ಅಪ್ಪ ಅಮ್ಮ ಅನ್ನೋ ಎರಡು ಜೀವಗಳು ಬಹುಶಃ ಮಕ್ಕಳ ವಿಚಾರದಲ್ಲಿ ಅತ್ಯಂತ ನಿಸ್ವಾರ್ಥ ಜೀವಗಳೆನ್ನಬಹುದು.. ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಅನ್ನೋದಕ್ಕಿಂತ ಹೆಚ್ಚಾಗಿ ಮಕ್ಕಳು ಚೆನ್ನಾಗಿದ್ದರೆ ಸಾಕು ಅಂತ ಬೇಡೋ ಅದೆಷ್ಟೋ ಜೀವಗಳಿಗೆ ಮಕ್ಕಳಿಂದ ಸಾಕಷ್ಟು ನೋವೇ ದೊರೆತಿದೆ.. ಅದರಲ್ಲೂ ಮಕ್ಕಳನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದದಂತೂ ಆ ಎರಡು ಜೀವಗಳು ಹೇಗೆ ತಡೆಯಬೇಕು ಆ ನೋವನು. ಹೌದು ಮಗನಾಗಿ ಏಳು ವರ್ಷದ ಹಿಂದೆ ಮನೆಬಿಟ್ಟು ಹೋದವ ನಿನ್ನೆ ರಾತ್ರಿ ಕೋಲಾರದಲ್ಲಿ ಅವಳಾಗಿ ಅಪ್ಪ ಅಮ್ಮನಿಗೆ ಸಿಕ್ಕಿದ್ದಾನೆ. ಇಷ್ಟಾದರೆ ಪರವಾಗಿರಲಿಲ್ಲ.. ಆತ ಸಿಕ್ಕಿದ ಸ್ಥಿತಿ ನಿಜಕ್ಕೂ ಮನಕಲಕುವಂತಿತ್ತು.. ಹೌದು ಈ ಮನಕಲಕುವ ಘಟನೆ ನಡೆದಿರೋದು ಬೇರೆ ಯಾವುದೋ ಊರಲ್ಲಲ್ಲ.. ನಮ್ಮದೇ ರಾಜ್ಯದ ಕೋಲಾರದಲ್ಲಿ..

ಹೌದು ಆತನ ಹೆಸರು ಶಿವಕುಮಾರ್.. ಕೋಲಾರದ ಕೀಲುಕೋಟೆ ಬಡಾವಣೆಯ ನಾರಾಯಣಸ್ವಾಮಿ ಎಂಬುವವರ ಹಿರಿಯ ಮಗ.. ಚಿಕ್ಕ ವಯಸ್ಸಿನಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು.. ಹದಿನೆಂಟು ವರ್ಷಗಳ ಕಾಲ ಅಪ್ಪ ಅಮ್ಮನ ಜೊತೆಗೇ ಕೆಲಸ ಮಾಡಿಕೊಂಡು ಸಂತೋಷವಾಗಿಯೇ ಇದ್ದ.. ಆದರೆ ಬರುಬರುತ್ತಾ ಕೆಲ ಮಂಗಳಮುಖಿಯರ ಜೊತೆ ಸೇರಿಕೊಂಡು ಮನೆಗೆ ಬರುವುದನ್ನೇ ಬಿಟ್ಟ.. ಅತ್ತ ಶಿವಕುಮಾರ್ ನ ಅಪ್ಪ ಸಾಕಷ್ಟು ಬಾರಿ ಮಗನನ್ನು ಹುಡುಕಿಕೊಂಡು ಮನೆಗೆ ಕರೆತಂದರು.. ಆತ ಮಾತ್ರ ಮತ್ತೆ ಅದೇ ಕೆಲಸ ಮಾಡಿದ.. ಏಳು ವರ್ಷದ ಹಿಂದೆ ಮನೆಗೆ ಬಂದು ಆಧಾರ್ ಕಾರ್ಡ್ ತೆಗೆದುಕೊಂಡು ಹೋದವನು ನಿನ್ನೆ ರಾತ್ರಿ ಬೇರೆಯದ್ದೇ ಸ್ಥಿತಿಯಲ್ಲಿ ಹೆತ್ತವರಿಗೆ ಸಿಕ್ಕಿದ..

