ಸ್ನೇಹಿತರೇ, ನಿಜವಾದ ಪ್ರೀತಿ ಇದ್ದಲ್ಲಿ ನಾವು ಜೀವನದಲ್ಲಿ ಎಂತಹದೇ ಕಷ್ಟ ಬಂದರೂ ಎದುರಿಸಬಹುದು ಎಂಬುದಕ್ಕೆ ಈ ಸ್ಟೋರಿಯೇ ನೈಜ ನಿದರ್ಶನ. ಹೌದು, ಕೇರಳದವರಾದ ಸಚಿನ್ ಮತ್ತು ಭವ್ಯಾ ಎಂಬುವವರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದು ಆತ್ಮೀಯ ಸ್ನೇಹಿತರಾಗಿರುತ್ತಾರೆ. ಆದರೆ ಹಲವು ತಿಂಗಳುಗಳ ಕಾಲ ಸ್ನೇಹಿತರಾಗಿದ್ದ ಇವರು ತುಂಬಾ ಆತ್ಮೀಯರಾಗಿದ್ದ ಕಾರಣ ಎಲ್ಲರಿಗೂ ಬರುವ ರೀತಿಯೇ ಅವರ ಕುಟುಂಬದಲ್ಲೂ ಸಹ ಇವರ ಸಂಬಂಧದ ಮೇಲೆ ಅನುಮಾನ ಮೂಡಲು ಶುರುವಾಗುತ್ತೆ. ಇನ್ನು ಇಂತಹ ಸಂದರ್ಭ ಬಂದಾಗ ಮೊದಲು ಎಚ್ಚರಿಕೆ ನೀಡುವುದು ಹುಡುಗಿಯ ಮನೆಯಲ್ಲೇ. ಅದೇ ರೀತಿ ಭವ್ಯ ಪೋಷಕರು ತಮ್ಮ ಅನುಮಾನದಿಂದಾಗಿ ಸಚಿನ್ ಜೊತೆ ಮಾತನಾಡದಂತೆ ಭವ್ಯಾಗೆ ಎಚ್ಚರಿಕೆ ಕೊಡುತ್ತಾರೆ.
ಇನ್ನು ತನ್ನ ಪೋಷಕರ ಮಾತಿಗೆ ಬೆಲೆಕೊಟ್ಟ ಭವ್ಯ ಸಚಿನ್ ಜೊತೆ ಮಾತನಾಡುವುದನ್ನೇ ನಿಲ್ಲಿಸಿಬಿಡುತ್ತಾಳೆ. ಆದರೆ ತುಂಬಾ ಆತ್ಮೀಯ ಸ್ನೇಹಿತರಾಗಿದ್ದ ಇವರು ದೂರವಾದ ಬಳಿಕ ತಮ್ಮದು ಸ್ನೇಹ ಮಾತ್ರವಲ್ಲ ನಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂಬುದು ಅವರಿಬ್ಬರಿಗೂ ತಿಳಿಯುತ್ತದೆ. ಇನ್ನು ಪ್ರೀತಿ ಅಂತ ಗೊತ್ತಾದ ಮೇಲೆ ಸುಮ್ಮನಿರಲು ಆಗುತ್ತದೆಯೇ..ತನ್ನ ಕುಟುಂಬದವರಿಗೆ ತಿಳಿಯದಂತೆ ಭವ್ಯ ಸಚಿನ್ ಭೇಟಿ ಮಾಡಿ ತಮ್ಮ ಪ್ರೀತಿಯ ಬಗ್ಗೆ ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಕೆಲದಿನಗಳ ಕಾಲ ಇದು ಹೀಗೆ ಸಾಗುತ್ತದೆ.
ಇನ್ನು ಭವ್ಯ ಕೆಲಸಕ್ಕೂ ಸೇರಿಕೊಳ್ಳುತ್ತಾಳೆ. ಆದರೆ ಇದ್ದಕಿದ್ದ ಹಾಗೆ ವಿಪರೀತ ಬೆನ್ನು ನೋವು ಬಂದ ಕಾರಣ ಚೆಕ್ ಮಾಡಿಸಲೆಂದು ಸಚಿನ್ ಜೊತೆ ಆಸ್ಪತ್ರೆಗೆ ಹೋಗುತ್ತಾಳೆ. ಆದರೆ ಭವ್ಯಾಗೆ ಆಸ್ಫತ್ರೆಯಲ್ಲಿ ತನ್ನ ಜೀವನದ ಅತೀ ದೊಡ್ಡ ಶಾಕ್ ಕಾದಿರುತ್ತೆ ಅಂತ ಗೊತ್ತಿರೋದಿಲ್ಲ..ಹೌದು, ಮೆ’ಡಿಕಲ್ ಚೆಕಪ್ ಮಾಡಿದ ವೈದ್ಯರು ಆಕೆಗೆ ಕ್ಯಾ’ನ್ಸರ್ ಆಗಿರುವುದಾಗಿ ತಿಳಿಸುತ್ತಾರೆ. ಇದನ್ನ ಕೇಳಿದ ಇಬ್ಬರೂ ತಮ್ಮ ಜೀವನವೇ ಮುಗಿದುಹೋಯಿತೇನೋ ಅನ್ನುವಷ್ಟರ ಮಟ್ಟಿಗೆ ಶಾಕ್ ಗೆ ಒಳಗಾಗುತ್ತಾರೆ . ಆದರೆ ಇದರಿಂದ ಸಾವರಿಸಿಕೊಂಡ ಸಚಿನ್ ಭವ್ಯಾ ಅವರಿಗೆ ನಾನಿದ್ದೇನೆ, ಏನೇ ಆಗಲಿ ಎಷ್ಟೇ ಕಷ್ಟವಾಗಲಿ..ನಿನ್ನನ್ನ ಕಳೆದುಕೊಳ್ಳುವುದಿಲ್ಲ..ಉಳಿಸಿಕೊಳ್ಳುತ್ತೇನೆ ಎಂದು ಆಕೆಗೆ ಧೈರ್ಯ ತುಂಬುತ್ತಾನೆ.
