ನೆಚ್ಚಿನ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್ ಎಂದು ಫೋಟೋ ಹಂಚಿಕೊಂಡ ಕಿಚ್ಚ ಸುದೀಪ್ ಮಗಳು ಸಾನ್ವಿ.. ಆ ಹುಡುಗ ಯಾರು ಗೊತ್ತಾ..

ಕಿಚ್ಚ ಸುದೀಪ್ ಸಧ್ಯ ಕನ್ನಡ ಮಾತ್ರವಲ್ಲದೇ ಇತರ ಭಾಷೆಗಳ ಸಿನಿಮಾ ಇಂಡಸ್ಟ್ರಿಗಳಲ್ಲಿಯೂ ಮಿಂಚಿ ಅಲ್ಲಿಯೂ ಸಹ ಅಭಿಮಾನಿ ಬಳಗಗಳನ್ನು ಹೊಂದಿರುವ ನಟ.. ಸಧ್ಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಆ ಕೆಲಸಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆನ್ನಬಹುದು.. ಇನ್ನು ಅಪ್ಪನ ಕುರಿತು ಆಗಾಗ ಪೋಸ್ಟ್ ಮಾಡುವ ಮಗಳು ಸಾನ್ವಿ ಸುದೀಪ್ ಇದೀಗ ಬೇರೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.. ಹೌದು ನೆಚ್ಚಿನ ಹುಡುಗನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಾನ್ವಿ ಸುದೀಪ್ ಆತನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.. ಹೌದು ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್ ಎಂದು ಬರೆದು ಪೋಸ್ಟ್ ಮಾಡಿದ್ದು ಇದೀಗ ಸೂಪರ್ ಸ್ಟಾರ್ ನಟನ ಮಗಳಿಗೆ ಇಷ್ಟೊಂದು ಇಷ್ಟವಾಗಿರುವ ಹುಡುಗ ಯಾರು ಎಂಬ ಕುತೂಹಲ ಇದ್ದೇ ಇರುತ್ತದೆ.. ಹೌದು

ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ತನ್ನ ತಂದೆಯ ಸಿನಿಮಾಗಳ ಕುರಿತು ಆಗಾಗ ಸಾಮಾಜಿಕ ಜಾಲತಾಣದಲ್ಲು ಪೋಸ್ಟ್ ಮಾಡುತ್ತಲೇ ಇರುತ್ತಾರೆ.. ಅದನ್ನು ಬಿಟ್ಟರೆ ತಮ್ಮ ಹವ್ಯಾಸಗಳ ಬಗ್ಗೆ ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು ಆಕ್ಟೀವ್ ಆಗಿದ್ದಾರೆ.. ಇನ್ನು ಇದೀಗ ತಮ್ಮ ಮನಮೆಚ್ಚಿದ ಹುಡುಗನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.. ಹೌದು ಸಾನ್ವಿ ಸಧ್ಯ ಹೈದರಾಬಾದ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ಇದರ ಜೊತೆಗೆ ಪೇಂಟಿಂಗ್ ಹಾಗೂ ಇನ್ನಿತರ ಹವ್ಯಾಸಗಳಲ್ಲಿಯೂ ತೊಡಗಿಕೊಂಡಿದ್ದಾರೆ.. ಇನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ವಿತರಕರಾಗಿದ್ದ 83 ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಸಾನ್ವಿ ತೊಡಗಿಸಿಕೊಂಡಿದ್ದು ಸಿನಿಮಾ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಕುರಿತ ಪೋಸ್ಟ್ ಗಳನ್ನು ಹಂಚಿಕೊಳ್ಳುವ ಮೂಲಕ ಅಪ್ಪನ ಕೆಲಸಕ್ಕೆ ಕೈ ಜೋಡಿಸಿದ್ದರು.

