ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಜೋಡಿಗಳೆಂದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಂದನ್ ಕುಮಾರ್ ಹಾಗೂ ಚಿನ್ನು ಖ್ಯಾತಿಯ ಕವಿತಾ ಗೌಡ ಅವರು. ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಕನ್ನಡಿಗರ ಮನೆಮಾತಾಗಿದ್ದ ಈ ಜೋಡಿಗಳು ಧಾರಾವಾಹಿಯ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದ್ದು ಅಂದಹಾಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಾಲದಿಂದಲೂ ಕೂಡ ಕವಿತಾ ಗೌಡ ಹಾಗೂ ಚಂದನ್ ನಡುವೆ ಸ್ನೇಹ ಬೆಳೆದಿದ್ದು ಎಲ್ಲರ ಮನಸ್ಸನ್ನು ಈ ಜೋಡಿಗಳು ಸೆಳೆದಿದ್ದರು.
ಈ ನಡುವೆ ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಸಹ ಆಗಾಗ ಕೇಳಿಬರುತ್ತಲೇ ಇತ್ತು. ಒಬ್ಬರು ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದರು. ಇಬ್ಬರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ಅನೇಕ ಫೋಟೋಗಳು ಇದಕ್ಕೆ ಸಾಕ್ಷಿ ಒದಗಿಸುತ್ತಿವೆ. ಆದರೆ ಎಂದೂ ಕೂಡ ಚಂದನ್ ಹಾಗೂ ಕವಿತಾ ಈ ಬಗ್ಗೆ ಅಧಿಕೃತವಾಗಿ ಪ್ರೀತಿಯ ವಿಷಯವಾಗಲಿ ಮದುವೆ ವಿಷಯವಾಗಲಿ ಬಾಯಿ ಬಿಟ್ಟಿರಲಿಲ್ಲ. ಇನ್ನು ಚಂದನ್ ಕಳೆದ ವರುಷ ಮಾರ್ಚ್ 11 ರಂದು ತೆಲುಗು ಸಾವಿತ್ರಮ್ಮಗಾರಿಕಿ ಅಬ್ಬಾಯಿ ಸೀರಿಯಲ್ಗೆ ಕೊನೇ ದಿನದ ಶೂಟಿಂಗ್ ಮುಗಿಸಿಕೊಟ್ಟು ಬಂದಿದ್ದರು.
ಇದಕ್ಕೆ ಮಾಧ್ಯಮದವರು ಕಾರಣ ಕೇಳಿದ್ದಕ್ಕೆ ಮದುವೆ ಹಾಗೂ ಪರ್ಸನಲ್ ಲೈಫ್ನ ಕಾರಣ ನೀಡಿದ್ದರು. ಹೀಗಾಗಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಅನುಮಾನ ಎಲ್ಲರಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಮೂಡಿತ್ತು. ನಂಗೆ ಸ್ವಲ್ಪ ಫ್ರೀಡಂ ಬೇಕಾಗಿದ್ದು ಮದುವೆ ಪ್ಲ್ಯಾನ್ ಕೂಡ ನಡೆಯುತ್ತಿದೆ. ಪರ್ಸನಲ್ ಜೀವನದ ಕಡೆಗೆ ಗಮನ ಹರಿಸಬೇಕಿದ್ದು ಇದನ್ನು ನಾನು ಧಾರವಾಹಿ ಟೀಮ್ನವರಿಗೆ ಮೊದಲೇ ಹೇಳಿದ್ದೆ. ಅದಕ್ಕೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡರು ಎಂದು ಹೇಳಿದ್ದರು .
ಚಂದನ್ ತಮ್ಮ ವೈಯುಕ್ತಿಕ ಬದುಕಿನ ಮದುವೆಯ ಕುರಿತಾಗಿ ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದು ಹಾಗಂತ ಅವರು ಎಲ್ಲವನ್ನೂ ಖಡಾಖಂಡಿತವಾಗಿ ನಿರಾಕರಿಸಿಲ್ಲ. ಮದುವೆ ಆಗಬೇಕು ಎಂದು ನಿರ್ಧರಿಸಿರುವುದು ನಿಜ ಸ್ವಲ್ಪ ದಿನ ಮುಂಚೆ ಆರಾಮಾಗಿ ಸ್ಟೈಲಿಶ್ ಆಗಿ ಓಡಾಡಿಕೊಂಡು ಇರೋಣ ಅಂದುಕೊಂಡಿದ್ದೇನೆ. ಧಾರಾವಾಹಿ ಮಾಡುವಾಗ ಆ ಪಾತ್ರಕ್ಕೆ ತಕ್ಕಂತೆ ನಾವು ಇರಬೇಕಾಗುತ್ತದೆ. ಅದರಿಂದ ಆಚೆ ಬಂದು ಇನ್ನು ಮೂರು-ನಾಲ್ಕು ತಿಂಗಳು ಆರಾಮಾಗಿದ್ದು ಹೋಟೆಲ್ ಬ್ಯುಸಿನೆಸ್ ಇನ್ನಷ್ಟು ವಿಸ್ತರಿಸಿ ಆ ನಂತರ ಸಿನಿಮಾ ಕಡೆಗೆ ಗಮನ ಹರಿಸುತ್ತೇನೆ ಎನ್ನುವ ಮೂಲಕ ಸದ್ಯಕ್ಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡದೆ ತಡೆ ಹಿಡಿದ್ದರು.
