ಕಾಂತಾರ ಸಿನೆಮಾ ರೀತಿ ದೈವ ನ್ರತ್ಯ ನೋಡಿ….ವಿಡಿಯೋ

Watch Kantara Movie Divine Dance Video: ಸದ್ಯ ಕರಾವಳಿ ಭಾಗದ ದೈವ ಭೂತಾರಾಧನೆ ಬಗ್ಗೆ ಕಥೆ ಹೊಂದಿರುವ ಕಾಂತಾರ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ಮಧ್ಯೆ ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವರಿಗೆ ಕರ್ನಾಟಕ ಸರ್ಕಾರ ಶುಭಸುದ್ದಿ ನೀಡಿದೆ. ಹೌದು ದೈವ ನರ್ತನ ಮಾಡುವವರಿಗೆ ಮಾಸಾಶನ ನೀಡಲು ಸರ್ಕಾರ ತೀರ್ಮಾನಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್(Sunil Kumar) ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ.

60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹೌದು ಈ ಸಿನಿಮಾವನ್ನು ನೋಡಿದ ಅನೇಕರು ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಒಳ್ಳೆಯ ಯೋಜನೆಗಳನ್ನು ತರಬೇಕು ಅವರಿಗಾಗಿ ಮಾಸಾಶನ ನೀಡಬೇಕು ಎಂದು ಹೇಳುತ್ತಿದ್ದರು.

ಸಂಸ್ಕೃತಿ‌ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತಾಡಬಾರದು. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗವಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿಕೆ ನಟ ಚೇತನ್ ಅಹಿಂಸ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.ಭೂತಕೋಲ ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದಿದ್ದ ನಟ ಚೇತನ್ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದ್ದು ನಟ ಚೇತನ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಹಿಂದೂ ಜಾಗರಣಾ ವೇದಿಕೆ ದೂರು ದಾಖಲಿಸಿದೆ.

ನಟ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹ ವ್ಯಕ್ತಪಡಿಸಿದೆ.ಕಾಂತಾರ ಸಿನಿಮಾ ಕರ್ನಾಟಕ ಗಡಿಯನ್ನು ದಾಟಿ ಹೊರರಾಜ್ಯ ಹೊರದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಇನ್ನು ಸಿನಿಮಾದಲ್ಲಿ ತಾವು ದೈವ ನರ್ತನ ನೋಡಿರುತ್ತೀರಿ. ಕರಾವಳಿ ಭಾಗದಲ್ಲಿ ಈ ದೈವ ನರ್ತನದ ತಯಾರಿ ಕೋಲ ಹೇಗೆ ನಡೆಯುತ್ತದೆ ಹಾಗೂ ಯಾವ ರೀತಿ ದೈವದ ಮುಂದೆ ಪ್ರಶ್ನೆಗಳನ್ನು ಇಡುತ್ತಾರೆ ಎಂದು ತಿಳಿಯಲು ಲೇಖನಿಯ ಕೆಳಗಿನ ವಿಡಿಯೋ ನೋಡಿ.

ಕಾಂತಾರ ಸಿನಿಮಾ ಬಗ್ಗೆ ಹೇಳುವುದಕ್ಕೆ ಹೆಚ್ಚೆನೂ ಉಳಿದಿಲ್ಲ. ಏಕೆಂದರೆ ಆ ಸಿನಿಮಾ ಮಾಡಿದ ಮೋಡಿಗೆ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ರಿಷಬ್‌ ಶೆಟ್ಟಿಗೆ(Rishab Shetty) ಬಹುಪರಾಕ್‌ ಹೇಳಿದೆ. ಗಳಿಕೆಯಲ್ಲಿಯೂ ದೊಡ್ಡ ಯಶಸ್ಸು ಕಂಡ ಈ ಸಿನಿಮಾ ಪರಭಾಷಿಕರನ್ನೂ ಸೆಳೆದಿದೆ. ಅಷ್ಟೇ ಅಲ್ಲ ಕಾಂತಾರ ನೋಡಿದವರು ಪಾರ್ಟ್‌ 2 ಯಾವಾಗ ಎಂಬ ಉದ್ಘಾರವನ್ನೂ ತೆಗೆಯುತ್ತಿದ್ದಾರೆ.

ಆ ಸುದ್ದಿಗೆ ಪುಷ್ಠಿ ನೀಡುವಂತೆ ಕಾಂತಾರ 2 ಕೆಲಸಕ್ಕೆ ರಿಷಬ್‌ ಇಳಿದಿದ್ದಾರೆ ಸ್ಕ್ರಿಪ್ಟ್‌ ಕೆಲಸ ಆರಂಭಿಸಿದ್ದಾರೆ ಎಂಬ ಸುದ್ದಿ ಹರಿದಾಡಿದ್ದವು.ಆದರೆ ಆ ಕೆಲಸಕ್ಕೆ ಧುಮುಕುವುದಕ್ಕೂ ಮೊದಲು ಧರ್ಮಸ್ಥಳಕ್ಕೆ ರಿಷಬ್‌ ಭೇಟಿ ನೀಡಬೇಕಿದೆ. ಅಷ್ಟೇ ಅಲ್ಲ ಖಾವಂದರಾದ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಕಾಂತಾರ 2 ಸಿನಿಮಾ ಬಗ್ಗೆ ಚರ್ಚಿಸಬೇಕಿದೆ. ಹೀಗೆಂದು ಚಿತ್ರತಂಡವರೋ ಅಥವಾ ಸ್ವತಃ ರಿಷಬ್‌ ಶೆಟ್ಟಿ ಹೇಳಿಕೊಂಡಿಲ್ಲ. ಬದಲಿಗೆ ಇದು ದೈವದ ಆಜ್ಞೆ ದೈವದ ಆದೇಶವಾಗಿದೆ.

You might also like

Comments are closed.