ಹೌದು ಇದು ನಿಜ ಜೀವನದ ಅವನಳ್ಳ ಅವಳು ಸಿನಿಮಾ ಕತೆ.. ಆದರೆ ಅಂತ್ಯ ಮಾತ್ರ ಯಾರೂ ಊಹಿಸದ ತಿರುವು ಪಡೆದ ಕತೆ.. ಮನೆಯ ಹಿರಿಯ ಮಗನಾಗಿ ಮನೆಯ ಜವಾಬ್ದಾರಿ ಹೊತ್ತು ಅಪ್ಪ ಅಮ್ಮನನ್ನು ನೋಡಿಕೊಳ್ಳಬೇಕಾದ ಮಗ ಅವಳಾಗಿ ಬದಲಾಗಿ ಹೋಗಿದ್ದ.. ಮನೆಬಿಟ್ಟು ಹೋದ ಶಿವಕುಮಾರ್ ವಂದನಾ ಆಗಿ ಬದಲಾಗಿದ್ದ.. ಈತ ಕಳೆದ ನಾಲ್ಕು ತಿಂಗಳ ಹಿಂದೆ ಗಾಂಧಿನಗರದ ರಾಮಚಂದ್ರಪ್ಪ ಎನ್ನುವವರ ಮನೆಯಲ್ಲಿ ಬಾಡಿಗೆಗೆ ಇದ್ದರು.. ಎಲ್ಲವೂ ಸರಿಯಾಗಿಯೇ ಇತ್ತು.. ಆದರೆ ಕಳೆದ ಎರಡು ದಿನಗಳ ಹಿಂದೆ ಕೆಲ ಹುಡುಗರು ವಂದನಾ ಮೇಲೆ ಕಣ್ಣು ಹಾಕಿದ್ದರಂತೆ.. ಅದನ್ನು ನೋಡಿ ಮನೆಯ ಓನರ್ ಆ ಹುಡುಗರನ್ನು ಬೈದುಕಳುಹಿಸಿದ್ದರಂತೆ..

ಆ ಘಟನೆಯಾದ ನಂತರ ಮಂಕಾಗಿದ್ದ ವಂದನಾ ನಿನ್ನೆ ರಾತ್ರಿ ಅದೇನಾಯಿತೋ ಏಕಾಏಕಿ ಬೇರೆಯದ್ದೇ ನಿರ್ಧಾರ ಮಾಡಿಬಿಟ್ಟಿದ್ದಳು.. ಹೌದು ತಾನೇ ಆರಿಸಿಕೊಂಡ ಈ ಬದುಕನ್ನು ಬಾಳಲಾರದೇ ನಿನೆ ರಾತ್ರಿ ಜೀವ ಕಳೆದುಕೊಂಡು ಬಿಟ್ಟಿದ್ದಳು.. ಬಾಡಿಗೆಗೆ ಮನೆ ಪಡೆಯುವ ಸಮಯದಲ್ಲಿ ತನ್ನ ಹೆತ್ತವರು ಕೋಲಾರದ ಕೀಲುಕೋಟೆಯಲ್ಲಿದ್ದಾರೆ ಎಂಬ ವಿಚಾರವನ್ನು ಮನೆಯ ಮಾಲಿಕರಿಗೆ ತಿಳಿಸಿದ್ದಳು.. ವಂದನಾ ಹೀಗೆ ಮಾಡಿಕೊಂಡದನ್ನು ನೋಡಿ ಶಾಕ್ ಆದ ಮನೆ ಮಾಲಿಕರು ತಕ್ಷಣ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.. ನಂತರ ಪೊಲೀಸರ ಮೂಲಕ ವಿಚಾರ ಶಿವಕುಮಾರ್ ನ ಹೆತ್ತವರಿಗೂ ತಲುಪಿದೆ.. ಆದರೆ ಮುಂದೆ ನಡೆದದ್ದು ಮಾತ್ರ ನಿಜಕ್ಕೂ ಮನಕಲಕುವಂತಿತ್ತು..

ಹೌದು ಮಗನನ್ನು ನೋಡಲು ಬಂದ ಹೆತ್ತವರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.. ಹೌದು ಮಗ ಮಗನಾಗಿರಲಿಲ್ಲ. ಶಿವಕುಮಾರ್ ಆಗಿದ್ದವ ವಂದನಾ ಆಗಿ ಹೋಗಿದ್ದ.. ಅದರಲ್ಲೂ ಆ ಸ್ಥಿತಿಯಲ್ಲಿ ಜೀವ ಕಳೆದುಕೊಂಡ ಮಗನನ್ನು ಕಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.. ಹೌದು ಮಗನಾಗಿ ಜೊತೆಯಲ್ಲಂತೂ ಬಾಳಲಿಲ್ಲ.. ಕನಿಷ್ಠ ಆತನ ಅಂತ್ಯ ಸಂಸ್ಕಾರವನ್ನಾದರೂ ಮಾಡಿ ಋಣ ತೀರಿಸಿಕೊಳ್ಳುತ್ತೇವೆ ಎಂದು ಹೆತ್ತವರು ಸಂಕಟ ಪಡುತ್ತಿದ್ದ ದೃಶ್ಯ ನಿಜಕ್ಕೂ ಮನಕಲಕುವಂತಿತ್ತು.. ಅತ್ತ ಮಗನಾಗಿ ಹೆತ್ತವರಿಗೂ ಸುಖ ನೀಡಲಿಲ್ಲ.. ಇತ್ತ ವಂದನಾ ಆಗಿ ಬದಲಾದ ಶಿವಕುಮಾರ್ ತಾನೂ ಸಹ ಸುಖವಾಗಿ ಬಾಳಲಿಲ್ಲ.. ಇದರಿಂದ ಯಾರಿಗೆ ನೆಮ್ಮದಿ ಸಿಕ್ಕಿತು.. ಯಾರಿಗೆ ಸಂತೋಷ ಸಿಕ್ಕಿತು.. ಏನು ಸಾಧನೆ ಮಾಡಿದರು ಎನ್ನುವುದೇ ಉತ್ತರಿಸಲಾಗದ ಪ್ರಶ್ನೆಯಷ್ಟೇ..