ಬಿಗ್ ಬಾಸ್ ಸೀಸನ್ 4ರ ರನ್ನರ್ ಅಪ್.. ನಿರೂಪಕ, ನಟ ಹಾಗೂ ಕನ್ನಡಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಕಿರೀಕ್ ಕೀರ್ತಿ ಅವರ ಬಾಳಲ್ಲಿ ಇದೀಗ ಬಿರುಗಾಳಿ ಎದ್ದಿದೆ.. ಹೌದು ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತಾ ಕೀರ್ತಿ ಅವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಈಗ ಬಹಿರಂಗವಾಗಿದ್ದು.. ಸಧ್ಯ ಅರ್ಪಿತಾ ಕೀರ್ತಿ ಅವರು ಕೀರ್ತಿ ಅವರ ಮನೆಯಲಿಲ್ಲ.. ಬದಲಿಗೆ ಮಗನ ಜೊತೆಯಾಗಿ ತಮ್ಮ ತಂದೆಯ ಮನೆಯಲ್ಲಿ ನೆಲೆಸಿದ್ದಾರೆ.. ಪ್ರೀತಿಸಿ ಮದುವೆಯಾದ ಜೋಡಿಯ ಬಾಳಲ್ಲಿ ನಿಜಕ್ಕೂ ಏನಾಯಿತು.. ಅಷ್ಟು ಅನ್ಯೂನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಈ ಇಬ್ಬರ ನಡುವೆ ವೈಮನಸ್ಸೇಕೆ ಎಂಬ ಮಾಹಿತಿ ಇಲ್ಲಿದೆ..
ಹೌದು ಅರ್ಪಿತಾ ಹಾಗೂ ಕೀರ್ತಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದವರು.. ಇವರ ಪ್ರೇಮ್ ಕಹಾನಿ ಸಾಕಷ್ಟು ಶೋಗಳಲ್ಲಿ ಇಬ್ಬರೂ ಸಹ ಹೇಳಿಕೊಂಡಿದ್ದು ಮದುವೆಯ ಸಮಯದಲ್ಲಿ ಸಾಕಷ್ಟು ವಿರೋಧಗಳ ನಡುವೆಯೂ ಇವರೇ ಬೇಕು ಎಂದು ಹಟ ಹಿಡಿದು ಸಾಕಷ್ಟು ದಿನ ಊಟ ಬಿಟ್ಟು ಮದುವೆಯಾಗಿದ್ದವರು.. ಆದರೆ ಮದುವೆಯಾದ ನಂತರ ಬದುಕು ನಿಜವಾದ ಪಾಠಗಳನ್ನು ಕಲಿಸಲಾರಂಭಿಸಿತು.. ಜೊಇವನದಲ್ಲಿ ಸಾಕಷ್ಟು ಏರುಪೇರುಗಳಾದವು.. ಕೀರ್ತಿ ಆರ್ಥಿಕವಾಗಿ ಸಾಕಷ್ಟು ತೊಂದರೆಗೆ ಒಳಗಾಗಿದ್ದರು.. ಅವರ ಜೀವನಶೈಲಿಯು ಒಂದು ಹಂತ ಕೆಳಗೆ ಬಂದಿತ್ತು.. ಆದರೆ ಅರ್ಪಿತಾ ಅವರು ಮಾತ್ರ ಸದಾ ಕೀರ್ತಿ ಅವರ ಜೊತೆಯಾಗಿ ನಿಂತಿದ್ದರು..
