ಕಲರ್ಸ್ ಕನ್ನಡದ ಧಾರಾವಾಹಿ ಆಗಿ ಹೊರಹೊಮ್ಮಿದ್ದ ಲಕ್ಷ್ಮಿ ಬಾರಮ್ಮ ಮೂಲಕ ಚಂದನ್ ಕುಮಾರ್ ಹಾಗೂ ನಟಿ ಚಿನ್ನು ಅಲಿಯಾಸ್ ಕವಿತಾ ಗೌಡ ಹೆಚ್ಚು ಪ್ರಖ್ಯಾತಿ ಪಡೆದುಕೊಂಡ ಕಲಾವಿದರು. ಇವರಿಬ್ಬರು ಪ್ರೀತಿಸಿ ಮದುವೆ ಆಗಿರುವ ಆ ವಿಚಾರ ನಿಮಗೂ ಗೊತ್ತು. ಹೌದು ನಟ ಚಂದನ್ ಕುಮಾರ್ ಅವರು ಇತ್ತೀಚಿಗೆ ಒಂದು ದೊನ್ನೆ ಬಿರಿಯಾನಿ ಹೋಟೆಲ್ ನ ಕೂಡ ಆರಂಭಿಸಿದ್ದಾರೆ. ಕನ್ನಡದಲ್ಲಿ ಕೆಲ ದಾರವಾಯಿಗಳಲ್ಲಿ ಕಾಣಿಸಿದ್ದ ಚಂದನ್ ಅವರು ನಂತರದ ದಿನದಲ್ಲಿ ಒಂದೆರೆಡು ಸಿನಿಮಾ ಸಹ ಮಾಡಿದರು. ಆದರೆ ಅದು ಅಷ್ಟಾಗಿ ಯಶಸ್ಸು ತಂದುಕೊಡಲಿಲ್ಲ. ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ತೆಲಗು ಕಿರುತೆರೆಯಲ್ಲಿ ಒಂದು ಸೀರಿಯಲ್ ಮೂಲಕ ಚಂದನ್ ಅವರು ನಟನೆ ಮಾಡಲು ಆರಂಭಿಸಿದ್ದಾರೆ.
ಸಾವಿತ್ರಮ್ಮಗಾರು ಅಬ್ಬಾಯಿ ಎನ್ನುವ ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದರು ಚಂದನ್. ಹೌದು ಇದೆ ಸೀರಿಯಲ್ ನ ಟೆಕ್ನಿಷಿಯನ್ ಮತ್ತು ಚಂದನ್ ಕುಮಾರ್ ಅವರ ನಡುವೆ ಮೊನ್ನೆ ಒಂದು ಗಲಾಟೆ ನಡೆದಿದೆ. ಚಂದನ್ ಅವರ ತಾಯಿ ಅನಾರೋಗ್ಯ ಟೆನ್ಶನ್ ನಲ್ಲಿ ಇದ್ದು, ಶೂಟಿಂಗ್ ಸೆಟ್ ನಲ್ಲಿ ಅವನನ್ನು ಕರೆದುಕೊಂಡು ಬಾ ಎಂದು ಏಕವಚನದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಮಾತನಾಡಿದ್ದಾನೆ. ಆಗ ಸಲಗೆಯಲ್ಲಿ ಚಂದನ್ ಅವರು ಬರುತ್ತೇನೆ ಎಂದು ಆ ವ್ಯಕ್ತಿಯನ್ನು ಹಿಂದೆ ತಳ್ಳಿದ್ದರಂತೆ. ನಂತರ ಇದೇ ಕಾರಣಕ್ಕೆ ಅವರೆಲ್ಲರೂ ಒಟ್ಟಿಗೆ ಸೇರಿ, ಮೊದಲೇ ಪ್ರಿ ಪ್ಲಾನ್ ಮಾಡಿ, ನಟ ಚಂದನ್ ಮೇಲೆ ಆರೋಪ ಮಾಡಿ, ಜಗಳ ಮಾಡಿ ಚಂದನ್ ಮೇಲೆ ಹಲ್ಲೆ ಮಾಡಲಾಗಿದೆ. ಅದರ ವಿಡಿಯೋ ನೀವೂ ನೋಡಿದ್ದೀರಿ. ಇದೇ ವಿಚಾರವಾಗಿ ಚಂದನ್ ಅವರ ಪತ್ನಿ ನಟಿ ಕವಿತಾ ಗೌಡ ಇದೀಗ ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರ ಹಾಕಿದ್ದಾರೆಇದನ್ನು ಇಲ್ಲಿಗೆ ಬಿಡುವುದಿಲ್ಲ,

ಮುಂದೊಂದು ದಿನ ಕಲಾವಿದರನ್ನು ಅವಮಾನ ಮಾಡುವ ಈ ರೀತಿ ಘಟನೆಗಳು ನಡೆಯಬಹುದು ಎಂದು ಹೇಳಿದ್ದಾರೆ. ಜೊತೆಗೆ ವಿಡಿಯೋ ಕೆಳಗಡೆ ನಾನು ಕೆಲವರ ಕಾಮೆಂಟ್ ನೋಡಿದೆ, ಕಾಮನ್ ಪೀಪಲ್ ತುಂಬಾ ಕೆಟ್ಟದಾಗಿ ಕೆಲವರು ಅಲ್ಲಿ ಮೆಸೇಜ್ ಮಾಡಿದ್ದಾರೆ. ಚಂದನ್ ಗೆ ನೀನು ಅಲ್ಲಿಗೆ ಯಾಕೆ ಹೋಗಬೇಕಿತ್ತು, ಇದೆಲ್ಲ ನಿನಗೆ ಬೇಕಿತ್ತಾ ಹಾಗೆ ಹೀಗೆ ಎಂದು ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಅಂತವರಿಗೆ ನಾನು ಒಂದು ಮಾತು ಹೇಳುತ್ತೇನೆಂದ ಕವಿತಾ ಗೌಡ ಅವರು, ನಾವು ಮೀಡಿಯಾದಲ್ಲಿ ಕೆಲಸ ಮಾಡುತ್ತೇವೆ, ನೀವು ಕಾರ್ಪೊರೇಟ್ ನಲ್ಲಿ ಕೆಲಸ ಮಾಡುತ್ತೀರಿ. ಬೆಂಗಳೂರು ಬಿಟ್ಟು ನೀವು ಯಾಕೆ ಹೈದ್ರಾಬಾದ್ ಗೆ ಹೋಗುತ್ತೀರಿ ಕೆಲ್ಸ ಮಾಡುವುದಕ್ಕೆ ಎಂದಿದ್ದಾರೆ.

ಹಾಗೆ ಅಲ್ಲಿ ದುಡ್ಡು ಹೆಚ್ಚಿಗೆ ಕೊಡುತ್ತಾರೆ ಎಂದು ಹೋಗುತ್ತೀರಾ ಅಲ್ಲವೇ, ಅದೇ ರೀತಿ ನಾವು ಕೂಡ ನಿಮ್ಮನ್ನು ಪ್ರಶ್ನೆ ಮಾಡಬಹುದು ಎಂದು ಮಾತನಾಡಿದ್ದಾರೆ ಕವಿತಾಇವರ ವಿಡಿಯೋ ನೋಡಿದ ಕೆಲವರು ಈಕೆಯ ಮಾತಿನಲ್ಲಿ ಗೊತ್ತಾಗುತ್ತದೆ ಈಕೆಯ ದರ್ಪ ಅದೆಷ್ಟೋ ಇರಬಹುದು ಎಂದು ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ ನೆಟ್ಟಿಗರು. ಕಾಮನ್ ಪೀಪಲ್ ಎಂದು ಮಾತನಾಡುತ್ತಾಳೆ, ಈಕೆ ಏನು ಮೇಲಿಂದ ಉದುರಿ ಬಂದಿದ್ದಾಳ, ಈಕೆ ಏನು ದೊಡ್ಡ ಸೆಲೆಬ್ರಿಟಿ ಆಗಿದ್ದಾಳ, ನಾವು ನಿಮ್ಮ ತಲೆ ನೋವು ನಟನೆ ಸೀರಿಯಲ್ ಗಳ ನೋಡಿದರೆ ನಿಮಗೆ ದುಡ್ಡು ಎಲ್ಲಾ, ನಾವೇ ಇಲ್ಲ ಅಂದ್ರೆ ನಿಮ್ಮದೇನು ಇಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ಏಕವಚನದಲ್ಲಿಯೇ ಮತ್ತೆ ಕಮೆಂಟ್ ಮೂಲಕ ಅವರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೇನೇ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..