
ಸಂಗೀತ ಎನ್ನುವುದು ಒಂದು ಔಷಧಿ ಎಂದು ವೈದ್ಯರು ಕೂಡ ಹೇಳುತ್ತಾರೆ, ಯಾಕೆಂದರೆ ಸಾಕಷ್ಟು ಮಾನಸಿಕ ಖಾಯಿಲೆಗೆ ಸಂಗೀತ ಕೇಳುವುದರಿಂದ ಚಿಕಿತ್ಸೆ ದೊರೆಯುತ್ತದೆ. ಹಾಗೂ ಅನೇಕ ದೇಶಗಳಲ್ಲಿ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆ ಮಾಡುವಾಗ ಅವರುಗಳಿಗೆ ಆ ನೋವನ್ನು ಮರೆಸಲು ಬೇರೆ ಯಾವುದೇ ಔಷಧಿ ಕೊಡದೆ ಅವರಿಷ್ಟದ ಸಂಗೀತವನ್ನು ನುಡಿಸಿ ಆಪರೇಷನ್ ಅನ್ನು ಸಕ್ಸೆಸ್ಫುಲ್ ಆಗಿ ಮಾಡಿರುವ ಉದಾಹರಣೆಗಳು ಕೂಡ ಇವೆ.
ಈ ರೀತಿ ಔಷಧಿಯಾಗಿ – ಮನೋರಂಜನೆಯಾಗಿ ಇಷ್ಟೊಂದು ಮಹತ್ವ ಹೊಂದಿರುವ ಸಂಗೀತಕ್ಕೆ ಈ ಶಕ್ತಿ ಬರಲು ಸಂಗೀತ ವಾದ್ಯಗಳು ಕೂಡ ಬಲು ಮುಖ್ಯ ಪಾತ್ರ ವಹಿಸಿವೆ. ಸಂಗೀತ ಎಂದರೆ ಅದಕ್ಕೆ ತಕ್ಕನಾದ ಸಾಹಿತ್ಯ ಹಾಗೂ ಸಂಗೀತಕ್ಕೆ ಅದರ ಸುಮಧುರತೆ ಹೆಚ್ಚಿಸುವ ವಾದ್ಯಗಳು ಇವೆಲ್ಲ ಸೇರಿ ಆ ಗಾಯನ ಗೆಲ್ಲುತ್ತದೆ. ಆದರೆ ಇಲ್ಲೊಬ್ಬರು ಯಾವುದೇ ಸಂಗೀತ ವಾದ್ಯ ಇಲ್ಲದೆ ತಮ್ಮ ಮೂಗಿನ ಸಹಾಯದಿಂದ ನುಡಿಸಿ ಗೆದ್ದಿದ್ದಾರೆ.
ಇದು ನಿಮಗೆ ಆಶ್ಚರ್ಯ ಎನಿಸಬಹುದು, ಆದರೆ ಖಂಡಿತವಾಗಿಯೂ ನಮ್ಮ ನಡುವೆ ಇಂತಹದೊಂದು ಟ್ಯಾಲೆಂಟ್ ಇದೆ ಎಂದರೆ ನೀವು ನಂಬಲೇಬೇಕು. ಅಂಬಿಕ ಪ್ರಸನ್ನ ಚಂದನ್ ಎನ್ನುವ ಈ ಅದ್ಭುತ ಕಲಾವಿದೆಯು ಇಂತಹದೊಂದು ಅಭ್ಯಾಸ ಮಾಡಿದ್ದು ಅದನ್ನು ಬೆಳೆಸಿಕೊಂಡು ಬಂದಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ಬಹಳ ಸದ್ದು ಮಾಡುತ್ತಿವೆ.
ಕರ್ನಾಟಕ ಮಾತ್ರ ಅಲ್ಲದೆ ಭಾರತದಾತ್ಯಂತ ಈಗ ಬಾರಿ ದೊಡ್ಡ ಮಟ್ಟದ ಸದ್ದು ಮಾಡಿರುವ ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೂ ಕೂಡ ಅಂಬಿಕಾರವರು ಈ ರೀತಿ ತಮ್ಮ ಮೂಗಿನಿಂದಲೇ ಸಂಗೀತ ವಾದ್ಯವನ್ನು ನುಡಿಸಿದ್ದಾರೆ. ಅಂಬಿಕಾ ಪ್ರಸನ್ನ ಚಂದ್ರನ್ ಅವರು ತಮ್ಮ ಮೂಗಿನ ಸಹಾಯದಿಂದ ಹಲವು ಸಂಗೀತ ವಾದ್ಯಗಳ ಧ್ವನಿಯನ್ನು ಬಾರಿಸುತ್ತಾರೆ.