ಬಳಿಕ ಭವ್ಯಾ ಅವರ ಕುಟುಂಬದವರಿಗೆ ಈ ವಿಷಯ ತಿಳಿಸದೇ ಆಕೆಯನ್ನ ಪ್ರತೀ ವಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೇಕಾದ ಚಿಕಿತ್ಸೆ ಕೊಡಿಸುತ್ತಿರುತ್ತಾನೆ ಸಚಿನ್. ಆದರೆ ಅದೇಗೋ ಈ ವಿಷಯ ಭವ್ಯ ಹಾಗೂ ಸಚಿನ್ ಅವರ ಪೋಷಕರಿಗೆ ತಿಳಿದು ಅವರು ಸಹ ಆಘಾತಗೊಳ್ಳುತ್ತಾರೆ. ಆಗ ಸಚಿನ್ ಒಳ್ಳೆಯತನಕ್ಕೆ ತಲೆಬಾಗಿದ ಭವ್ಯ ಪೋಷಕರು ತಮ್ಮ ತಪ್ಪಿನ ಬಗ್ಗೆ ಕ್ಷಮೆ ಕೇಳುತ್ತಾರೆ. ಇನ್ನು ಭವ್ಯ ಮನೆಯವರು ಕೂಡ ತಮ್ಮ ಮಗಳಿಗೆ ಚಿಕಿತ್ಸೆ ಕೊಡಿಸುವಷ್ಟು ಶಕ್ತರಾಗಿರಲಿಲ್ಲ. ತನ್ನ ಪ್ರೀತಿಯನ್ನ ಉಳಿಸಿಕೊಳ್ಳಲೇಬೇಕೆಂಬ ಹಠ ತೊಟ್ಟಿದ್ದ ಸಚಿನ್ ಹಣ ಹೊಂದಿಸಲು ಸಿಕ್ಕ ಸಿಕ್ಕ ಕಡೆ ಕೆಲಸ ಮಾಡುತ್ತಾನೆ. ಇನ್ನು ಇದೆ ವೇಳೆ ತನ್ನ ಆಸೆಯ MA ಪದವಿಯನ್ನ ಮಾಡುವುದನ್ನ ಕೈಬಿಡುತ್ತಾನೆ.
ಭವ್ಯಾ ಅವರಿಗೆ ಕ್ಯಾನ್ಸರ್ ಇದ್ದ ಕಾರಣ ಆಸ್ಪತ್ರೆಯಲ್ಲಿ ಆಕೆಯ ಜೊತೆ ಇರಬೇಕಾಗಿರುವ ಅವಶ್ಯಕತೆ ಇದ್ದ ಕಾರಣ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುತ್ತಾನೆ. ಇನ್ನು ಇದೆ ಮದುವೆಯ ಸಂದರ್ಭದಲ್ಲಿ ಮದುವೆಗೆ ಬಂದ ಬಂಧುಗಳಿಂದ ಹಣದ ಸಹಾಯವು ದೊರೆಯುತ್ತದೆ. ಭವ್ಯ ಶಸ್ತ್ರ ಚಿಕಿತ್ಸೆಗೆ ಬೇಕಾದ ಹಣವನ್ನೆಲ್ಲಾ ಹೊಂದಿಸಿದ ಮೇಲೆ, ಭವ್ಯಾ ಆಪರೇಷನ್ ಗೆ ಹೋಗುವುದಕ್ಕೆ ಮುಂಚೆ ಸಚಿನ್ ಹೇಳಿದಿಷ್ಟು. ನನಗೆ ನಾಳೆ ಏನಾಗುತ್ತೆ ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ ಭವ್ಯ ನನಗೆ ಬೇಕು ಅಷ್ಟೇ. ಅದಕ್ಕಾಗಿ ನಾನು ಏನೂ ಬೇಕಾದರೂ ಮಾಡಲು ಸಿದ್ದ ಎಂದು ಕಣ್ಣೀರು ಸುರಿಸುತ್ತಾನೆ.
ಆದರೆ ಸತ್ಯವಾದ, ಸ್ವಚ್ಛವಾದ ಪ್ರೀತಿಗೆ ಆ ಭಗವಂತ ಕೂಡ ತಲೆಬಾಗುತ್ತಾನೆ. ಹೌದು, ಭವ್ಯ ಅವರು ಕ್ಯಾ’ನ್ಸರ್ ಕಾಯಿಲೆಯನ್ನ ಗೆದ್ದು ಬರುತ್ತಾಳೆ. ಇವರಿಬ್ಬರ ಪ್ರೀತಿಗೆ ಆ ವಿಧಿಯೇ ತಲೆಬಾಗಿದ್ದು ಸುಳ್ಳಲ್ಲ. ಸ್ನೇಹಿತರೇ ಈ ಸುದ್ದಿಯ ಬಗ್ಗೆ ನಿಮಗೆ ಮೊದಲೇ ತಿಳಿದಿರಬಹುದು, ಇಲ್ಲದಿರಬಹುದು..ಆದರೆ ಇಂತಹ ವಿಷಯಗಳನ್ನ ನಾವು ಮತ್ತೆ ಮತ್ತೆ ಓದುತ್ತಿದ್ದರೆ ನಮ್ಮ ಜೀವನಕ್ಕೂ ಒಂದು ಪಾಠವಾಗವುದಂತೂ ಸುಳ್ಳಲ್ಲ.. ಸ್ನೇಹಿತರೇ, ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..