ಕಾಂತಾರ ಸಿನಿಮಾ ನೋಡಿದ ಜನರಿಗೆ ಮಾತ್ರ ಮೈ ನಡುಗಿದ್ದಲ್ಲ.. ಇತ್ತ ಅಕ್ಕ ಪಕ್ಕದ ಸಿನಿಮಾ ಇಂಡಸ್ಟ್ರಿಯವರಿಗೂ ಸಹ ಕಾಂತಾರ ಸಿನಿಮಾದ ಕಲೆಕ್ಷನ್ ಕೇಳಿ ಮೈ ನಡುಗಿರೋದು ಸತ್ಯ.. ಹೌದು ಕಾಂತಾರ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿ ಇಂಫ಼ಿಗೆ ಹದಿನಾರು ದಿನಗಳು.. ಆದರೆ ಈ ಹದಿನಾರು ದಿನಗಳಲ್ಲಿ ಬಹುದೊಡ್ಡ ಬದಲಾವಣೆಗಳು ಆಗಿ ಹೋದವು.. ರಿಷಭ್ ಶೆಟ್ಟಿ ಕನ್ನಡದ ಪ್ರತಿಭಾವಂತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು.. ಆದರೀಗ ಪ್ಯಾನ್ ಇಂಡಿಯಾದ ಸ್ಟಾರ್ ನಟ ಮಾತ್ರವಲ್ಲ ಸ್ಟಾರ್ ನಿರ್ದೇಶಕ ಕೂಡ ಹೌದು.. ಹದಿನಾರೇ ದಿನದಲ್ಲಿ ಸಿನಿಮಾ ಐದು ಭಾಷೆಗಳಿಗೆ ಡಬ್ ಆಯಿತು.. ತಮಿಳು ತೆಲುಗು ಹಿಂದಿ ಮಳಯಾಳಂ ಎಲ್ಲಾ ಭಾಷೆಯಿಂದಲೂ ಸಿನಿಮಾ ಬೇಡಿಕೆ ಬಂದ ಕಾರಣ ಎಲ್ಲಾ ಭಾಷೆಯಲ್ಲಿಯೂ ಡಬ್ ಆಗಿ ಹಿಂದಿ ತೆಲುಗಿನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆ ಬರೆದಿದೆ..

ಹೌದು ಕಾಂತಾರ ಸಿನಿಮಾ ಕಳೆದ ವರ್ಷ ರಿಷಭ್ ಶೆಟ್ಟಿ ಅವರು ಕಂಡ ಕನಸು.. ಆ ಕನಸನ್ನು ನನಸು ಮಾಡಲು ನೆರವಾದವರು ಹೊಂಬಾಳೆ ಫಿಲಂಸ್.. ಒಳ್ಳೆಯ ಸಿನಿಮಾಗಳಿಗೆ ಹಿಂದೆ ಮುಂದೆ ನೋಡದೇ ಹಣ ಹಾಕಲು ಸದಾ ಮುಂದಿರುವ ಹೊಂಬಾಳೆ.. ಇತ್ತ ಪ್ರತಿಭಾವಂತ ನಿರ್ದೇಶಕ ರಿಷಭ್ ಶೆಟ್ಟಿ ನಟನಾಗಿಯೂ ಒಂದೊಳ್ಳೆ ಕತೆ ಮೂಲಕ ತೆರೆ ಮೇಲೆ ಬಂದಾಗ ಆಗೋ ಮ್ಯಾಜಿಕ್ ಯಾವ ರೀತಿ ಇರುತ್ತದೆ ಎಂದರೆ ನೋಡುಗರ ಮನಸ್ಸು ಪುಳಕಗೊಂಡು ಮೈ ನಡುಕಗೊಂಡರೆ ಅತ್ತ ಬಾಕ್ಸ್ ಆಫೀಸ್ ಚಿಂದಿಯಾಗಿದೆ.. ಹೌದು ಮೊದಲು ಕನ್ನಡಕ್ಕೆ ಮಾತ್ರವೇ ಈ ಸಿನಿಮಾವನ್ನು ಮಾಡಲಾಗಿತ್ತು.. ಆದರೆ ಮೊದಲ ವಾರ ಬಾಯಿಂದ ಬಾಯಿಗೆ ಭರ್ಜರಿ ಪ್ರಚಾರವಾಗಿದ್ದು ಸಿನಿಮಾ ಭಾರತದಾದ್ಯಂತ ಕನ್ನಡದಲ್ಲಿಯೇ ಬಿಡುಗಡೆಯಾಗಿತ್ತು.. ಆದರೆ ಎಲ್ಲಾ ಭಾಷೆಗಳಲ್ಲಿಯೂ ಸಿನಿಮಾ ಬೇಕು ಎನ್ನುವ ಬೇಡಿಕೆಯ ಮೇರೆಗೆ ಅತಿವೇಗವಾಗಿ ಕೆಲವೇ ದಿನಗಳಲ್ಲಿ ಸಿನಿಮಾ ಡಬ್ ಆಗಿ ಬಿಡುಗಡೆಯೂ ಆಯಿತು.. ನಿರೀಕ್ಷೆಯಂತೆ ದೊಡ್ಡ ಮಟ್ಟದ ಯಶಸ್ಸು ಕಂಡಿತು.. ಸಿನಿಮಾ ಥಿಯೇಟರ್ ಗಳಲ್ಲಿ ಟಿಕೇಟ್ ಗಳು ಫುಟ್ ಪಾತಿನಲ್ಲಿ ಮಾರುವ ಬಿಸಿ ಬಿಸಿ ದೋಸೆ ಖಾಲಿಯಾಗುವಂತೆ ಖಾಲಿ ಯಾಗುತ್ತಿದ್ದು ಯಾವ ಥಿಯೇಟರ್ ನೋಡಿದರು ಹೌಸ್ ಫುಲ್ ಬೋರ್ಡ್ ಗಳು ಕಾಣುತ್ತಿದೆ..
ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ ಕಾಂತಾರ ಇಂದಿಗೆ ನೂರು ಕೋಟಿ ಕ್ಲಬ್ ಸೇರಿಯಾಗಿದೆ.. ಹೌದು ಭಾನುವಾರ ಒಂದೇ ದಿನ ಎಲ್ಲಾ ಭಾಷೆಗಳಿಂದ ಬರೋಬ್ಬರಿ 20 ಕೋಟಿಗೂ ಅಧಿಕ ಕಲೆಕ್ಷನ್ ಆಗಿದ್ದು ನೂರು ಕೋಟಿ ಕ್ಲಬ್ ಸೇರಿದ್ದು ರಿಷಭ್ ಶೆಟ್ಟಿ ಅವರ ತಂಡ ದಿಲ್ ಖುಶ್ ಆಗಿದೆ.. ಹೌದು ಕೇವಲ ಹಿಂದಿ ಹಾಗೂ ತೆಲುಗು ಎರಡೇ ಭಾಷೆಯಲ್ಲಿ ಹನ್ನೆರೆಡು ಕೋಟಿ ಕಲೆಕ್ಷನ್ ಆಗಿದ್ದು ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್ ಆಗಿದ್ದು ರಿಷಭ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಗೆ ಅಕ್ಕ ಪಕ್ಕದ ಸಿನಿಮಾ ಪ್ರಿಯರು ಸಂಪೂರ್ಣವಾಗಿ ಫಿದಾ ಆಗಿ ಹೋಗಿದ್ದಾರೆ..

