
ಗುಜರಿ ವ್ಯಾಪಾರಿ ಆಗಿದ್ದ ಕೆಜಿಎಫ್ ಬಾಬು 7,000 ಕೋಟಿಯ ಒಡೆಯನಾಗಿದ್ದು ಹೇಗೆ ಗೊತ್ತಾ? ಇದಕ್ಕೆ ಕಾರಣವಾಗಿತ್ತು ಗುಜರಿಯಲ್ಲಿ ಸಿಕ್ಕ ಆ ವಸ್ತು…ಜೀವನದಲ್ಲಿ ಯಾರ ಅದೃಷ್ಟ ಯಾವ ಸಮಯದಲ್ಲಿ ಯಾವ ರೀತಿ ತೆರೆದುಕೊಳ್ಳುತ್ತದೆ ಎಂದು ಊಹಿಸಲು ಕೂಡ ಅಸಾಧ್ಯ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಕೆಜಿ ಬಾಬು ಎಂದು ಹೇಳಬಹುದು ಈಗ ಕರ್ನಾಟಕದಲ್ಲಿ ಕೆಜಿಎಫ್ ಬಾಬು ಎಂದು ಫೇಮಸ್ ಆಗಿರುವ ಇವರ ನಿಜವಾದ ಹೆಸರು ಯೂಸಫ್ ಶರೀಫ್.
ಕೆಜಿಎಫ್ ಪ್ರದೇಶಕ್ಕೆ ವಾಸಿಸುತ್ತಿದ್ದ ಸಾಮಾನ್ಯ ಕುಟುಂಬದ ದಂಪತಿಗೆ ಜನಿಸಿದ 14 ಮಕ್ಕಳಲ್ಲಿ ಮೊದಲನೇದಾಗಿ ಜನಿಸಿದ ಇವರಿಗೆ ಬಹಳ ಚಿಕ್ಕ ವಯಸ್ಸಿನಿಂದಲೇ ತುಂಬಾ ಜವಾಬ್ದಾರಿ ಇತ್ತು ಹೀಗಾಗಿ ಕುಟುಂಬ ನಿರ್ವಹಣೆ ಮತ್ತು ಸಹೋದರಿಯರ ಜವಾಬ್ದಾರಿ ಹೊತ್ತುಕೊಂಡ ಇವರು ಗುಜರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ನಿಧಾನವಾಗಿ ಗುಜರಿ ವ್ಯಾಪಾರದ ಕಲೆಗಳನ್ನೆಲ್ಲ ತಿಳಿದುಕೊಂಡ ಇವರು ಸ್ವಂತವಾಗಿ ಇವರೇ ಒಂದು ಅಂಗಡಿಯನ್ನು ಓಪನ್ ಮಾಡಿದರು. ಈ ವ್ಯಾಪಾರದ ಜೊತೆ ಆಟೋವನ್ನು ಓದಿಸಲು ಶುರು ಮಾಡಿದರು.
ಆಮೇಲೆ ರಿಯಲ್ ಎಸ್ಟೇಟ್ ಅಲ್ಲೂ ಕೂಡ ಕೈ ಹಾಕಿದ ಇವರಿಗೆ ಹರಾಜಿನಲ್ಲಿ ಸೇಲ್ ಗೇ ಇಟ್ಟ ವಸ್ತುಗಳನ್ನು ಖರೀದಿಸುವ ಬಗ್ಗೆ ಆಸಕ್ತಿ ಬಂದು ಅದರ ವ್ಯಾಪಾರವನ್ನು ಕೂಡ ಶುರು ಮಾಡಿಕೊಂಡರು. ಇವರ ಈ ಐಡಿಯಾ ಇಂದಲೇ ಇಂದು ಇವರು ಕೋಟ್ಯಾಧಿಪತಿಯಾಗಿದ್ದಾರೆ ಎಂದು ಹೇಳಬಹುದು. 2001 ರವರೆಗೂ ಕೂಡ ತೀರ ಸಾಮಾನ್ಯ ಆಗಿದ್ದ ಇವರ ಜೀವನದಲ್ಲಿ ಆ ವರ್ಷ ನಡೆದ ಒಂದು ಘಟನೆ ಬದುಕಿನ ದಿಕ್ಕನೆ ಬದಲಾಯಿಸಿಬಿಟ್ಟಿತು. ಕೆಜಿಎಫ್ ಅಲ್ಲಿ ಗಣಿ ಕೆಲಸಕ್ಕೆ ಬಳಸುತ್ತಿದ್ದ ಮಿಲ್ ಟ್ಯಾಂಕ್ ಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಯುತ್ತಿತ್ತು. ಅದರಲ್ಲಿ ಭಾಗವಹಿಸಿದ ಇವರು 21 ಲಕ್ಷ ಬೆಲೆ ತೆತ್ತು ಖರೀದಿಸಿದರು. ಗುಜರಿ ವ್ಯಾಪಾರಿ ಆಗಿದ್ದ ಇವರು ಇದನ್ನು ಬಳಸಿಕೊಂಡು ಏನಾದರೂ ಮಾಡುವ ಯೋಜನೆಯಲ್ಲಿದ್ದರು, ಆದರೆ ಒಂದು ದಿನ ಇವುಗಳನ್ನು ಪರೀಕ್ಷಿಸುವಾಗ ಅವರಿಗೆ ಒಂದು ಮಿಲ್ ಟ್ಯಾಂಕ್ ಒಳಗಡೆ ಇದ್ದ ವಸ್ತು ಆಶ್ಚರ್ಯ ಉಂಟು ಮಾಡಿತು.
ಕೆಲಸಗಾರರನ್ನೆಲ್ಲಾ ಮನೆಗೆ ಕಳುಹಿಸಿದ ಇವರು ಅದರ ಒಳಗೆ ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಇಷ್ಟು ವರ್ಷ ಚಿನ್ನದ ಕಲ್ಲುಗಳನ್ನು ಪೌಡರ್ ಮಾಡಿ ಶುದ್ಧ ಚಿನ್ನ ಹೊರ ತೆಗೆಯುವಲ್ಲಿ ಸಹಾಯ ಮಾಡುತ್ತಿದ್ದ ಮಿಲ್ ಟ್ಯಾಂಕ್ ಒಳಗಡೆ ಹಲವು ವರ್ಷಗಳಿಂದ ಚಿನ್ನದ ದ್ರವ ಸುರಿದು ಗಟ್ಟಿಯಾದ ಶುದ್ಧವಾದ ಚಿನ್ನ ತಳದಲ್ಲಿ ಸೇರಿಕೊಂಡಿದೆ ಎನ್ನುವುದು ಅರಿವಾಯಿತು.
ಅದನ್ನು ಸಂಸ್ಕರಿಸಿದಾಗ ಅವರಿಗೆ 13 ಕೆಜಿ ಶುದ್ಧ ಚಿನ್ನ ದೊರೆಯಿತು. ಆನಂತರ ಅವರ ಬದುಕು ಬದಲಾಗಿ ಒಂದೊಂದೇ ಬಿಸಿನೆಸ್ ಆರಂಭಿಸಲು ಶುರು ಮಾಡಿದರು. ಜಾವಾ ಬೈಕ್ ಕಂಪನಿ ಖರೀದಿಸಿದರು, ನಂತರ ಕೋರ್ಟ್ಗಳಲ್ಲಿ ಆಗುತ್ತಿದ್ದ ಆಸ್ತಿಗಳನ್ನು ಕಡಿಮೆ ಬೆಲೆಯಲ್ಲಿ ಬಿಟ್ ಮಾಡಿ ಖರೀದಿಸಲು ಶುರು ಮಾಡಿದರು. ಉಮ್ರಾ ರಿಯಲ್ ಎಸ್ಟೇಟ್ ಕೂಡ ಸ್ಥಾಪಿಸಿರುವ ಇವರ ಬ್ರಾಂಚ್ ಗಳು ಕರ್ನಾಟಕದ ಹಲವು ಕಡೆ ಇವೆ.
ಆದರೂ ಇಂದು ಸಹಿ ಮಾಡಲು ಕೂಡ ಬಾರದ ಇವರು ಕಾಂಗ್ರೆಸ್ ಪಾಳಯದಲ್ಲಿ ಕೂಡ ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅಮಿತಾ ಬಚ್ಚನ್ ಅವರ ಕಾರನ್ನು ಕೂಡ ಖರೀದಿಸಿ ಇವರು ಸುದ್ದಿ ಆಗಿದ್ದರು.
Comments are closed.