kannada

ನೀರು ಕುಡಿದಷ್ಟು ಸಲಿಸಾಗಿ ಕನ್ನಡ ಮಾತನಾಡಿದ ಜರ್ಮನಿಯ ಚೆಲುವೆ! ವಿಡಿಯೋ ನೋಡಿ ಕನ್ನಡ ನಟಿಯರನ್ನು ಬೆಂಡೆತ್ತಿದ ನೆಟ್ಟಿಗರು ನೋಡಿ!!

Entertainment/ಮನರಂಜನೆ

ಅತ್ಯಂತ ಪುರಾತನವಾದ ಹಾಗೂ ಅತ್ಯಂತ ಸುಂದರವಾದ ಭಾಷೆ ಕನ್ನಡ. ಸಾಕಷ್ಟು ವಿಚಾರಗಳಿಗೆ ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಅಂತ ಅನ್ನಿಸುತ್ತೆ. ಅದರಲ್ಲೂ ಕನ್ನಡ ಭಾಷೆ ಬಹಳ ಸಿಹಿ. ಇಂದು ಸಾಕಷ್ಟು ಕನ್ನಡ ಗೊತ್ತಿಲ್ಲ ಎನ್ನುವ ಜನರ ನಡುವೆ ವಿದೇಶದಿಂದಲೂ ಬಂದು ಕನ್ನಡವನ್ನು ಪ್ರೀತಿಯಿಂದ ಕಲಿತು ಕನ್ನಡ ಬೆಳೆಸುತ್ತಿರುವ ಸಾಕಷ್ಟು ಜನರಿದ್ದಾರೆ. ಇವರನ್ನ ನೋಡಿದ್ರೆ ಖಂಡಿತವಾಗಿಯೂ ಕೈಯೆತ್ತಿ ಮುಗಿಯಬೇಕು ಅನಿಸುತ್ತೆ.

ಹೌದು ಇದು ಖಂಡಿತ ಅತಿಶಯೋಕ್ತಿಯಲ್ಲ. ಯಾಕೆಂದರೆ ವಿದೇಶಗಳಿಂದ ಹಲವಾರು ಕಾರಣಕ್ಕೆ ಭಾರತಕ್ಕೆ ಪ್ರವಾಸಕ್ಕಾಗಿ ಜನರು ಬರುತ್ತಾರೆ. ಅದರಲ್ಲೂ ಕನ್ನಡ ನಾಡಿನಲ್ಲಿಯೇ ನೆಲೆ ನಿಂತು ಇಲ್ಲಿಯವರೇ ಆಗಿ ಹೋಗಿದ್ದಾರೆ. ಹೀಗೆ ವಿದೇಶದಿಂದ ಬಂದ ಹಲವರು ಕನ್ನಡವನ್ನು ಕಲಿತು ಕನ್ನಡ ಮಾತನಾಡುತ್ತಾರೆ. ಎಷ್ಟು ಬಾರಿ ಅನಿಸುತ್ತೆ ನಮಗೆ ಕನ್ನಡ ಗೊತ್ತಿದ್ರೂ ