ಅದ್ಭುತ ಫೀಚರ್ಸ್ ಹಾಗೂ ಮೈಲೇಜ್ ಇರುವ ಕಿಯಾ ಕಂಪನಿಯ ಈ 7 ಸೀಟ್ ಕಾರನ್ನು ಕೇವಲ 2 ಲಕ್ಷ ರೂ. ಪೇಮೆಂಟ್ ಮಾಡಿ ಮನೆಗೆ ತನ್ನಿ!

ಅದ್ಭುತ ಫೀಚರ್ಸ್ ಹಾಗೂ ಮೈಲೇಜ್ ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರುವ ಕಿಯಾ ಕಂಪನಿಯ ಈ 7 ಸೀಟರ್ MPV ಯನ್ನು ಕಂಪನಿಯು ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ ಖರೀದಿ ಮಾಡುವ ಅವಕಾಶ ಕಲ್ಪಿಸಿದ್ದು, ಈ ಕಾರು ಮಾರುತಿ ಸುಜುಕಿ ಎರ್ಟಿಗಾದ ಮಾರ್ಕೆಟ್ ವ್ಯಾಲ್ಯೂ ಅನ್ನೇ ತಲೆಕೆಳಗು ಮಾಡುತ್ತಿದೆ. ಈ ಕಾರು ಕೇವಲ ಫೀಚರ್ಸ್ ಅಲ್ಲದೇ ತನ್ನ ಅದ್ಭುತ ಲುಕ್ ಹಾಗೂ ಶಕ್ತಿಶಾಲಿ ಎಂಜಿನ್ ನೊಂದಿಗೆ ಗ್ರಾಹಕರನ್ನು ತನ್ನತ್ತ ಸೆಳೆಯುವ ಶಕ್ತಿ ಹೊಂದಿದೆ.

ಕಿಯಾ ಕಂಪನಿಯ ಕಾರೆನ್ಸ್ ಎಂಬ ಈ ಕಾರಿನ ಆರಂಭಿಕ ಬೆಲೆ 11.30 ಲಕ್ಷ ರೂಪಾಯಿಗಳಾಗಿದ್ದು, ನೀವು ಕೇವಲ 2 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡಿ ಈ ಕಾರನ್ನು ಖರೀದಿ ಮಾಡಬಹುದಾಗಿದೆ. ಈ ಕಾರು ಖರೀದಿ ಮಾಡುವ ಇಚ್ಛೆ ನಿಮಗಿದ್ದರೆ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿದ ಮೇಲೆ ಪ್ರತಿ ತಿಂಗಳು ನೀವು ಎಷ್ಟು ಮೊತ್ತವನ್ನು EMI ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ ಬನ್ನಿ…

ಭಾರತದ ಮಾರುಕಟ್ಟೆಯಲ್ಲಿ ಕಿಯಾ ಕಂಪನಿ ಸೆಲ್ಟೋಸ್ ನಂತಹ SUV ಗಳೊಟ್ಟಿಗೆ 7 ಸೀಟರ್ ಕಾರೆನ್ಸ್ ನ ಮಾರಾಟ ಕೂಡ ಜೋರಾಗಿದೆ, ದೀರ್ಘ ಬಾಳಿಕೆ, ಆಧುನಿಕ ಫೀಚರ್ಸ್, ಅದ್ಭುತ ಲುಕ್ ಹಾಗೂ ಮೈಲೇಜ್ ನೊಂದಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಕಾರು ಗ್ರಾಹಕರ ಹೃ’ ದಯ ಗೆದ್ದಿದೆ. ಈ ಸೆಗ್ಮೆಂಟ್ ನ ಟಾಪ್ ಸೆಲ್ಲಿಂಗ್ ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಠಕ್ಕರ್ ಕೊಡುತ್ತಿರುವ ಕಿಯಾ ಕಾರೆನ್ಸ್ ಅನ್ನು ನೀವು ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ ಖರೀದಿಸುವ ಅವಕಾಶ ಮಾಡಿಕೊಟ್ಟಿರುವ ಕಂಪನಿ ಇದೀಗ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ.

5 ಟ್ರಿಮ್ ಲೆವೆಲ್ ನ 19 ವೆರಿಯಂಟ್ ಗಳಲ್ಲಿ ಲಭ್ಯವಿರುವ ಕಿಯಾ ಕಾರೆನ್ಸ್ : ಪ್ರಸಿದ್ದ ಕಿಯಾ ಕಾರಿನ ಬೆಲೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೊದಲು ನೀವು ಈ ಕಾರು ಎಷ್ಟು ವೆರಿಯಂಟ್ ಗಳಲ್ಲಿ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. 7 ಸೀಟಿಂಗ್ ಕೆಪ್ಯಾಸಿಟಿ ಇರುವ ಈ MPV ಪ್ರಿಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸರಿ ಮತ್ತು ಲಕ್ಸರಿ ಪ್ಲಸ್ ಎಂಬ 5 ಟ್ರಿಮ್ ಲೆವೆಲ್ ನ 19 ವೆರಿಯಂಟ್ ಗಳಲ್ಲಿ ಲಭ್ಯವಿದ್ದು ಈ ಕಾರಿನ ಎಕ್ಸ್ ಶೋ ರೂಮ್ ಬೆಲೆ 10 ಲಕ್ಷ ರೂಪಾಯಿಗಳಿಂದ 18 ಲಕ್ಷ ರೂಪಾಯಿಗಳವರೆಗೂ ನಿಗದಿ ಮಾಡಲಾಗಿದೆ.

