Kantara

ಯುವಕನ ಮೈಮೇಲೆ ಬಂದ ಕಾಂತಾರ ದೈವ…ನೋಡಿ ವಿಡಿಯೋ

Entertainment/ಮನರಂಜನೆ

ಕನ್ನಡದ ಕಾಂತಾರ(Kantara) ಸಿನಿಮಾದಿಂದಾಗಿ ನಮ್ಮ ಕರ್ನಾಟಕದ (Karnataka) ಕರಾವಳಿಯಲ್ಲಿ (Karavali) ನಡೆಯುವ ದೈವಾರಾಧನೆಯ(Divine worship) ಬಗ್ಗೆ ಭಾರತದಾದ್ಯಂತ ಜನರು ತಿಳಿಯುತ್ತಿದ್ದಾರೆ. ಹೌದು ದೊಡ್ಡ ಪರದೆಯ ಮುಂದೆ ಇಂತಹ ಹಳೆಯ ಆಚರಣೆಗಳಿಗೆ ಜೀವ ತುಂಬಿ ಪ್ರೇಕ್ಷಕರಿಗೆ ತೋರಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಹೌದು ದೈವಾರಾಧನೆಯ ಜೊತೆಗೆ ನಮ್ಮ ಭಾರತದಲ್ಲಿ(India) ಇಂದಿಗೂ ಜೀವಂತವಾಗಿರುವ ವಿಭಿನ್ನ ಆಚರಣೆಗಳಿವೆ.

ಹೌದು ಕೇರಳದಲ್ಲಿ ತೆಯ್ಯಂ(Teyam In Kerala) ಎಂದು ಆಚರಿಸಲಾಗುತ್ತಿದ್ದು ನೋಡಲು ದೈವಾರಾಧನೆಯಂತೆ ಕೇರಳದ ಕಣತ್ತೂರಿನಲ್ಲಿ(Kanattur) ತೆಯ್ಯಂ ಎಂಬ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಹೌದು ಇದು ಕಾಸರಗೂಡಿನ (Kasaragud) ಕಾಣತ್ತೂರಿನ ವಿಶೇಷ ಉತ್ಸವವಾಗಿದ್ದು ಇಲ್ಲಿ ವೀರರ ಮತ್ತು ಪೂವರ್ಜರ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಇದನ್ನು ಹೆಚ್ಚಾಗಿ ಆಲಯಗಳಲ್ಲಿ ನಡೆಸುತ್ತಾರೆ. ಇನ್ನು ವರ್ಣರಂಜಿತವಾದ ಅಲಂಕಾರ ಭಾರವಾದ ಆಭರಣಗಳನ್ನು ಧರಿಸಿ ಸಂಗೀತ ವಾದ್ಯಗಳನ್ನು ನುಡಿಸುತ್ತಾ ಸಂಭ್ರಮಿಸುತ್ತಾರೆ.

ಇನ್ನು ಹಿಮಾಚಲ ಪ್ರದೇಶದಲ್ಲಿ (Himachal Pradesh) ವಿಭಿನ್ನವಾದ ಆಚರಣೆಗಳನ್ನು ರೂಢಿಸಿಕೊಂಡು ಬಂದಿರುವ ಉತ್ಸವವನ್ನು ಕುಲುವಿನಲ್ಲಿ ಕಾಣಬಹುದಾಗಿದ್ದು ಅದನ್ನು ಕುಲು ದಸರಾ(Kulu Dasara) ಎಂದೇ ಕರೆಯುತ್ತಾರೆ.

ಹಿಮಾಚಲ ಪ್ರದೇಶದಲ್ಲಿ ಇದೊಂದು ಜನಪ್ರಿಯವಾದ ಕಾರ್ಯಕ್ರಮವು ಹೌದು. ಇನ್ನು ಈ ಉತ್ಸವದಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದ ಕುಲುಗೆ ಜನರು ಭೇಟಿ ನೀಡುತ್ತಾರೆ.ಹೌದು ವಾಸ್ತವವಾಗಿ ಇದೊಂದು ದಸರಾ ಸಂಭ್ರಮವೇ ಆಗಿದೆ. ಇನ್ನು ಭಾರತದ ಅತ್ಯಂತ ಪವಿತ್ರವಾದ ತಾಣಗಳಲ್ಲಿ ವಾರಾಣಸಿ (Varanasi) ಕೂಡ ಒಂದು. ಹೌದು ಇಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಪವಿತ್ರ ಗಂಗಾನದಿಯ (River Ganga) ದಡದಲ್ಲಿ ನಡೆಯುವ ಗಂಗಾ ಆರತಿಯನ್ನು ನೋಡಲು ದೇಶ-ವಿದೇಶಗಳಿಂದ ಜನರು ಭೇಟಿ ನೀಡುತ್ತಾರೆ.




ನಾಗಾಲ್ಯಾಂಡ್‌ನಲ್ಲಿ (Nagaland) ಪ್ರತಿ ವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಹಾರ್ನ್‌ ಬಿಲ್‌ ಉತ್ಸವವನ್ನು ಆಚರಿಸಲಾಗುತ್ತದೆ. ಇನ್ನು ಇಲ್ಲಿ ನಾಗಾಲ್ಯಾಂಡ್‌ನ ಸ್ಥಳೀಯ ಬುಡಕಟ್ಟು ಜನರ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸುತ್ತದೆ. ಇನ್ನು ಕರ್ನಾಟಕದ ಕರಾವಳಿ ತೀರ ಪ್ರದೇಶಗಳಲ್ಲಿ ಭೂತ ಕೋಲವೆಂಬ ವಿಭಿನ್ನವಾದ ಆಚರಣೆಯನ್ನು ಜನರು ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನು ಭೂತ ಕೋಲ ದೈವಾರಾಧನೆ ಅಥವಾ ಭೂತ ಆರಾಧನೆ ಎಂದು ಕೂಡ ಕರೆಯುತ್ತಾರೆ.

ಹೌದು ಇಂತಹ ಉತ್ಸವವನ್ನು ಕಣ್ಣಾರೆ ಕಾಣಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಭಾಗಗಳಿಗೆ ನೀವು ಹೋಗಲೇಬೇಕು.ಡೋಲು ಬಡಿತಗಳು ಮೆರವಣಿಗೆಗಳು ಭಯ ಹುಟ್ಟಿಸುವ ವೇಷಭೂಷಣಗಳು ತುಳು ನಾಡಿನ ಭಾಷೆ ನಿಮ್ಮನ್ನು ಮಂತ್ರಮುಗ್ಧಗೊಳಿಸಬಹುದು. ಇಂತಹ ಸಂಭ್ರಮದ ಪೂಜಾ ವಿಧಿಗಳನ್ನು ನೋಡಲು ಡಿಸೆಂಬರ್‌ನಿಂದ ಮೇ ತಿಂಗಳ ನಡುವೆ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿ. ಭೇಟಿ ನೀಡಲು ಸಾಧ್ಯವಾಗದೆ ಇದ್ದರೆ ಕೆಳಗಿನ ವಿಡಿಯೋ ನೋಡಿ ಕಣ್ತುಂಬಿಕೊಳ್ಳಿ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.