ಮ್ಯಾಕ್ಸವೆಲ್ ಪಾರ್ಟಿಯಲ್ಲಿ “ಊ ಅಂಟಾವಾ…” ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ ಕಿಂಗ್ ಕೊಹ್ಲಿ!

Today News / ಕನ್ನಡ ಸುದ್ದಿಗಳು

ಇತ್ತೀಚಿಗಷ್ಟೇ ಅಂದರೆ ಮಾರ್ಚ್ 27 ರಂದು ತಮಿಳುನಾಡು ಮೂಲದ ಆಸ್ಟ್ರೇಲಿಯಾ ನಿವಾಸಿ ವಿನಿ ರಾಮನ್ ಅವರನ್ನು ವಿವಾಹವಾಗಿ ಭಾರತದ ಅಳಿಯನಾಗಿ ಬಡ್ತಿ ಹೊಂದಿದ ಆಸ್ಟ್ರೇಲಿಯಾದ ಬಿಗ್ ಹಿಟರ್ ಬ್ಯಾಟಿಂಗ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸವೆಲ್ ಅವರು ನಿನ್ನೆಯಷ್ಟೇ ಅಂದರೆ ಏಪ್ರಿಲ್ 27 ರಂದು ತಮ್ಮ ಐಪಿಎಲ್ ತಂಡದ ಸದಸ್ಯರು ಹಾಗೂ ಇನ್ನಿತರೇ ಬಯೋಬಬಲ್ ನಡಿಯಲ್ಲಿ ಬರುವ ತಂಡದ ಸದಸ್ಯರಿಗೆ ಮ್ಯಾರೇಜ್ ಪಾರ್ಟಿ ಏರ್ಪಡಿಸಿದ್ದರು.

ಇದರಲ್ಲಿ ಪಾಲ್ಗೊಂಡ ತಂಡದ ಸಹ ಸದಸ್ಯರು ಸಾಕಷ್ಟು ಮೋಜು ಮಸ್ತಿಯಲ್ಲಿ ತೊಡಗಿದ್ದರು. ವಿವಿಧ ರೀತಿಯ ಪೋಷಾಕು ತೊಟ್ಟಿದ್ದ ಆರ್ಸಿಬಿ ತಂಡದ ಸದಸ್ಯರು ಮ್ಯಾಕ್ಸಿಯ ಮದುವೆ ಪಾರ್ಟಿಯನ್ನು ಸಖತ್ ಎಂಜಾಯ್ ಮಾಡಿದರು. ಇದರಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು ಕಿಂಗ್ ಕೊಹ್ಲಿ. ಆನ್ ಫೀಲ್ಡ್ ನಲ್ಲಿ ಮಿಸ್ಟರ್ ಅಗ್ರೆಸ್ಸಿವ್ ಆಗಿ ಕಾಣಿಸಿಕೊಳ್ಳುವ ಕಿಂಗ್ ಕೊಹ್ಲಿ ಆಫ್ ಡ್ರೆಸ್ಸಿಂಗ್ ರೂಮ್ ನಲ್ಲಿ ಯಾವಾಗಲೂ ಮುಗ್ದ ಮಕ್ಕಳಂತೆ ಇರುತ್ತಾರೆ.

ಅದರಂತೆಯೇ ಮ್ಯಾಕ್ಸಿಯ ಮ್ಯಾರೇಜ್ ಪಾರ್ಟಿಯಲ್ಲಿ ನೀಲಿ ಕುರ್ತಾದಲ್ಲಿ ಮಿಂಚುತ್ತಿದ್ದ ಕಿಂಗ್ ಕೊಹ್ಲಿ ಇತ್ತೀಚಿಗೆ ತೆರೆ ಕಂಡು ತನ್ನದೇ ಆದ ಹವಾ ಸೃಷ್ಟಿಸಿದ್ದ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಬರುವ ಸಮಂತಾರವರು ಸಖತ್ ಹಾ’ ಟ್ ಲುಕ್ ನಲ್ಲಿ ಸ್ಟೆಪ್ಸ್ ಹಾಕಿರುವ “ಉ ಅಂಟಾವಾ ಮಾಮಾ ಉಹು ಅಂಟಾವಾ” ಎಂಬ ಹಾಡಿಗೆ ಸಹ ಆಟಗಾರರ ಜೊತೆಗೆ ಸೇರಿ ಭರ್ಜರಿ ಸ್ಟೆಪ್ಸ್ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು RcbianOfficial ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಮೂಡ್ iamkohli ಮತ್ತು RcbTweets ಎಂಬ ಖಾತೆಗಳನ್ನು ಟ್ಯಾಗ್ ಮಾಡಿ ಇವತ್ತಷ್ಟೇ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ, ಕೇವಲ 16 ಸೆಕೆಂಡ್ ಇರುವ ಈ ವಿಡಿಯೋವನ್ನು ಇದುವರೆಗೂ 24 ಸಾವಿರಕ್ಕಿಂತಲೂ ಅಧಿಕ ಜನ ವೀಕ್ಷಿಸಿದ್ದು 7 ನೂರಕ್ಕೂ ಅಧಿಕ ಲೈಕ್ಸ್ ಬಂದಿವೆ.

ಅಲ್ಲದೇ ಈ ವಿಡಿಯೋ ಮೇಲೆ ಸಾಕಷ್ಟು ಜನರು ಕಾಮೆಂಟ್ಸ್ ಮಾಡಿದ್ದು, ಒಬ್ಬ ಯೂಸರ್ ‘ನಾಗ್ಸ್ ಈ ಕಡೆ ಇದ್ದಾನೆ ಆತ ಮಧ್ಯ ಸೇವಿಸಿದಂತೆ ಕಾಣುತ್ತಾನೆ, ಎಂದು ಬರೆದುಕೊಂಡಿದ್ದರೆ, ಮತ್ತೊಬ್ಬ ‘ಇದೇ ಕಾರಣ RCB ಮ್ಯಾಚ್ ಗಳಲ್ಲಿ ಫೇಲ್ ಆಗಲು’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಯೂಸರ್ ಇದನ್ನೇ ಮಾಡಿ ನೀವು ಎಂದು ಬರೆದಿದ್ದರೆ, ಇನ್ನೊಬ್ಬರು ಮೊದಲು ಮ್ಯಾಚ್ ಗೆಲ್ಲುವುದು ಕಲಿಯಿರಿ ನಂತರ ಇಂತಹ ಕೆಲಸ ಮಾಡಿ ಎಂದು ಇನ್ನೊಬ್ಬ ಯೂಸರ್ ಬರೆದುಕೊಂಡಿದ್ದಾರೆ.

ಆ ವಿಡಿಯೋ ಕೆಳಗಿದೆ ನೋಡಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ದೈತ್ಯ ಹೆಬ್ಬಾವಿನೊಂದಿಗೆ ಪುಟ್ಟ ಬಾಲಕಿಯ ಸರಸ,ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ..!