KICHCHA-STYLE

ಹೊಸ ಲುಕ್ ನಲ್ಲಿ ಕಿಚ್ಚ ಸುದೀಪ್..ಇದು ಯಾವ ಸಿನಿಮಾದ ಲುಕ್ ಗೊತ್ತಾ?…

Entertainment/ಮನರಂಜನೆ

ನಮಸ್ಕಾರ ವೀಕ್ಷಕರೆ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಅನುಪ್ ಭಂಡಾರಿ ಸಾರಥ್ಯದಲ್ಲಿ ಬಂದ ವಿಕ್ರಾಂತ್ ರೋಣ ಅಂತ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಿಗೂ ಹಿಂದಿ ಭಾಷೆಯಲ್ಲಿಯೂ ರಿಲೀಸ್ ಆಗಿತ್ತು. ಪಾನ್ ಇಂಡಿಯಾ ದಲ್ಲಿ ಅದ್ದೂರಿಯಾಗಿ ಮೂಡಿಬಂದ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸದ್ಯ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಓಟಿಟಿ ಅಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಬಾರಿ ಓ ಟಿ ಟಿ ಯಲ್ಲಿ ಬಿಗ್ ಬಾಸ್ ಪ್ರಾರಂಭವಾಗಿದ್ದು, ಸುದೀಪ್ ಅವರೆ ಅದನ್ನು ಹೋಸ್ಟ್ ಮಾಡುತ್ತಿದ್ದಾರೆ. ಆದರೆ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ರೀವಿಲ್ ಮಾಡಿಲ್ಲ, ಆದರೆ ಕಿಚ್ಚ ಈಗ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸುದೀಪ್ ನ ಹೊಸ ಲುಕ್ ಬಾರಿ ವೈರಲ್ ಆಗಿದೆ ಪೂರ್ತಿ ದಾಡಿ ತೆಗೆದ ಲೂಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಿಚ್ಚ ಅವರ ಈ ಲುಕ್ ಯಾವ ಸಿನಿಮಾ ಗೆ ಎನ್ನುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಕಿಚ್ಚ ಸುದೀಪ್ ಸೈಲೆಂಟಾಗಿ ಮುಂದಿನ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅಂದಹಾಗೆ ಕಿಚ್ಚನ ಈ ಲುಕ್ ಕಬ್ಜಾ ಸಿನಿಮಾಗಾಗಿ ಎಂದು ಹೇಳಲಾಗುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಈ ಸಿನಿಮಾದಲ್ಲಿ ಸುದೀಪ್ ವಿಭಿನ್ನ ಲುಕ್ ನಲ್ಲಿ ನಟಿಸಲಿದ್ದಾರೆ. ಈಗಾಗಲೇ ಕಿಚ್ಚನ ಮೊದಲ ಲುಕ್ ರಿವೀಲ್ ಆಗಿದ್ದು ಭಾರ್ಗವ ಭಕ್ಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಕಿಚ್ಚನ ಮೊದಲ ಲುಕ್ ಬಹಳ ಕುತೂಹಲ ಮೂಡಿಸಿದೆ.

ಸಿನಿಮಾದ ಫಸ್ಟ್ ಲುಕ್ ನ ಬಳಿಕ ಕಿಚ್ಚನ ಪಾತ್ರದ ಚಿತ್ರೀಕರಣ ಇನ್ನು ಕಂಪ್ಲೀಟ್ ಆಗಿರಲಿಲ್ಲ . ಕಿಚ್ಚ ಇದೀಗ ಮತ್ತೆ ಕಬ್ಜಾ ಸೆಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಕಬ್ಜಾ ಸಿನಿಮಾದಿಂದ ಸುದೀಪ್ ಹೊರ ಬಂದಿದ್ದಾರೆ ಎಂಬ ಸುದ್ದಿ ಕೂಡ ವೈರಲಾಗಿತ್ತು.

ಆದರೆ ಇದೀಗ ನಟ ಕಿಚ್ಚ ಸುದೀಪ್ ಸಿನಿಮಾಗೆ ಮತ್ತೆ ಎಂಟ್ರಿ ಕೊಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ . ಸುದೀಪ್ ಅವರ ಹೊಸ ಲುಕ್ ನಿಮಗೂ ಇಷ್ಟವಾಗಿದ್ದರೆ, ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ .

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...