Akka Anu : ಕೆಚ್ಚೆದೆಯ ಕನ್ನಡತಿ ಅನು (Anu) ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಸಣ್ಣ ವಯಸ್ಸಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು ಇವರು. ಅವರು ಮಾಡಿರುವ ಸಮಾಜಮುಖಿ ಕೆಲಸಗಳಿಂದಾಗಿ ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿದ್ದು ಇವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. 20 ನೇ ವಯಸ್ಸಿನಲಿ ಹನ್ನೆರಡು ಲಕ್ಷ ಸಾಲ ಮಾಡಿ ಸಮಾಜ ಸೇವೆ ಮಾಡುತ್ತಿರುವ ಇವರ ಕೆಲಸ ನಿಜಕ್ಕೂ ಉಳಿದವರಿಗೆ ಮಾದರಿ.
ಕೆಚ್ಚೆದೆಯ ಕನ್ನಡತಿ ಅನು ಇವರ ಹಿನ್ನೆಲೆಯನ್ನು ಗಮನಿಸಿದರೆ, ರಾಯಚೂರಿ (Rayachuru) ನ ಸಿಂದನೂರಿ (Sindanuru) ನ ಚಿಕ್ಕ ಬೇರಗಿ (Beragi) ಗ್ರಾಮದವರು. ತಮ್ಮದೇ ಆದ 12 ಜನರ ತಂಡವನ್ನು ಕಟ್ಟಿಕೊಂಡು ಊರೂರು ಅಲೆಯುತ್ತಾ, ಅಲ್ಲಿನ ಶಾಲೆಗಳ ಜೀರ್ಣೋದ್ಧಾರ ಮಾಡುವುದು ಮಾತ್ರವಲ್ಲದೆ, ಹಳ್ಳಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
Kannadati Akka Anu Interview
ಅನುರವರ ಮುಖ್ಯ ಉದ್ದೇಶ ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಅನೇಕ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಕನ್ನಡ ನಾಡು-ನುಡಿ ಉಳಿಯಬೇಕೆಂದರೆ ಮೊದಲು ಕನ್ನಡ ಶಾಲೆಗಳು ಉಳಿಯಬೇಕು ಎನ್ನುವ ನಿಟ್ಟಿನಲ್ಲ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಬೇಕಾಗುವಂತಹ ವರ್ಣರಂಜಿತ ಚಿತ್ರಗಳು ಮ್ಯಾಪ್ ಗಳನ್ನು ಬಿಡಿಸುವುದು. ಕನ್ನಡ ಶಾಲೆಯ ವಾತಾವರಣವನ್ನು ಶುಚಿ ಗೊಳಿಸುವುದು ಹೀಗೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಈ ವರೆಗೂ ಸುಮಾರು ನಲವತ್ತು ಶಾಲೆಗಳಿಗೆ ಹೊಸರೂಪವನ್ನು ನೀಡಿ ತಮ್ಮ ಕೈಲಾದಷ್ಟು ಮಟ್ಟಿಗೆ ಕೆಲಸವನ್ನು ಮಾಡಿದ್ದಾರೆ.
ಅದರ ಜೊತೆಗೆ, ಸ್ವಚ್ಛ ಭಾರತ ಅಭಿಯಾನ ( Swacch Bharath Abhiyan) ದಡಿ ಹಳ್ಳಿಗಳಲ್ಲಿ ಕೂಡ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿ ಊರಿನವರ ಜೊತೆಗೆ ಸೇರಿಕೊಂಡು ಹಳ್ಳಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನು, ಕಾಡು ಬೆಳೆಸಿ ನಾಡು ಉಳಿಸಿ ಎಂಬ ಅಭಿಯಾನವನ್ನು ಕೂಡ ಇವರು ಮಾಡಿದ್ದಾರೆ. ಕೆಚ್ಚೆದೆಯ ಕನ್ನಡತಿ ಅನುರವರು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಅನೇಕ ಜನರು ಇವರ ತಂದೆತಾಯಿಗಳಿಗೆ ಅವಮಾನವನ್ನು ಮಾಡಿದ್ದು ಎಲ್ಲವನ್ನು ಮೆಟ್ಟಿ ನಿಂತು ನೂರಾರು ಮನಸ್ಸುಗಳನ್ನು ಗೆದ್ದುಕೊಂಡಿದ್ದಾರೆ,
ಆದರೆ ಅನುರವರ ತಂದೆ ತಾಯಿಗೆ ಇವರು ಮುಂದೆ ಓದುವುದು ಇಷ್ಟವಿರಲಿಲ್ಲ. ಆದರೆ ಅನು ಅವರು ಬೆಂಗಳೂರಿಗೆ ಬಂದು ತಮ್ಮ ಪದವಿ ಶಿಕ್ಷಣ (Degree Education) ವನ್ನು ಪಡೆಯುತ್ತಿದ್ದಾರೆ ಇವರು ಈಗ ಕಲಾವಿಭಾಗದಲ್ಲಿ ಅಂತಿಮ ವರ್ಷ ಓದುತ್ತಿದ್ದಾರೆ. ಇವರಿಗೆ ತಾವು ಡಿವೈಎಸ್ಪಿ (DYSP) ಆಗಬೇಕೆಂಬುದು ಇದೆ. ಆದರೆ ಸಮಾಜ ಮುಖಿ ಕೆಲಸಗಳಿಂದ ಗುರುತಿಸಿಕೊಂಡಿರುವ ಇವರು ಎಲ್ಲರಿಗೂ ಕೂಡ ಮಾದರಿ ಎಂದರೆ ತಪ್ಪಾಗಲಾರದು.