ತಾವು ಮದುವೆ ಆಗುವ ಹುಡುಗಿ ಕವಿತಾ ಹೌದೋ ಅಲ್ಲವೋ ಎಂಬ ಬಗ್ಗೆ ಚಂದನ್ ಹೌದು ಎಂದೂ ಹೇಳಿಲ್ಲ ಅಲ್ಲ ಎಂದೂ ಹೇಳಿಲ್ಲ. ಎಸ್ ಎಂದರೆ ಅದೇ ಸುದ್ದಿ ಹಬ್ಬುತ್ತದೆ. ನೋ ಎಂದರೆ ಮತ್ತಿನ್ಯಾರು ಎಂಬ ಪ್ರಶ್ನೆ ಉದ್ಬವ ಆಗುತ್ತದೆ. ಈ ಎರಡೂ ಬೇಡ ಎನ್ನುವ ಮೂಲಕ ಕುತೂಹಲದ ಕಿಚ್ಚು ಹೆಚ್ಚಿಸಿದ್ದರು. ಆದರೆ ಈ ಎಲ್ಲಾ ಸಸ್ಪೆನ್ಸ್ ಗಳಿಗೂ ನಂತರ ತೆರೆ ಬಿದ್ದಿತು.
ಹೌದು ಕಳೆದ ವರುಷ ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿಗಳು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕವಿತಾ ಗೌಡ ಹಾಗೂ ಚಂದನ್ ಉಂಗುರ ಬದಲಿಸಿಕೊಂಡರು.ಕೊರೊನಾ ಎರಡನೇ ಅಲೆ ಎದ್ದಿದ್ದ ಕಾರಣ ಕುಟುಂಬಸ್ಥರು ಆಪ್ತರು ಮತ್ತು ಕೆಲ ಸ್ನೇಹಿತರು ಮಾತ್ರ ಕವಿತಾ ಗೌಡ ಹಾಗೂ ಚಂದನ್ ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಿದ್ದರು.
ಇನ್ನು ಮೇ 14 ರಂದು ಈ ಜೋಡಿಗಳ ವಿವಾಹ ಸಮಾರಂಭ ಜರುಗಿದ್ದು ಕೊರೊನಾ ಲಾಕ್‌ಡೌನ್ ಇದ್ದ ಕಾರಣ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಕೋವಿಡ್ ನಿಯಮಗಳ ಅನ್ವಯದಂತೆ ಚಂದನ್ ಹಾಗೂ ಕವಿತಾ ಅವರ ವಿವಾಹವು ಸರಳವಾಗಿ ನಡೆಯಿತು. ಇನ್ನು ಚಂದನ್ ಮತ್ತು ಕವಿತಾ ಮಾಸ್ಕ್ ಧರಿಸಿಯೇ ಮದುವೆಯಾಗಿದ್ದು ವಿಶೇಷವಾಗಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯನ್ನು ಒತ್ತಿದೆ.
ಸದ್ಯ ವಿವಾಹವಾದ ಬಳಿಕ ಇವರಿಬ್ಬರ ಒಂದಲ್ಲ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ನಡುವೆ ಇವರಿಬ್ಬರ ಫನ್ನಿ ವಿಡಿಯೋಗಳು ಕೂಡ ವೈರಲ್ ಆಗಿದೆ. ಇದೆದಲ್ಲದರ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಕವಿತಾಗೌಡ ರವರು ಡ್ಯಾನ್ಸ್ ಶೋ ಒಂದರಲ್ಲಿ ಹಾಟ್ ಆಗಿ ನೃತ್ಯ ಮಾಡಿರುವುದನ್ನು ನೋಡಬಹುದು.