ಇನ್ನು ಸಾನ್ವಿ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಅವರನ್ನು ಹೊರತು ಪಡಿಸಿದರೆ ತಮ್ಮ ಕಸಿನ್ ಬ್ರದರ್ ಒಬ್ಬರ ಜೊತೆಗಿನ ಫೋಟೋಗಳನ್ನು ಮಾತ್ರವೇ ಹೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದರು.. ಆದರೆ ಇವರಿಬ್ಬರನ್ನೂ ಹೊರತು ಪಡಿಸಿ ಇದೀಗ ತಮ್ಮ ಮನಮೆಚ್ಚಿದ ಹುಡುಗನ ಕುರಿತು ಹೇಳಿಕೊಂಡಿದ್ದಾರೆ.. ಹೌದು ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್ ಎಂದು ನೆಚ್ಚಿನ ಹುಡುಗನ ಸರಣಿ ಫೋಟೋಗಳನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.. ಹೌದು ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟನ ಮಗಳಾದ ಸಾನ್ವಿ ತಂದೆಗಿಂತಲೂ ಹೆಚ್ಚಾಗಿ ಮತ್ತೊಬ್ಬ ನಟನ ದೊಡ್ಡ ಅಭಿಮಾನಿ ಎಂದರೆ ನಂಬಲೇ ಬೇಕು.. ಹೌದು ಸಾನ್ವಿ ಶುಭಾಶಯ ತಿಳಿಸಿರುವ ಹುಡುಗ ಮತ್ಯಾರೂ ಅಲ್ಲ.. ತಾನು ಅತಿಯಾಗಿ ಇಷ್ಟ ಪಡುವ ನಟ ಸಿದ್ಧಾರ್ಥ್ ಮಲೋತ್ರ.. ಹೌದು ಸಿದ್ಧಾರ್ಥ್ ಎಂದರೆ ಸಾನ್ವಿಗೆ ಸಾಕಷ್ಟು ವರ್ಷಗಳಿಂದಲೂ ಅತಿ ಹೆಚ್ಚು ಅಭಿಮಾನ ಪ್ರೀತಿ..

ವಾರದಲ್ಲಿ ನಾಲ್ಕು ದಿನವಾದರೂ ಸಿದ್ಧಾರ್ಥ್ ಫೋಟೋವನ್ನು ತಮ್ಮ ಸ್ಟೇಟಸ್ ಗೆ ಹಾಕಿಕೊಳ್ಳುವ ಸಾನ್ವಿ ಇದೀಗ ನೆಚ್ಚಿನ ನಟನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಹೌದು ಬಾಲಿವುಡ್ ನಟ ಸಿದ್ದಾರ್ಥ್ ಮಲೋತ್ರ ಅವರು ನಿನ್ನೆ ತಮ್ಮ ಮೂವತ್ತೇಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಇತ್ತ ಸಿದ್ದಾರ್ಥ್ ಅವರ ದೊಡ್ಡ ಅಭಿಮಾನಿಯಾಗಿರುವ ಸಾನ್ವಿ ಈ ರೀತಿ ವಿಶೇಷವಾಗಿ ಶುಭಾಶಯ ತಿಳಿಸಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ.. ಹೌದು ಸಿದ್ದಾರ್ಥ್ ಮಲೋತ್ರ ಅವರ ಸಾಕಷ್ಟು ಫೋಟೋಗಳು ವೀಡಿಯೋಗಳನ್ನು ಹಂಚಿಕೊಂಡಿರುವ ಸಾನ್ವಿ “ಹ್ಯಾಪಿ ಬರ್ತ್ ಡೇ ಮೈ ಲವ್” ಎಂದು ಬರೆದುಕೊಂಡಿದ್ದಾರೆ..

ಸ್ಟಾರ್ ನಟರುಗಳ ಮಕ್ಕಳಾದರೂಸಹ ಅವರಿಗೂ ಸಹ ನಮ್ಮಂತೆಯೇ ಸಾಮಾನ್ಯ ಜೀವನವೊಂದು ಇರುತ್ತದೆ ಎಂಬುದು ಮಾತ್ರ ಸತ್ಯ.. ಅವರಿಗೂ ನೆಚ್ಚಿ‌ನ ನಟರುಗಳಿರುತ್ತಾರೆ.. ಅವರೂ ಸಹ ಮತ್ತೊಬ್ಬರ ಅಭಿಮಾನಿಗಳಾಗಿರುತ್ತಾರೆ.. ಅವರೂ ಸಹ ನಮ್ಮಂತೆಯೇ ಅಭಿಮಾನ ವ್ಯಕ್ತಪಡಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ ಎಂಬುದಕ್ಕೆ ಸಾನ್ವಿಯೇ ಉದಾಹರಣೆ.. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಿದ್ದಾರ್ಥ್ ಅವರ ಫೋಟೋ ಹಂಚಿಕೊಳ್ಳುತ್ತಾ ಅಭಿಮಾನ ವ್ಯಕ್ತಪಡಿಸುತ್ತಿದ್ದ ಸಾನ್ವಿ ಇದೀಗ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ವಿಶೇಷವಾಗಿ ಶುಭಾಶಯ ತಿಳಿಸಿದ್ದು ಇನ್ಸ್ಟಾಗ್ರಾಂ ಸ್ಟೋರಿ ತುಂಬೆಲ್ಲಾ ಸಿದ್ದಾರ್ಥ ಅವರನ್ನು ಮಿಂಚಿಸುತ್ತಿದ್ದರೆನ್ನಬಹುದು.

You might also like

Comments are closed.