ನಾವು ಮಿಮಿಕ್ರಿ ಮಾಡುವುದನ್ನು ಕೇಳಿದ್ದೇವೆ, ಹಕ್ಕಿಗಳ ನಾದ ನಿನಾದವನ್ನು ತಮ್ಮ ಶಬ್ದದ ಮೂಲಕ ಮಿಮಿಕ್ರಿ ಮಾಡಿ ಕೇಳಿಸುವ ಪ್ರತಿಭೆಗಳನ್ನು ನೋಡಿದ್ದೇವೆ. ಆದರೆ ಮೂಗಿನಿಂದ ಈ ರೀತಿ ಸಂಗೀತ ವಾದ್ಯಗಳ ಸ್ವರವನ್ನು ಹೊಮ್ಮಿಸುವುದು ಬಹಳ ಹೊಸ ವಿಷಯ. ಯಾಕೆಂದರೆ ಸಂಗೀತ ವಾದ್ಯಗಳಲ್ಲೇ ಕೆಲವೊಮ್ಮೆ ತಂತಿಯ ವೀಣೆ ಹರಿದಾಗ, ಕೊಳಲಿನಿಂದ ಬಿದಿರು ಒಡಕಾದಾಗ ಶ್ರುತಿ ತಪ್ಪುತ್ತದೆ.
ಅಂತಹದರಲ್ಲಿ ಮೂಗಿನಿಂದಲೇ ಈ ರೀತಿ ಶಬ್ದವನ್ನು ಅದರಲ್ಲೂ ಸುಮಧುರವಾದ ಇಂಪಾದ ಶಬ್ದವನ್ನು ಹೊರಹೊಮ್ಮಿಸುವುದು ಎಂದರೆ ಅದು ನಿಜವಾಗಿಯೂ ತಾಯಿ ಶಾರದೆಯ ಆಶೀರ್ವಾದ ಇರುವವರಿಗಷ್ಟೇ ದೊರೆಯುವುದು ಎನ್ನಬಹುದು. ಇಂತಹ ಅದ್ಭುತ ಕಲೆಯು ಅಂಬಿಕಾ ಪ್ರಸನ್ನ ಚಂದನ್ ಅವರಿಗೆ ಒಲಿದಿದ್ದು ಅದನ್ನು ಅವರು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ. ಇದೀಗ ಅವರ ವಿಶೇಷ ಗಾಯನ ಕೇಳಲು ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ.
ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಎಷ್ಟೇ ಕಾಂಟ್ರವರ್ಸಿ ಆದರೂ ಕೂಡ ಎಲ್ಲರ ಫೇವರೆಟ್ ಹಾಡು. ಈ ಹಾಡು ಇಲ್ಲದೆ ಆ ಸಿನಿಮಾವನ್ನು ಊಹಿಸಿಕೊಳ್ಳಲು ಕೂಡ ಅಸಾಧ್ಯ. ಸದ್ಯಕ್ಕೆ ದೇಶದಾದ್ಯಂತ ಟ್ರೆಂಡಿಂಗ್ ಹಾಡುಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದ ವರಾಹ ರೂಪಂ ಹಾಡಿನ ಟೋನ್ ಅನ್ನು ತಮ್ಮ ಮೂಗಿನ ಮೂಲಕ ನುಡಿಸಿ ಇವರು ಸಹ ಕಾಂತಾರ ಅಭಿಮಾನಿ ಎನ್ನುವುದನ್ನು ನಿರೂಪಿಸಿದ್ದಾರೆ.
ಅಂಬಿಕ ಪ್ರಸನ್ನ ಚಂದನ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಯೂಟ್ಯೂಬ್ – ಟ್ವಿಟರ್ – ಫೇಸ್ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅಂಬಿಕಾರವರು ಮೂಗಿನಲ್ಲಿ ನುಡಿಸಿದ ವರಾಹ ರೂಪಂ ಹಾಡಿನ ವಿಡಿಯೊ ವೈರಲ್ ಆಗುತ್ತಿದೆ. ಎಲ್ಲೆಡೆಯೂ ಅವರ ಕಲೆ ನೋಡಿ ಮೆಚ್ಚಿ ಹೊಗಳುತ್ತಿರುವ ನೆಟ್ಟಿಗರು ನಿಜಕ್ಕೂ ಇವರದು ಅದ್ಭುತ ಕಲೆ ಎನ್ನುತ್ತಿದ್ದಾರೆ.
ಅವರ ವಿಡಿಯೊ ಕೆಳಗಿದೆ ನೋಡಿ ಹಾಗೂ ನಿಮ್ಮ ಅಭಿಪ್ರಾಯ ತಿಳಿಸಿ…
Comments are closed.