ಹಣ ಮುಖ್ಯ.. ಹಣ ಇಲ್ಲವಾದರೆ ಏನೂ ಆಗದು ನಿಜ.. ಆದರೆ ಈ ಸಿನಿಮಾ ರಿಷಭ್ ಶೆಟ್ಟಿ ಅವರಿಗೆ ಹಣದ ಜೊತೆಗೆ ಹಣಕ್ಕಿಂತಲೂ ಹೆಚ್ಚಾಗಿ ಅವರಿಗೆ ದೇಶದಾದ್ಯಂತ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದುಕೊಟ್ಟಿದೆ.. ಕಳೆದ ವರ್ಷ ಕೆಜಿಎಫ್ ಯಾವ ಮಟ್ಟದಲ್ಲಿ ಜನರನ್ನು ಮೋಡಿ ಮಾಡಿತ್ತೋ ಅದೇ ರೀತಿ ಈ ವರ್ಷ ಕನ್ನಡದ ಕಾಂತಾರ ಸಿನಿಮಾ ಯಶಸ್ಸು ಕಾಣುತ್ತಿದೆ.. ಅದರಲ್ಲೂ ರಿಷಭ್ ಶೆಟ್ಟಿ ಅವರ ಸಿನಿಮಾ ಜೀವನದಲ್ಲಿ ಇದೊಂದು ಮುಖ್ಯ ಘಟ್ಟವಾಗಿದ್ದು ಮುಂದಿನ ದಿನಗಳಲ್ಲಿ ರಿಷಭ್ ಅವರ ಜವಾಬ್ದಾರಿ ಹೆಚ್ಚಾಗಿರುತ್ತದೆ... ಹೇಗೆ ಯಶ್ ಅವರ ಮುಂದಿನ ಸಿನಿಮಾಗಾಗಿ ಜನರು ಕಾಯುತ್ತಿರುವರೋ ಅದೇ ರೀತಿ ಕನ್ನಡದ ಮತ್ತೊಬ್ಬ ನಟ ನಿರ್ದೇಶಕ ರಿಷಭ್ ಅವರ ಮುಂದಿನ ಸಿನಿಮಾಗಾಗಿ ಭಾರತ ಕಾಯುವುದು ಸುಳ್ಳಲ್ಲ..

ಅದರಲ್ಲೂ ಮೊನ್ನೆ ಮೊನ್ನೆಯಷ್ಟೇ ಹಿಂದಿ ಭಾಷೆಯ ಮಾದ್ಯಮವೊಂದರ ಸಂದರ್ಶನದಲ್ಲಿ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ರಿಷಭ್ ಅವರನ್ನು ಎದ್ದು ನಿಲ್ಲಿಸಿ ಅವರ ಕಾಲಿಗೆ ಬಿದ್ದು ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿಬಿಟ್ಟೆ.. ನಾನು ನನ್ನ ಲವರ್ ಗಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದಿದ್ದು ನಿಜಕ್ಕೂ ಒಂದೊಳ್ಳೆ ಕನ್ನಡದ ಸಿನಿಮಾ ಮುಂದೆ ಎಲ್ಲರೂ ತಲೆ ಬಾಗಿರೋದಂತೂ ಸತ್ಯ..
ಒಬ್ಬ ನೀರು ಸರಬರಾಜು ಮಾಡುವ ಹುಡುಗನಿಂದ ಹಿಡಿದು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗೋವರೆಗಿನ ರಿಷಭ್ ಶೆಟ್ಟಿ ಅವರ ಜರ್ನಿ ನಿಜಕ್ಕೂ ರೋಚಕವೇ ಸರಿ.. ಅವರಲ್ಲಿದ್ದ ಪ್ರತಿಭೆಗೆ ಅವರು ಪಟ್ಟ ಕಷ್ಟಕ್ಕೆ ಕಾಂತಾರ ಸಿನಿಮಾದಲ್ಲಿ ಬರುವ ರೀತಿಯಲ್ಲಿಯೇ ಬಹುಶಃ ಆ ಗುಳಿಗ ದೈವವೇ ಬಂದು ಇಷ್ಟು ದೊಡ್ಡ ಮಟ್ಟದ ಯಶಸ್ಸು ನೀಡಿರಬಹುದು.. ಶುಭವಾಗಲಿ ರಿಷಭ್ ಅವರಿಗೆ.. ಹೊಂಬಾಳೆ ಫಿಲಂಸ್ ಇದೇ ರೀತಿ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಾಣ ಮಾಡಲಿ.. ನೂರು ಕೋಟಿ ಕ್ಲಬ್ ಸೇರಿದ ಕನ್ನಡದ ಅತಿ ದೊಡ್ಡ ಆರನೇ ಸಿನಿಮಾ ಕಾಂತಾರ ಎನಿಸಿಕೊಂಡಿದ್ದು ಮತ್ತಷ್ಟು ಯಶಸ್ಸು ದೊರೆಯಲಿ.. ಕಾಂತಾರ ಓಟ ನೋಡಿದರೆ ಇನ್ನೂ ಒಂದು ತಿಂಗಳ ಕಾಲ ಇದೇ ಮುಂದುವರೆಯುವಂತೆ ಇನ್ನೂ ಹೆಚ್ಚಾಗುವಂತೆ ಕಾಣುತ್ತಿದೆ.. ಶುಭವಾಗಲಿ ಜೈ ಕನ್ನಡ..