ತೆಲುಗು ಶೋ ವೇದಿಕೆ ಮೇಲೆ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಪಾತ್ರವನ್ನು ಮಾಡಿದ ಸ್ಪರ್ಧಿ! ಗಡಗಡನೆ ನಡುಗಿದ ಜಡ್ಜಸ್, ವಿಡಿಯೋ ಎಲ್ಲೆಡೆ ವೈರಲ್ ನೋಡಿ!!

ಕನ್ನಡದ ಕಾಂತಾರ ಸಿನಿಮಾದ ವಿಜಯ ಯಾತ್ರೆ ಮುಂದುವರೆದಿದೆ. ಈಗ 50 ದಿನಗಳನ್ನು ಪೂರೈಸಿರುವ ಕಾಂತಾರ ಸಿನಿಮಾ ಕರ್ನಾಟಕ ಒಂದರಲ್ಲಿಯೇ ಒಂದು ಕೋಟಿ ಟಿಕೆಟ್ ಮಾರಾಟ ಮಾಡಿದ ಹೆಗ್ಗಳಿಕೆ ಗಳಿಸಿಕೊಂಡಿದೆ. ಈ ವಿಷಯವಾಗಿ ಅಧಿಕೃತವಾಗಿ ಹೊಂಬಾಳೆ ಫಿಲಂಸ್ ಸಂತೋಷವನ್ನು ಹಂಚಿಕೊಂಡಿತ್ತು. ರಿಷಬ್ ಶೆಟ್ಟಿ ಅವರ ಅದ್ಭುತ ಕಲ್ಪನೆಯ ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಕಮಾಲ್ ಮಾಡಿದೆ.

ಕಾಂತರಾ ಸಿನಿಮಾದ ಕಮಾಯಿ ವಿಷಯಕ್ಕೆ ಬಂದರೆ 350 ಕೋಟಿ ಅಷ್ಟು ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ಸಿಕ್ಕಾಪಟ್ಟೆ ಸಕ್ಸಸ್ ಕಂಡಿರುವ ಕಾಂತಾರ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸನ್ನು ಕಾಣಬಹುದು ಎಂದು ಯಾರು ಊಹಿಸಿರಲಿಲ್ಲ. ಭಾರತೀಯ ಸಂಸ್ಕೃತಿ, ಕಲೆಯನ್ನು ಎತ್ತಿ ಹಿಡಿದಿರುವ ಈ ಸಿನಿಮಾ ದೈವರಾಧನೆಯ ಮೇಲೆ ಅವಲಂಬಿತವಾಗಿದೆ.

ಹಾಗಾಗಿ ಈ ಸಿನಿಮಾವನ್ನ ಕೊನೆಯ 20 ನಿಮಿಷದ ದೃಶ್ಯಗಳು ಗೆಲ್ಲಿಸಿವೆ ಅಂದ್ರೆ ತಪ್ಪಾಗಲ್ಲ. ತನ್ನ ಮೈ ಮೇಲೆ ದೈವದ ಆವಾಹನೆ ಆದಂತೆ ಅತಿ ಅದ್ಭುತವಾಗಿ ನಟಿಸಿರುವ ರಿಷಬ್ ಶೆಟ್ಟಿ ಅವರನ್ನು ನೋಡಿದರೆ ನಿಜಕ್ಕೂ ಅವರಿಗೆ ದೈವದ ಕೃಪೆ ಆಗಿದೆ ಅಂತಲೇ ಹೇಳಬಹುದು. ಇನ್ನು ರಿಷಬ್ ಶೆಟ್ಟಿಯವರು ಇದೊಂದು ಧರ್ಮ ನಂಬಿಕೆಗೆ ಸಂಬಂಧಪಟ್ಟ ವಿಚಾರ.