ಇನ್ನು ದಿನಗಳು ಕಳೆದಂತೆ ಅವರ ಜೀವನ ಸುಧಾರಿಸಿತ್ತು.. ಇತ್ತ ಬಿಗ್ ಬಾಸ್ ಗೂ ಕಾಲಿಟ್ಟ ಕೀರ್ತಿ ರನ್ನರ್ ಅಪ್ ಆಗಿ ಹೊರ ಬಂದರು.. ಬಿಗ್ ಬಾಸ್ ನಿಂದ ಬಂದ ನಂತರ ಶೋಗಳಲ್ಲಿ ನಿರೂಪಕರಾಗಿ ಹಾಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಂಡಿದ್ದರು.. ಇನ್ನು ಇತ್ತ ಅರ್ಪಿತಾ ಅವರೂ ಕೂಡ ತೆರೆ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿದ್ದು ಧಾರಾವಾಹಿಯಲ್ಲಿಯೂ ಅವಕಾಶ ದೊರಕಿತ್ತು.. ನಂತರ ಸೂಪರ್ ಜೋಡಿ ಶೋ ನಲ್ಲಿಯೂ ಈ ಜೋಡಿ ಭಾಗವಹಿಸಿದ್ದು ಇಬ್ಬರ ಕುಟುಂಬದವರೂ ಸಹ ಒಂದು ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು.. ಇಬ್ಬರು ಸಾಕಷ್ಟು ಕಷ್ಟ ಪಟ್ಟು ಈ ಹಂತಕ್ಕೆ ಬಂದ ವಿಚಾರಗಳನ್ನೆಲ್ಲಾ ತಿಳಿಸಿದ್ದರು.. ಇವರಿಗೆ ಆವಿಷ್ಕಾರ್ ಎಂಬ ಮುದ್ದು ಮಗನೂ ಸಹ ಇದ್ದು ನೋಡುವವರ ದೃಷ್ಟಿ ಬೀಳುವಷ್ಟು ಚೆನ್ನಾಗಿತ್ತು ಈ ಕುಟುಂಬ.. ಆದರೆ ನೋಡಲು ಚೆನ್ನಾಗಿರುವ ಎಲ್ಲಾ ಕುಟುಂಬಗಳೂ ಸುಖವಾಗಿ ಇರೋದಿಲ್ಲ ಎನ್ನುವುದಕ್ಕೇ ಈ ಜೋಡಿಯ ಜೀವನವೇ ನಿಜವಾದ ಉದಾಹರಣೆ.. ಒಳಗೆ ತಮ್ಮದೇ ಆದ ಸಾಕಷ್ಟು ಕಷ್ಟಗಳನ್ನು ನೌಭಬಿಸುತ್ತಾ ಸಮಾಜದ ಮುಂದೆ ನಗುತ್ತಾ ಬಾಳುವಂತಿತ್ತು..
ಹೌದು ಈಗ ಕೀರ್ತಿ ಮತ್ತು ಅರ್ಪಿತಾ ಇಬ್ಬರೂ ಸಹ ದೂರಾಗಿರೋದು ನಿಜ.. ಈ ಬಗ್ಗೆ ಇಬ್ಬರೂ ನೇರವಾಗಿ ಹೇಳದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ.. ಅತ್ತ ಅರ್ಪಿತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ಕೀರ್ತಿ ಎಂಬ ಹೆಸರನ್ನು ತೆಗೆದು ಹಾಕಿದ್ದಾರೆ.. ಕಳೆದ ಆರೇಳು ತಿಂಗಳುಗಳಿಂದಲೂ ಇಬ್ಬರು ಒಟ್ಟಾಗಿ ಇಲ್ಲ ಎಂದು ತಿಳಿದು ಬಂದಿದೆ.. ಅದರಲ್ಲೂ ಇಬ್ಬರೂ ದೂರಾಗಿರೋದರ ಬಗ್ಗೆ ಜನರು ಕೇಳುವರೆಂದು ಕಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿ ಪೋಸ್ಟ್ ಗಳು ವೀಡಿಯೋಗಳನ್ನು ಹಾಕುತ್ತಿದ್ದಾರೆ.. ಹೌದು ಮೊದಲಿಗೆ ಕೀರ್ತಿ ಅವರು ಒಂದಷ್ಟು ದಿನಗಳ ಹಿಂದೆ “ವ್ಯಯಕ್ತಿಕ ಜೀವನದಲ್ಲಿ ಆದ ಘಟನೆಯಿಂದಾಗಿ ಜೀವನವನ್ನು ಮುಗಿಸುವ ನಿರ್ಧಾರಕ್ಕೂ ಬಂದಿದ್ದೆ.. ಆದರೆ ಮತ್ತೆ ಜೀವನದಲ್ಲಿ ಗೆಲ್ಲಬೇಕೆಂದು ಬರುತ್ತಿದ್ದೇನೆ” ಎಂದು ಪೋಸ್ಟ್ ಹಾಕಿದ್ದರು.. ಅದಾದ ಕೆಲವೇ ದಿನಗಳ ನಂತರ “ಕಳೆದ ಕೆಲವು ತಿಂಗಳುಗಳಿಂದ ಯಾವುದೂ ಸರಿ ಇರಲಿಲ್ಲ.. ವ್ಯಯಕ್ತಿಕ ಕಾರಣಗಳಿಂದ ಕುಸಿದಿದ್ದೆ..ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರಲಿಲ್ಲ.. ಸ್ನೇಹಿತರುಗಳನ್ನು ಭೇಟಿ ಮಾಡಿರಲಿಲ್ಲ.. ಸಿನಿಮಾ ಕೆಲಸಗಳು ಮುಂದೆ ಸಾಗಲಿಲ್ಲ.. ಒಟ್ಟಿನಲ್ಲಿ ಯಾವುದೂ ನೆಟ್ಟಗಿರಲಿಲ್ಲ.. ಆಗಿದ್ದನ್ನು ಆಗೋದನ್ನು ನೆನೆದು ಕುಗ್ಗಿದ್ದೆ.. ಆದರೆ ಅದಕ್ಕೆಲ್ಲಾ ಫುಲ್ ಸ್ಟಾಪ್ ಇಡುವ ಸಮಯ ಬಂತು.. ಮತ್ತೆ ಎಲ್ಲವೂ ಹಳೆಯ ಹುರುಪಿನಲ್ಲಿಯೇ ಶುರುವಾಗುತ್ತದೆ.. ಮತ್ತೆ ನನ್ನ ಮುಖದ ಮೇಲೆ ಈ ನಗು ವಾಪಸ್ ಬರುತ್ತದೆ.. ನನ್ನ ಮೇಲೆ ನಂಬಿಕೆ ಇಟ್ಟವರ ನಂಬಿಕೆಗಳಿಗೆ ಜೀವ ಬರಲಿದೆ.. ಸಿನಿಮಾ ಕೆಲಸಗಳು ಮತ್ತೆ ವೇಗ ಪಡೆದುಕೊಳ್ಳುತ್ತದೆ.. ಅಸಾಧ್ಯವಾದದ್ದು ಸಾಧ್ಯವಾಗುತ್ತದೆ.. ನೆಮ್ಮದಿಯ ನಿದ್ರೆ ಕಣ್ಣಿಗೆ ಹತ್ತುತ್ತದೆ.. ಬೇಕಿರೋದು ನಿಮ್ಮದೊಂದು ಆಶೀರ್ವಾದ.. ಮತ್ತು ಹಾರೈಕೆ.. ನನ್ನ ಜೊತೆಗಿರಿಸಾಕು.. ನನ್ನಶಕ್ತಿಯೇ ನೀವು.. ಸಧ್ಯದಲ್ಲಿಯೇ ನಿಮ್ಮ ಸಿನಿಮಾವನ್ನು ನಿಮ್ಮ ಎದುರಿಗೆ ಇಡ್ತೀನಿ.. ನಿಮಗೆ ಇಷ್ಟವಾಗುವ ಹಾಗೆ.. ನನ್ನಿಂದ ಬೇಜಾರು ಮಾಡಿಕೊಂಡ ಎಲ್ಲರಿಗೂ ಕೇಳೋದಿಷ್ಟೇ ಕ್ಷಮಿಸಿ.. ಇನ್ನು ಮುಂದೆ ಹಾಗೆ ಆಗಲ್ಲ.. ” ಎಂದಿದ್ದರು..
ಇನ್ನು ಮತ್ತೆ “ಆದದ್ದೆಲ್ಲಾ ಒಳ್ಳೆಯದಕ್ಕೇ.. ಆಗೋದೆಲ್ಲಾ ಒಳ್ಳೆಯದಕ್ಕೇ.. ಮರೆತು ಮುನ್ನುಗ್ಗುತ್ತಿದ್ದರಷ್ಟೇ ಯಶಸ್ಸು” ಎಂದು ಪೋಸ್ಟ್ ಮಾಡಿದ್ದರು.. ಅಷ್ಟೇ ಅಲ್ಲದೇ ಮಗನನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ಫೋಟೋ ಹಂಚಿಕೊಂಡಿದ್ದು.. ಹೋದವರ ಪಡೆದುಕೊಳ್ಳುವ ಪ್ರಯತ್ನದಲ್ಲಿ ನಿನ್ನನ್ನು ನೀನು ಕಳೆದುಕೊಳ್ಳಬೇಡ ಎಂದು ಬರೆದಿದ್ದು ಅರ್ಪಿತಾ ತಮ್ಮ ಜೀವನದಿಂದ ಹೋಗಿರುವುದು ಅದಾಗಲೇ ಎಲ್ಲರಿಗೂ ತಿಳಿಯುವಂತಾಗಿತ್ತು..
