ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಕೆಂಡಾಮಂಡಲವಾದ ಜನ,ಹುಡುಗಿಯರೇ ಹುಷಾರ್ ಎಂದ ಆಂಟಿ

ಟ್ರೈಲರ್ ಮೂಲಕವೇ ಭಾರೀ ವಿವಾದ ಸೃಷ್ಟಿಸಿದ್ದ ಸಿನಿಮಾ ದಿ ಕೇರಳ ಸ್ಟೋರಿ ಮೊದಲ ದಿನ ಗಳಿಸಿದ್ದೆಷ್ಟು ಕೋಟಿ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಿ.

ಭಾರೀ ವಿವಾದ ಸೃಷ್ಟಿಸಿದ ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು ರಿಲೀಸ್ ಆಗಿದೆ. ಟ್ರೈಲರ್ ಮೂಲಕವೇ ವಿವಾದ ಹುಟ್ಟಿಸಿದ ಸಿನಿಮಾ ರಿಲೀಸ್​ಗೆ ಹಲವೆಡೆ ವಿರೋಧ ವ್ಯಕ್ತವಾಗಿತ್ತು. ಕೇರಳ ಸ್ಟೋರಿ ಸಿನಿಮಾ ಹಲವರ ಮನ ಗೆದ್ದಿದೆ.ಸುದಿಪ್ತೋ ಸೆನ್ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಿ ಐಸಿಸ್ ಸೇರಿಸುವ ಕುರಿತಾದ ಸಿನಿಮಾ ಇದಾಗಿದೆ.ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಐಎಂಡಿಬಿಯಲ್ಲಿ ಸಿನಿಮಾ 8.3/10 ರೇಟಿಂಗ್ ಪಡೆದಿದೆ.ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್​ನಲ್ಲಿ ಎರಡನೇ ದಿನಕ್ಕೆ ಶೇ.40ರಷ್ಟು ಏರಿಕೆ ಇದೆ ಎನ್ನಲಾಗಿದೆ. ಸಿನಿಮಾದ ಒಟ್ಟು ಕಲೆಕ್ಷನ್ 19.25 ಕೋಟಿ ರೂಪಾಯಿ ಆಗಿದೆ. ಹಿಂದಿ ಬೆಲ್ಟ್​ನಲ್ಲಿ ಶೇ.36.13ರಷ್ಟು ಪ್ರೇಕ್ಷಕರನ್ನು ಪಡೆದಿದೆ ಎನ್ನಲಾಗಿದೆ.ನಿರ್ದೇಶಕ ಸುದಿಪ್ತೋ ಸೆನ್ ಹಾಗೂ ವಿಪುಲ್ ಅಮೃತ್​ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಇಸ್ಲಾಂಗೆ  ಮತಾಂತರಗೊಂಡು  ನಂತರ ಅಫ್ಘಾನಿಸ್ತಾನ , ಟರ್ಕಿ, ಸಿರಿಯಾದಲ್ಲಿ ಐಸಿಸ್ ಸೇರಲ್ಪಟ್ಟ ಯುವತಿಯರ ಕಥೆ ಎಂದು ಹೇಳಿದ್ದರು. ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಏಳುತ್ತಿದ್ದಂತೆ 32,000 ಯುವತಿಯರು ಎಂಬಲ್ಲಿ ಮೂವರು ಯುವತಿಯರ ಕಥೆ ಎಂದು ಬದಲಾಯಿಸಲಾಯಿತು.ಹಲವಾರು ಕೇರಳ ಥಿಯೇಟರ್​ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕಿವೆ.

ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡಿಲ್ಲ.ಮುಖ್ಯವಾಗಿ ರೂಲಿಂಗ್ ಪಾರ್ಟಿಯಿಂದ ಸಿನಿಮಾಗೆ ಬೆಂಬಲ ಸಿಗದೆ ಇರುವ ಕಾರಣ ಪ್ರಮುಖ ಚಿತ್ರಮಂದಿರಗಳು ಸಿನಿಮಾ ರಿಲೀಸ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿವೆ. ಕೇವಲ ಒಂದೇ ಥಿಯೇಟರ್​ ಸಿನಿಮಾ ರಿಲೀಸ್​ ಖಚಿತಪಡಿಸಿದ್ದು ಉಳಿದ ಥಿಯೇಟರ್​ ಇನ್ನೂ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.

You might also like

Comments are closed.