ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬೊಬ್ಬರ ಬದುಕು ಒಂದೊಂದು ರೀತಿ ಇರುತ್ತದೆ. ಹೀಗೆ ಇವರ ಬದುಕು ಎಂದು ಹೇಳಲು ಆಗುವುದಿಲ್ಲ. ಕೆಲವರದ್ದು ದುರಂತ ಕಥೆ ಗಳಾದರೆ, ಮತ್ತಷ್ಟು ಜನರದ್ದು ಉತ್ತಮ ಬದುಕು ಅವರದ್ದಾಗಿರುತ್ತದೆ. ಸಿಲ್ಕ್ ಸ್ಮಿತಾ, ಮಂಜುಳ, ಕಲ್ಪನಾ ಅವರ ಬದುಕು ದುರಂತ ಅಂತ್ಯವ ನ್ನು ಕಂಡಿದೆ. ಅದೇ ಸಾಲಿಗೆ ಈಗ ಮತ್ತೊಬ್ಬ ನಟಿ ಬಂದು ನಿಂತಿದ್ದಾರೆ. ಅವರೇ ಕಿರಣ್ ರಾಥೋಡ್. ಈ ನಟಿ ಯಾರು ಎಂದು ನೆನಪಿಸಿಕೊಳ್ಳಬೇಕು ಎಂದರೆ, ಕ್ಷಣ ಕ್ಷಣ ಚಿತ್ರವನ್ನು ನೆನಪಿಸಿಕೊಳ್ಳಿ.
ಉತ್ತರ ಭಾರತದ ಕಿರಣ್ ರಾಥೋಡ್ ಅವರು ಮಾಡೆಲಿಂಗ್ ಕ್ಷೇತ್ರದಿಂದ ಬಂದವರು. ಬಳಿಕ ಪಾಪ್ ಸಾಂಗ್ ಗಳಲ್ಲಿ ಮಿಂಚುತ್ತಿದ್ದರು. ಕಿರಣ್ ರಾಥೋಡ್ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚಿ ಮರೆಯಾದವರು. ಬಾಲಿವುಡ್ ನಟಿ ರವೀನಾ ಟಂಡನ್ ಇವರ ಸಂಬಂಧಿಯಾಗಿದ್ದು, ಕನ್ನಡದಲ್ಲಿ ಕ್ಷಣ ಕ್ಷಣ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀರಾಮ್, ವಿಲನ್, ಮಾಣಿಕ್ಯ, ಗನ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮೋಹನ್ ಲಾಲ್ ಜೊತೆಗೆ ನಟಿಸಿದ್ದರು. ಸಾಲು ಸಾಲಾಗಿ ಸಿನಿಮಾಗಳಲ್ಲಿ ನಟಿಸಿ ಉತ್ತಂಗಕ್ಕೆ ಏರಿದ್ದ ನಟಿಕಿರಣ್ ರಾಥೋಡ್ ಅವರು ಹೆಚ್ಚಾಗಿ ಗ್ಲಾಮರಸ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀರೋಯಿನ್, ಐಟಂ ಸಾಂಗ್ ಗಳಲ್ಲೂ ಮಿಂಚಿದ್ದರು. ಇಂಡಸ್ಟ್ರಿಯಲ್ಲಿ ಪೈಪೋಟಿ ಹೆಚ್ಚಾದಂತೆ ಕಿರಣ್ ರಾಥೋಡ್ ಗೆ ಅವಕಾಶಗಳು ಕಡಿಮೆಯಾಗುತ್ತದೆ. ಹೆಚ್ಚೆಚ್ಚು ಎಕ್ಸ್ ಪೋಸ್ ಮಾಡಲು ನಿರ್ದೇಶಕರು ಹೇಳಿದಾಗ ಕಿರಣ್ ರಾಥೋಡ್ ಗೆ ಬೇಸರ ಮಾಡಿಕೊಂಡರು. ನಂತರ ಅವಕಾಶಗಳು ಕಡಿಮೆಯಾಗಲು ಶುರುವಾಯ್ತು. ಇವರ ಸುತ್ತಾ ಗಾಸಿಪ್ ಗಳು ಶುರುವಾಗಿ, ಕಿರಣ್ ರಾಥೋಡ್ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗಿತ್ತು.
ನಿಧಾನವಾಗಿ ಸಿನಿಮಾ ಇಂಡಸ್ಟ್ರಿ ಇಂದ ಹೊರಹೋಗುತ್ತಾರೆ. ಅವಕಾಶಗಳಿಲ್ಲದ ಕಾರಣ ಹಣಕ್ಕಾಗಿ ತೊಂದರೆ ಶುರುವಾಗುತ್ತದೆ. ಇದರಿಂದ ಖಿನ್ನತೆಗೆ ಒಳಗಾಗುತ್ತಾರೆ. ನಂತರ ಹಣವಿಲ್ಲದ ಕಾರಣ ಈಗ ಕಿರಣ್ ರಾಥೋಡ್ ಅವರು ತಮ್ಮ ವೆಬ್ ಸೈಟ್ ಮೂಲಕ ಅವರ ಖಾಸಗಿ ವೀಡಿಯೋಗಳನ್ನು ಕೊಡುತ್ತೀನಿ. ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಅಲ್ಲದೇ ನಿಮ್ಮ ಜೊತೆಗೆ ಗಂಟೆಗಟ್ಟಲೇ ಮಾತನಾಡುತ್ತೇನೆ ಆದರೆ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಇಲ್ಲಿಗೆ ಕಿರಣ್ ರಾಥೋಡ್ ಅವರ ಪರೀಸ್ಥಿತಿ ಬಂದು ನಿಂತಿದೆ
View this post on Instagram