ಕಿಯಾ ಕಾರೆನ್ಸ್ ಕಾರಿನ ಎರಡು ಎಂಜಿನ್ ಬಗ್ಗೆ : ಕಿಯಾ ಕಾರೆನ್ಸ್ ಕಾರಿನ ಎಂಜಿನ್ ಡೀಸೆಲ್ ಹಾಗೂ ಪೆಟ್ರೋಲ್ ಎರಡು ಫ್ಯೂಲ್ ಟೈಪ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆಟೋಮ್ಯಾಟಿಕ್ ಹಾಗೂ ಮಾನ್ಯುಯಲ್ ಎರಡು ರೀತಿಯ ಟ್ರಾನ್ಸ್ಮಿಷನ್ ಆಪ್ಷನ್ ನಲ್ಲಿಯೂ ಸಹ ಲಭ್ಯವಿದೆ. ಕಿಯಾ ಕಾರಿನ ಮೇಲೆಜ್ ಬಗ್ಗೆ ನೋಡುವುದಾದರೆ ಈ ಕಾರು ಲೀಟರ್ ಗೆ 21 ಕಿಲೋಮೀಟರ್ ಮೈಲೇಜ್ ನೀಡಲಿದೆ. ಆದಷ್ಟು ಬೇಗನೆ ಕಿಯಾ ಕಾರೆನ್ಸ್ ಕಾರು ಫ್ಯಾಕ್ಟರಿ ಫಿಟೆಡ್ CNG ಕಿಟ್ ನೊಂದಿಗೆ ಸಹ ಲಭ್ಯವಾಗಲಿದೆ.

ಕಿಯಾ ಕಾರೆನ್ಸ್ ಕಾರಿನ EMI ಪ್ಲಾನ್ ಡೀಟೇಲ್ಸ್ : ಕಿಯಾ ಕಾರೆನ್ಸ್ ನ ಟಾಪ್ ಸೆಲ್ಲಿಂಗ್ ಮಾಡೆಲ್ ಗಳಲ್ಲಿ ಒಂದಾಗಿರುವ ಕಿಯಾ ಕಾರೆನ್ಸ್ ಪ್ರಿಮಿಯಂ ಟರ್ಬೋ ಪೆಟ್ರೋಲ್ ನ ಎಕ್ಸ್ ಶೋ ರೂಮ್ ಬೆಲೆ 11.30 ಲಕ್ಷ ರೂಪಾಯಿಗಳಾಗಿದ್ದು, ಆನ್ ರೋಡ್ ಬೆಲೆ 13.09 ಲಕ್ಷ ರೂಪಾಯಿಗಳಾಗಿದೆ. ನೀವು ಎರಡು ಲಕ್ಷ ರೂಪಾಯಿ ಡೌನ್ ಪೇಮೆಂಟ್ (ಆನ್ ರೋಡ್ ಚಾರ್ಜ್ ಹಾಗೂ ಮೊದಲ ತಿಂಗಳ EMI) ಮಾಡಿದರೆ…

ಕಿಯಾ ಕಾರೆನ್ಸ್ ಪ್ರಿಮಿಯಂ ಪೆಟ್ರೋಲ್ ವೆರಿಯಂಟ್ ಅನ್ನು ನೀವು ಖರೀದಿ ಮಾಡಿದರೆ ನಿಮಗೆ 11,08,527 ರೂಪಾಯಿ ಲೋನ್ ಸಿಗುತ್ತದೆ, 9% ಬಡ್ಡಿದರದಲ್ಲಿ 5 ವರ್ಷಗಳಿಗೆ ಅಂದರೆ 60 ತಿಂಗಳ ಕಂತುಗಳಲ್ಲಿ ಪ್ರತಿ ತಿಂಗಳು 23,011 ರೂಪಾಯಿಗಳ ತಿಂಗಳ ಕಂತಿನಲ್ಲಿ ಭರಿಸಬೇಕಾಗುತ್ತದೆ. ಕಿಯಾ ಕಾರಿನ ಪ್ರಿಮಿಯಂ ಮಾಡೆಲ್ ಅನ್ನು ಲೋನ್ ಮೇಲೆ ಖರೀದಿ ಮಾಡುವುದರಿಂದ ನಿಮಗೆ 5 ವರ್ಷಗಳ ಅವಧಿಗೆ 2.72 ಲಕ್ಷ ರೂಪಾಯಿ ಬಡ್ಡಿ ಭರಿಸಬೇಕಾಗುತ್ತದೆ.

You might also like

Comments are closed.