರತಿದಿನವೂ ಅಡುಗೆಗೆ ಬೇಕಾದ ತೀರ ಅವಶ್ಯಕತೆಯ ತರಕಾರಿ ಟಮೋಟೊ ಬೆಲೆ ಏರಿಕೆ ಆಗಿರುವುದು ಗೃಹಿಯರಿಗೆ ತುಸು ಬೇಸರ ತರಿಸಿದೆ ನಿಜ.

ಆದರೆ ಟೊಮೆಟೊ ಬೆಳೆದ ರೈತ ಮಾತ್ರ ಅಪರೂಪಕೊಮ್ಮೆ ಇಂತಹ ಬೆಲೆ ಕಂಡಿದ್ದಾನೆ. ಅನೇಕ ಕಡೆ ಮಳೆ ಹಾಗೂ ರೋಗದಿಂದ ಟೊಮೇಟೊ ಹಾಳಾದ ಕಾರಣ ಈಗ ಟೊಮೆಟೊ ಬೆಳೆದು ಮಾರಾಟಕ್ಕೆ ತಂದಿರುವ ರೈತ ಒಳ್ಳೆ ಲಾಭ ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ಟೊಮೊಟೊ ಯಾವಾಗಲೂ ಕೆಜಿಗೆ 10 ರಿಂದ 20 ರೂಪಾಯಿ ಒಳಗೆ ಸಿಗುತ್ತದೆ. ನಮಗೆ ಇಷ್ಟು ಕಡಿಮೆ ಬೆಲೆಗೆ ಸಿಕ್ಕರೆ ರೈತನಿಗೆ ಅದು ಇನ್ನು ಕಡಿಮೆ ಬೆಲೆಗೆ ಮಾರಾಟ ಆಗಿರುತ್ತದೆ.

ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಕಣ್ಣಲ್ಲಿ ಕಣ್ಣಿಟ್ಟು ಗಿಡ ನೆಟ್ಟು ಅದು ಫಲ ಕೊಟ್ಟು ಕುಯ್ದು ಮಾರ್ಕೆಟ್ಗೆ ತನಕ ಇಷ್ಟೇ ಶ್ರಮಿಸಿರುತ್ತಾನೆ. ಆದರೆ ಅನೇಕ ಬಾರಿ ಆತ ಟಮೋಟೋ ಬೆಳೆದ ಅಸಲಿಗೂ ಆಗುವುದಿಲ್ಲ ಕಡೇ ಪಕ್ಷ ಮಾರ್ಕೆಟ್ ಗೆ ಕೊಂಡೊಯ್ಯುವ ಆಟೋ ಹಾಗೂ ಬಾಕ್ಸ್ ಬಾಡಿಗೆಗೂ ಸಾಲುವುದಿಲ್ಲ ಎಂದು ಜಮೀನಿನಲ್ಲಿಯೇ ಕೊಳೆಯಲು ಬಿಟ್ಟಿ ಕಣ್ಣೀರಿಟ್ಟಿದ್ದಾನೆ, ಕಷ್ಟಪಟ್ಟು ಬಾಡಿಗೆ ಕೊಟ್ಟು ಮಾರ್ಕೆಟಿಗೆ ತಂದ ಟಮೋಟಗೆ ಬೆಲೆ ಇಲ್ಲದೆ ಹೋದಾಗ ರಸ್ತೆಯಲ್ಲಿ ಟಮೋಟೋ ಸುರಿದು ಆ’ಕ್ರೋ’ಶ ಹೊರ ಹಾಕಿದ್ದಾನೆ.

ಇಂಥಹ ಟಮೋಟೊ ಈಗ ರೈತನ ಕಣ್ಣೀರು ಒರೆಸಿದೆ, ಚಿನ್ನದ ಬೆಲೆಗೆ ಮಾರಾಟ ಆಗುವ ಮೂಲಕ ರೈತನಿಗೆ ನೆರವಾಗಿದೆ. ಈ ಬಗ್ಗೆ ಕೊಪ್ಪಳದ ರೈತರೊಬ್ಬರು ಮೊದಲ ಬಾರಿಗೆ ಇಷ್ಟು ಬೆಲೆ ಗೆ ತಮ್ಮ ಟಮೋಟೋ ಮಾರಾಟ ಆಗಿರುವ ಸಂತಸವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಕೊಪ್ಪಳ ಮೂಲದ ರೈತ ಶರಣಪ್ಪ ಕರಡಿ ಅವರು ಕನಕಗಿರಿ ಸಗಟು ಮಾರುಕಟ್ಟೆಗೆ 20 ಬಾಕ್ಸ್ ಟಮೋಟೋ ತಂದಿದ್ದಾರೆ.

ಅವರ ನಿರೀಕ್ಷೆಗೂ ಮೀರಿದ ಬೆಲೆಗೆ ಟಮೋಟ ಮಾರಾಟ ಆಗಿದೆ. ಸಾಮಾನ್ಯವಾಗಿ ಒಂದು ಬಾಕ್ಸ್ ಟಮೋಟೋ 25 ಕೆಜಿ ಇರುತ್ತದೆ. ಅವರ 1 ಬಾಕ್ಸ್ 2900ರೂ. ಬೆಲೆಗೆ ಮಾರಾಟ ಆಗುವ ಮೂಲಕ ಒಟ್ಟು 29 ಬಾಕ್ಸಿಗೆ 58,000ಗಳನ್ನು ಪಡೆದಿದ್ದಾರೆ. ರೈತ ಶರಣಪ್ಪ ಕರಡಿ ಈಗ ಜಾಕ್ ಪಾಟ್ ಹೊಡೆದ ಸಂಭ್ರಮದಲ್ಲಿದ್ದಾರೆ. ರೈತನ ಮುಖದಲ್ಲಿ ಸಂತಸ ನೋಡುವುದು ನೋಡಿಗರಿಗೂ ಕೂಡ ಆನಂದದ ವಿಷಯವೇ ಆಗಿದೆ.

ಈಗಾಗಲೇ ರಸಗೊಬ್ಬರಗಳ ಬೆಲೆ ಏರಿಕೆ, ಕೃಷಿ ಮಾಡಲು ಕೂಲಿ ಅಳುಗಳು ಸಿಗದೇ ಇರುವುದು, ಬೆಳೆ ಮಾರಲು ಮಧ್ಯವರ್ತಿಗಳ ಹಾವಳಿ, ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಇರುವುದು ಈ ಎಲ್ಲಾ ಕಾರಣದಿಂದ ಕಂಗಲಾಗಿರುತ್ತಿದ್ದ ರೈತನಿಗೆ ಅಪರೂಪಕೊಮ್ಮೆ ಲಾಭ ಆದರೆ ಆ ಖುಷಿಯನ್ನು ವಿವರಿಸಲು ಅಸಾಧ್ಯ. ನಾಡಿಗೆಲ್ಲ ಅನ್ನ ಕೊಡುವ ರೈತ ಸದಾ ಹೀಗೆ ಸಂತಸದಿಂದ ಇರಬೇಕು. ದೇಶದ ಆರ್ಥಿಕತೆಯ ಬೆನ್ನೆಲುಬು ಕೂಡ ಆಗಿರುವ ಈತ ಸಮೃದ್ಧಿಯಾಗಿದ್ದರೆ ಇನ್ನಷ್ಟು ಜನ ಕೃಷಿಯತ್ತ ಆಕರ್ಷಿತರಾಗುತ್ತಾರೆ. ಇದೇ ರೀತಿ ಅನ್ನದಾತ ಸದಾ ಸುಖವಾಗಿರಲಿ ಎನ್ನೋಣ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.