ಹಾಗಾಗಿ ದೈವದ ವಿಷಯದಲ್ಲಿ ಅಪಹಾಸ್ಯ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ. ಆದರೂ ಹಲವರು ರಿಷಬ್ ಶೆಟ್ಟಿಯಂತೆ ದೈವದ ವೇಷ ಧರಿಸಿ ಸಾಕಷ್ಟು ಜನ ರೀಲ್ ಗಳನ್ನು ಕೂಡ ಮಾಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಮಾಡಿದ ದೃಶ್ಯವನ್ನು ಮತ್ತೆ ಮತ್ತೆ ಎಲ್ಲರೂ ರಿಪೀಟ್ ಮಾಡುವುದು ಜನರಿಗೆ ಇಷ್ಟವಾಗುತ್ತಿಲ್ಲ. ಯಾಕೆಂದರೆ ದಕ್ಷಿಣ ಕನ್ನಡ ಭಾಗದಲ್ಲಿ ದೈವಾರಾಧನೆ ಎನ್ನುವುದು ಸಾಮಾನ್ಯ ವಿಚಾರವಲ್ಲ.

ಇದಕ್ಕೆ ಚ್ಯುತಿ ಬರುವಂತೆ ವರ್ತಿಸಿದರೆ ಅದು ಆ ಭಾಗದ ಜನರ ಭಾವನೆಗಳಿಗೂ ಕೂಡ ಧಕ್ಕೆ ತರುತ್ತದೆ. ತೆಲುಗಿನ ಮಲ್ಲೇ ಮಾಲಾ ಪ್ರೊಡಕ್ಷನ್ ಅವರ ಶ್ರೀದೇವಿ ಡ್ರಾಮಾ ಕಂಪನಿ ಪ್ರೊಮೋ ಈಗಾಗಲೇ ರಿಲೀಸ್ ಆಗಿದ್ದು ಇದರಲ್ಲಿ ನೂಕರಾಜು ಅವರು ರಿಷಬ್ ಶೆಟ್ಟಿ ಅವರಂತೆ ದೈವದ ವೇಷ ಧರಿಸಿ ಗಮನ ಸೆಳೆದಿದ್ದಾರೆ.

ಹೌದು ನೂಕರಾಜು ಈ ಕಾರ್ಯಕ್ರಮದ ಒಬ್ಬ ಸ್ಪರ್ಧಿ ಆಗಿದ್ದು ಕೊನೆಯಲ್ಲಿ ದೈವದಂತೆಯೇ ನರ್ತಿಸುತ್ತಾರೋ ಅದೇ ರೀತಿ ನೂಕರಾಜು ಕೂಡ ಅಭಿನಯಿಸಿದ್ದಾರೆ. ಅವರು ಕೂಡ ರಿಷಬ್ ಅಂತೆಯೇ ಮಾಡಿರುವುದಕ್ಕೆ ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ಇನ್ನು ಕೆಲವರು ದೈವದ ವಿಷಯದಲ್ಲಿ ಈ ರೀತಿ ಆಟ ಆಡಬೇಡಿ ಎಂದು ಚೆನ್ನಾಗಿ ಬೈದು ಕಮೆಂಟ್ ಮಾಡುತ್ತಿದ್ದಾರೆ.

ಈಗಾಗಲೇ ಹುಡುಗಿ ಒಬ್ಬಳು ದೈವದ ವೇಷ ಧರಿಸಿದ್ದಕ್ಕೆ ಆಕೆಯ ಬಳಿ ಕ್ಷಮಾಪಣೆಯನ್ನು ಕೂಡ ಕೇಳಿಸಲಾಗಿತ್ತು. ದೈವದ ವಿಷಯವನ್ನು ಕಾಂತಾರಾ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ ನಿಜ, ಆದರೆ ಈ ಸಿನಿಮಾದಲ್ಲಿ ಎಲ್ಲಿಯೂ ದೈವಕ್ಕೆ ಅಪಪ್ರಚಾರ ಆಗುವಂತೆ ನಡೆದುಕೊಂಡಿಲ್ಲ ಹಾಗಾಗಿ ಈ ಸಿನಿಮಾ ಗೆದ್ದಿದ್ದು ಮಾತ್ರವಲ್ಲದೆ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಮತ್ತೊಂದು ಪ್ರಯತ್ನವೂ ಹೌದು.

You might also like

Comments are closed.