Karnataka-Elections

Karnataka Elections : ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ರಾ-ಸಲೀಲೆ ಫೋಟೊ ವೈರಲ್‌?

Entertainment/ಮನರಂಜನೆ

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರದ್ದೆಂದು ಹೇಳಲಾದ ರಾ-ಸಲೀಲೆ ಫೋಟೊ ಒಂದು ವೈರಲ್‌ ಆಗಿದೆ. ಬಿಜೆಪಿ ಟಿಕೆಟ್‌ ಹಂಚಿಕೆಯ ಹೊತ್ತಿನಲ್ಲೇ ಇದು ಬಿಡುಗಡೆಗೊಂಡಿದ್ದು, ಚರ್ಚೆಗೆ ಇನ್ನಷ್ಟು ಕಾವು ನೀಡಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿರುವ ಹಂತದಲ್ಲಿ ಶಾಸಕರೊಬ್ಬರ ರಾ-ಸಲೀಲೆಯ ಚಿತ್ರಗಳು ವೈರಲ್‌ ಆಗಿವೆ. ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಬ್ಬರ ಜತೆ ಆತ್ಮೀಯವಾಗಿರುವ ಭಂಗಿಯ ಚಿತ್ರಗಳು ಓಡಾಡಲು ಶುರುವಾಗಿದ್ದು, ಇದು ಆಡಳಿತ ಪಕ್ಷಕ್ಕೆ ದೊಡ್ಡ ಮುಜುಗರವನ್ನು ಉಂಟು ಮಾಡಲಿದೆ.

ಪುತ್ತೂರಿನಲ್ಲಿ ಹಾಲಿ ಶಾಸಕರಾಗಿರುವ ಸಂಜೀವ ಮಠಂದೂರು ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂಬ ದೊಡ್ಡ ಲಾಬಿಯೊಂದು ಬಿಜೆಪಿಯಲ್ಲಿ ನಡೆಯುತ್ತಿದೆ. ಅದರ ಜತೆಗೆ ಬಿಜೆಪಿ ವಿರುದ್ಧ ಖಡಾಖಡಿ ಹೋರಾಟಕ್ಕೆ ಕಾಂಗ್ರೆಸ್‌ ಕೂಡಾ ಸಿದ್ಧವಾಗಿದೆ. ಹೀಗಾಗಿ ಈ ಫೋಟೊಗಳು ವೈರಲ್‌ ಆಗುವುದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಮಠಂದೂರು ಅವರಿಗೆ ಸಂಬಂಧಿಸಿದ ವಿಡಿಯೋ ಒಂದಿದೆ ಎಂಬ ಸುದ್ದಿ ಸುಮಾರು ಒಂದು ವರ್ಷದಿಂದಲೇ ಹರಿದಾಡುತ್ತಿದೆ. ವಿಡಿಯೊ ಮಾಡಿದ್ಯಾರು? ಅವರು ಹೇಗೆಲ್ಲ ಮಠಂದೂರು ಅವರನ್ನು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರೆ ಎಂಬ ಬಗೆಗೂ ಸುದ್ದಿಗಳಿದ್ದವು. ಇದೀಗ ಟಿಕೆಟ್‌ ಹಂಚಿಕೆ ಫೈನಲ್‌ ಹಂತಕ್ಕೆ ತಲುಪಿರುವಾಗ ಫೋಟೊವನ್ನು ಬಿಡುಗಡೆ ಮಾಡಲಾಗಿದೆ.

ವಿರೋಧ ಕಟ್ಟಿಕೊಂಡಿರುವ ಮಠಂದೂರು

ಸಂಜೀವ ಮಠಂದೂರು ಅವರು ಪುತ್ತೂರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಬಗ್ಗೆ ಮಾತುಗಳಿವೆಯಾದರೂ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಕೆಲವು ಸಂಘ ಪರಿವಾರದ ನಾಯಕರ ಜತೆಗೇ ಅವರಿಗೆ ಉತ್ತಮ ಬಾಂಧವ್ಯವಿಲ್ಲ. ಅವರು ಇತ್ತೀಚೆಗೆ ಅಮಿತ್‌ ಶಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಂಚಲು ಹೋದಾಗ ಕೆಲವೆಡೆ ಅವರನ್ನು ತರಾಟೆಗೆ ತೆಗೆದುಕೊಂಡಿರುವುದು ವೈರಲ್‌ ಆಗಿತ್ತು.

ಸಂಘ ಪರಿವಾರದ ನಾಯಕ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ʻಮಳೆಗಾಲದಲ್ಲಿ ಹುಟ್ಟಿಕೊಳ್ಳುವ ಅಣಬೆʼಗೆ ಹೋಲಿಸಿದ್ದು ಕೂಡಾ ಅವರ ಮೇಲೆ ಸಿಟ್ಟಿಗೆ ಕಾರಣವಾಗಿತ್ತು. ಅವರೆಲ್ಲ ಕತ್ತಿ ಮಸೆಯುತ್ತಲೇ ಇದ್ದಾರೆ ಎನ್ನಲಾಗಿದೆ. ಸಂಜೀವ ಮಠಂದೂರು ಅವರಿಗೆ ಟಿಕೆಟ್‌ ಕೊಡಬಾರದು ಎನ್ನುವ ವಾದದ ಜತೆಗೆ ಅರುಣ್‌ ಕುಮಾರ್‌ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ಪುತ್ತೂರು ಬಿಜೆಪಿ ಅಧ್ಯಕ್ಷ ಜಗನ್ನಿವಾಸ ರಾವ್‌ ನಡುವೆ ಟಿಕೆಟ್‌ಗಾಗಿ ಫೈಟ್‌ ಆರಂಭಗೊಂಡಿದೆ. ಹೀಗಾಗಿ ಟಿಕೆಟ್‌ ತಪ್ಪಿಸಲು ಯಾವುದಾದರೊಂದು ಮೂಲದಿಂದ ಫೋಟೊ ಸೋರಿಕೆ ಆಗಿರಬಹುದು ಎಂದು ಹೇಳಲಾಗುತ್ತಿದೆ.

ಈ ನಡುವೆ, ಕಾಂಗ್ರೆಸ್‌ ಪುತ್ತೂರು ಕ್ಷೇತ್ರವನ್ನು ಹೇಗಾದರೂ ಮಾಡಿ ಗೆದ್ದುಕೊಳ್ಳಬೇಕು ಎಂಬ ಸವಾಲನ್ನು ತೆಗೆದುಕೊಂಡಿದೆ. ಹೀಗಾಗಿ ಚುನಾವಣೆ ಟಿಕೆಟ್‌ ಘೋಷಣೆಯಾದ ಬಳಿಕ ಮಠಂದೂರು ಅವರ ಫೋಟೊ ವಿಡಿಯೊ ಬಿಡುಗಡೆಗೆ ಪ್ಲ್ಯಾನ್‌ ಮಾಡಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಟಿಕೆಟ್‌ ಕೊಟ್ಟು ಸೋಲುವುದಕ್ಕಿಂತ ಟಿಕೆಟ್‌ ಕೊಡದೇ ಇರುವುದು ಬೆಟರ್‌ ಎಂಬ ನೆಲೆಯಲ್ಲಿ ಬಿಜೆಪಿಯ ಒಳಗಿನ ಯಾರೋ ಈ ಚಿತ್ರ ಬಿಡುಗಡೆ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಶಾಸಕರಿಗೆ ರಾ-ಸಲೀಲೆ ಕಳಂಕ ಹೆಚ್ಚುತ್ತಲೇ ಇರುವುದಂತೂ ನಿಜ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.