ಕಳೆದು ಹೋದ ಕೆಟ್ಟ ನೆನಪುಗಳು ಇಂದಿನ ಸಂತೋಷವನ್ನು ಹಾಳು ಮಾಡದಿರಲಿ.. ಎಂದಿದ್ದರು.. ಅಷ್ಟೇ ಅಲ್ಲದೇ ಇದೆಲ್ಲಾ ನೋವುಗಳಿಂದ ಹೊರ ಬರಲು ದೇವಸ್ಥಾನಗಳ ಪ್ರವಾಸ ಕೈಗೊಂಡಿದ್ದು ಅದೇ ಸಮಯಕ್ಕೆ ಮಗನ ಹುಟ್ಟುಹಬ್ಬದ ದಿನ ಬಂದಿದ್ದು ಮಗನ ಜೊತೆಯಿಲ್ಲ ಎಂದು ಮಗನ ಬಳಿ ಕ್ಷಮೆ ಕೇಳುವ ಪೋಸ್ಟ್ ಸಹ ಮಾಡಿದ್ದರು.. ಇದರ ಜೊತೆಗೆ ಮಾತು ಮುರಿದೆ ಹಾಡಿಗೆ ರೀಲ್ಸ್ ಮಾಡಿ ಹಾಕಿದ್ದು.. ಕಳ್ಳಿ ಹೂ ಪೂಜೆಗಲ್ಲ.. ಕಾಳಿಂಗ ಸಾಕಲಲ್ಲ ಎಂದು ಬೇರೆ ರೀತಿಯಾಗಿ ಅರ್ಪಿತಾ ಅವರ ಕುರಿತು ಹೇಳಿಕೊಂಡಿದ್ದು.. ನಿನ್ನೆ ವೀಡಿಯೋ ಮೂಲಕ ಮಾತನಾಡಿ ಕಳೆದ ಸಾಕಷ್ಟು ದಿನಗಳಿಂದ ಕುಗ್ಗಿದ್ದೆ.. ಈಗ ಅದೆಲ್ಲದರಿಂದ ಹೊರಗೆ ಬರ್ತಾ ಇದೀನಿ.. ಎಲ್ಲಾ ಕೆಟ್ಟದ್ದು ಒಳ್ಳೆಯದಕ್ಕೇ ಆಗತ್ತೆ ಅನ್ನೋ ಹಾಗೆ.. ಇಗ ನನಗೂ ಒಳ್ಳೆಯದಾಗ್ತಾ ಇದೆ.. ಅದೊಂದು ಘಟನೆ ನಂತರ.. ನನಗೆ ಎಲ್ಲವೂ ಒಳ್ಳೆಯದೇ ಆಗ್ತಾ ಇದೆ.. ಏನಾಯ್ತು ಅಂತ ಸಧ್ಯಕ್ಕೆ ಹೇಳೊ ಪರಿಸ್ಥಿತಿಯಲ್ಲಿ ಇಲ್ಲ.. ಮುಂದೆ ಸಮಯ ಬಂದಾಗ ಹೇಳ್ತೀನಿ ಎಂದಿದ್ದಾರೆ..
