Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಕೀರ್ತಿ ಸುರೇಶ್ (Keerthi Suresh). ಮಹಾನಟಿ ಸಿನಿಮಾ ಮೂಲಕ ತಮ್ಮ ನಟನೆಯ ಸಾಮರ್ಥ್ಯ ಏನು ಎಂದು ತೋರಿಸಿದ ಕೀರ್ತಿ ಸುರೇಶ್ ಅವರು, ಆ ಸಿನಿಮಾ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. ಆದರೆ ಕೀರ್ತಿ ಸುರೇಶ್ ಅವರಿಗೆ ಮಹಾನಟಿ (Mahanati) ನಂತರ ಹೇಳಿಕೊಳ್ಳುವಂತ ದೊಡ್ಡ ಹಿಟ್ ಸಿಕ್ಕಿಲ್ಲ, ಹಲವು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ಕೆರಿಯರ್ ನಲ್ಲಿ ಬಿಗ್ ಹಿಟ್ ಸಿಕ್ಕಿಲ್ಲ. ಹಾಗಾಗಿ ಕೀರ್ತಿ ಸುರೇಶ್ ಅವರು ಸ್ವಲ್ಪ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ದೊಡ್ಡ ನಾಯಕರ ಜೊತೆಗೆ ಕೊಂಚ ಗ್ಲಾಮರಸ್ ಆಗಿ ಕಾಣಿಸಿಕೊಂಡರು ಕೂಡ, ದೊಡ್ಡದಾಗಿ ಯಶಸ್ಸು ಸಿಗಲಿಲ್ಲ.
ಈ ರೀತಿ ಅವಕಾಶಗಳು ಕಡಿಮೆಯಾದ ಕಾರಣ ಕೀರ್ತಿ ಸುರೇಶ್ ಅವರು ಇನ್ನು ತಾವು ಯಾವುದೇ ಪಾತ್ರಕ್ಕೂ ಸಿದ್ಧ ಎನ್ನುವ ಹಾಗೆ, ಕೆಲವು ಹಾಟ್ ಫೋಟೋಶೂಟ್ ಗಳನ್ನು ಮಾಡಿಸಿಕೊಂಡು, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಅವಕಾಶಕ್ಕಾಗಿಯೇ ಕೀರ್ತಿ ಸುರೇಶ್ ಅವರು ಈ ರೀತಿ ಮಾಡುತ್ತಿದ್ದಾರೆ ಎಂದೇ ಭಾಸವಾಗಿತ್ತು. ಅದೇ ಸಮಯದಲ್ಲಿ ಕೀರ್ತಿ ಸುರೇಶ್ ಅವರು ಮಹೇಶ್ ಬಾಬು (Mahesh Babu) ಅವರೊಡನೆ ನಟಿಸಿದ ಸರ್ಕಾರು ವಾರಿ ಪಾಟ (Sarkaru Vaari Paata) ಸಿನಿಮಾ ತೆರೆಕಂಡಿತು, ಇದರಲ್ಲಿ ಕೀರ್ತಿ ಸುರೇಶ್ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡರು ಕೂಡ, ಈ ಸಿನಿಮಾ ಕೂಡ ಸಕ್ಸಸ್ ಕಾಣಲಿಲ್ಲ. ಇದನ್ನು ಓದಿ..
ಆದರೆ ಕೀರ್ತಿ ಸುರೇಶ್ ಅವರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಈಗ ಕೀರ್ತಿ ಸುರೇಶ್ ಅವರಿಗೆ ತಮಿಳಿನ ಖ್ಯಾತ ನಟ ಸೂರ್ಯ (Surya) ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಇದು ಬಹಳ ಬೋಲ್ಡ್ ಆದ ಪಾತ್ರವಂತೆ, ಈ ಸಿನಿಮಾದಲ್ಲಿ ಸೂರ್ಯ ಅವರೊಡನೆ ಹೆಚ್ಚು ರೊಮ್ಯಾಂಟಿಕ್ ದೃಶ್ಯಗಳು ಇರಲಿದೆಯಂತೆ. ಹಾಗಾಗಿ ಕೀರ್ತಿ ಸುರೇಶ್ ಅವರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಆದರು ಕೀರ್ತಿ ಸುರೇಶ್ ಅವರಿಗೆ ಸಕ್ಸಸ್ ತಂದುಕೊಡುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..