ಉತ್ತರ ಕೊರಿಯಾ: ನನ್ನ ಮಗಳ ಹೆಸರನ್ನು ಯಾರೂ ತಮ್ಮ ಮಕ್ಕಳಿಗೆ ಇಡಬಾರ್ದು,ಕಿಮ್ ಆದೇಶ,ಇಟ್ಟಿದ್ದರೆ??

ಉತ್ತರ ಕೊರಿಯಾದ(North Korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim Jong Un) ಆಡಳಿತ ಹಾಗೂ ಅಲ್ಲಿ ಚಾಲ್ತಿಯಲ್ಲಿರುವ ಕೆಲವೊಂದು ವಿಚಿತ್ರ ಎನಿಸುವ ಕಾನೂನುಗಳ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಸುದ್ದಿಗಳಾಗುವ ಮೂಲಕ ವಿಶ್ವದ ಬೇರೆ ರಾಷ್ಟ್ರಗಳ ಜನರಿಗೆ ಅಚ್ಚರಿ ಯನ್ನು ಮೂಡಿಸಿದೆ. ಕಿಮ್ ಜಾಂಗ್ ಆಡಳಿತದಲ್ಲಿ ಆ ದೇಶದ ಹೆಣ್ಣು ಮಕ್ಕಳಿಗೆ ಇರುವಂತಹ ಕಟ್ಟುಪಾಡುಗಳ ಕುರಿತಾಗಿ ಸಹಾ ಸಾಕಷ್ಟು ವಿಷಯಗಳು ಜಗಜ್ಜಾಗಿರಾಗಿದೆ. ಇದೀಗ ಹೊಸದೊಂದು ನಿಯಮವನ್ನು ಕಿಮ್ ಜಾರಿಗೆ ತಂದಿದ್ದು, ಇನ್ನು ಮುಂದೆ ಉತ್ತರ ಕೊರಿಯಾದಲ್ಲಿ ಹೆಣ್ಣು ಮಕ್ಕಳ ಹೆಸರಿಗೂ ಕೂಡಾ ಈ ಹೊಸ ನಿಯಮ ಅನ್ವಯ ಅಗಲಿದೆ. ಹಾಗಿದ್ದಲ್ಲಿ ಏನಿದು ವಿಶೇಷ ಹೊಸ ಕಾನೂನು ತಿಳಿಯೋಣ ಬನ್ನಿ.

Watch: North Korea's Kim Jong Un and Daughter Cheer Watching Soccer

ಇತ್ತೀಚಿಗಷ್ಟೇ ಪ್ಯೊಂಗ್ಯಾಂಗ್(Pyongyang) ನಲ್ಲಿ ನಡೆದ ಬೃಹತ್ ಮಿಲಿಟರಿ ಪರೇಡ್ ನಲ್ಲಿ ಕಿಮ್ ಮಗಳಾದ(Kim Daughter) ಕಿಮ್ ಜು ಏ(Kim Ju Ae) ಮೊಟ್ಟ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಳು.ಅದಾದ ನಂತರ ಉತ್ತರ ಕೊರಿಯಾದ ರಕ್ಷಣಾ ಸಚಿವಾಲಯ ಹೊಸದೊಂದು ಆದೇಶವನ್ನು ಹೊರಡಿಸಿದೆ. ಅದೇನೆಂದರೆ ಇನ್ನು ಮುಂದೆ ಆ ದೇಶದಲ್ಲಿ ಹೊಟ್ಟಲಿರುವ ಯಾವ ಹೆಣ್ಣು ಮಕ್ಕಳಿಗೂ ಸಹ ಕಿಮ್ ಮಗಳ(Kim Jong Un daughter) ಹೆಸರನ್ನು ಇಡವಂತಿಲ್ಲ ಹಾಗೂ ಯಾವುದೇ ವ್ಯಕ್ತಿ ಆ ಹೆಸರನ್ನು ಹೊಂದುವಂತಿಲ್ಲ.

Succession questions raised by presence of Kim's daughter - BBC News

ಅದು ಮಾತ್ರವೇ ಇಲ್ಲದೆ ಈಗಾಗಲೇ ಅದೇ ಹೆಸರನ್ನು ಯಾರಾದರೂ ಮಹಿಳೆಯರು ಅಥವಾ ಹೆಣ್ಣು ಮಕ್ಕಳು ಇಲ್ಲವೇ ಯಾವುದೇ ವ್ಯಕ್ತಿ ಇಟ್ಟುಕೊಂಡಿದ್ದರೆ ಅದನ್ನು ಬದಲಿಸಬೇಕು ಎನ್ನುವ ಆದೇಶವನ್ನು ನೀಡಲಾಗಿದೆ. ಕಿಮ್ ಮಗಳ ಹೆಸರನ್ನು ಹೊಂದಿರುವ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವರ ಹೆಸರನ್ನು ಬದಲಿಸಿಕೊಳ್ಳಲು ಒಂದು ವಾರದ ಗಡುವನ್ನು ನೀಡಲಾಗಿದೆ. ಈ ವಿಚಾರವಾಗಿ ಸ್ಥಳೀಯ ಸಂಸ್ಥೆಗಳು ಕೂಡ ಸುತ್ತೋಲೆಯನ್ನು ಹೊರಡಿಸುವ ಮೂಲಕ ಜನರಿಗೆ ಹೊಸ ನಿಯಮದ ಕುರಿತಾಗಿ ಮಾಹಿತಿಯನ್ನು ನೀಡಿವೆ.
ಕಿಮ್ ಮಗಳು ಕಿಮ್ ಜು ಏ ಈಗ ಒಂಬತ್ತು ವರ್ಷದ ಬಾಲಕಿಯಾಗಿದ್ದು, ಇನ್ನು ಮುಂದೆ ಮಗಳ ಹೆಸರನ್ನು ಆದೇಶದ ಯಾವುದೇ ವ್ಯಕ್ತಿಯು ಹೊಂದುವಂತಿಲ್ಲ ಎಂದು ಕಿಮ್ ಆದೇಶ ಹೊರಡಿಸಿದ್ದಾರೆ. ಉತ್ತರ ಕೊರಿಯ ತನ್ನ ನಾಯಕರು ಮತ್ತು ಅವರ ಹತ್ತಿರದ ಕುಟುಂಬದ ಸದಸ್ಯರು ಹೊಂದಿರುವ ಹೆಸರುಗಳನ್ನು ಅಲ್ಲಿನ ಪ್ರಜೆಗಳು ಬಳಸುವುದನ್ನು ನಿಲ್ಲಿಸಿದೆ ಎಂಬುದಾಗಿ 2014 ರಲ್ಲೇ ವರದಿಯಾಗಿತ್ತು. ಕಿಮ್ ಗೆ ಮೂರು ಜನ ಮಕ್ಕಳಿದ್ದು ಅದರಲ್ಲಿ ಕಿಮ್ ಜು ಏ ಮಾತ್ರವೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಳೆ.

You might also like

Comments are closed.