ಇತ್ತ ಕೀರ್ತಿ ಅವರ ಸಾಲು ಸಾಲು ಪೋಸ್ಟ್ ಗಳ ನಡುವೆಯೇ ಅರ್ಪಿತಾ ಅವರು ಸಹ ಕೆಲವೊಂದು ವಿಚರಾಗಳನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು “2022 ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ ಎಂದಿದ್ದಾರೆ.. ಜೊತೆಗೆ ” ಸೂತ್ರದಾರನ ಜೊತೆಗೆ ಸಮರ.. ತಡೆಯಲಾಗದೇ ಈ ಪ್ರಹಾರ ಹಾಡನ್ನು ಹಾಕಿಕೊಂಡು.. “ಯಾರು ಇದಕೆ ಹೊಣೆಯೋ.. ಯಾರು ಬಯಸದ ಕೊನೆಯೋ.. ತ್ಯಜಿಸುವೆ ಶಪಿಸುವೆ ಕ್ಷಮೆ ಇರದ ಬರವಣಿಗೆ.. ಎಂದು ಬರೆದಿದ್ದು ಇನ್ನು ಕೀರ್ತಿ ಅವರ ನಿನ್ನೆ ಆಡಿದ “ನನ್ನ ಜೀವನದಲ್ಲಿ ಕೆಟ್ಟ ಘಟನೆ ನಡೆದ ನಂತರ ಎಲ್ಲವೂ ಒಳ್ಳೇದೆ ಆಗ್ತಿದೆ ಅನ್ನೋ ಮಾತುಗಳಿಗೆ ಉತ್ತರ ಕೊಟ್ಟಂತೆ ಅರ್ಪಿತ ಆವರು “ನಮ್ಮನ್ನು ಕುಗ್ಗಿಸಲು ಪ್ರಯತ್ನ ಮಾಡುವ ವ್ಯಕ್ತಿಗಳನ್ನು ನಾವು ಪದೇ ಪದೇ ತಡೆದುಕೊಳ್ಳುವ ಅಗತ್ಯ ಇಲ್ಲ.. ಅವರು ಎಷ್ಟೇ ಗೊತ್ತಿರುವ ವ್ಯಕ್ತಿ ಆಗಿರಲಿ.. ಎಷ್ಟೇ ದಿನಗಳಿಂದ ಜೊತೆಯಿದ್ದವರಾಗಿರಲಿ.. ಅಥವಾ ಈ ಹಿಂದೆ ಅವರು ನಮ್ಮ ಜೊತೆ ಎಷ್ಟೇ ಮೃದುವಾಗಿ ನಡೆದುಕೊಂಡಿರಲಿ.. ನಾವು ಏನೆಂಬುದರ ಬಗ್ಗೆ ನಾವು ಬೌಂಡರಿ ಹಾಕಿಕೊಳ್ಳಬೇಕೇ ಹೊರತು.. ಮತ್ತೊಬ್ಬರನ್ನು ಸಹಿಸಿಕೊಳ್ಳುವ ಬಗ್ಗೆ ಅಲ್ಲ..
ಮೊದಲು ನಮಗೆ ನಾವು ಪ್ರಾಮುಖ್ಯತೆ ನೀಡಬೇಕು.. ನಮ್ಮತನಕ್ಕೆ ನಾವು ಗೌರವ ಕೊಡಬೇಕು.. ನಮ್ಮ ಹೃದಯ ಕೆಲವರನ್ನು ಒಪ್ಪಿಕೊಳ್ಳಲು ಸಾಧ್ಯ ಆಗದೇ ಇದ್ದಾಗ ಅಂತಹ ಸಂಬಂಧಗಳನ್ನು ಕಡಿದು ಮುಂದೆ ಸಾಗಬೇಕು.. ಜೀವನ ತುಂಬಾ ಅನ್ಪ್ರೆಡಿಕ್ಟಬಲ್.. ಕೆಲವೊಂದು ಸಮಯ ನಾವು ಗುಡ್ ಬೈ ಹೇಳಲು ಕೂಡ ಆಗೋದಿಲ್ಲ.. ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ..
ಒಟ್ಟಿನಲ್ಲಿ ನಗುವ ಸಾಕಷ್ಟು ಮುಖದ ಹಿಂದೆ ಹೇಳಿಕೊಳ್ಳಲಾಗದಷ್ಟು ನೋವಿರುತ್ತದೆ.. ಸಹಿಸುವಿಕೆ ಇರುತ್ತದೆ.. ಸಮಾಜದ ಮುಂದೆ ಸಂತೋಷವಾಗಿರುವವರ ಅದೆಷ್ಟೋ ಜನರ ಜೀವನ ನಿಜವಾಗಿ ಸಾಕಷ್ಟು ಪೆಟ್ಟುಗಳನ್ನು ತಿನ್ನುತ್ತಿರುತ್ತದೆ ಎಂಬುದು ಸತ್ಯವಷ್ಟೇ..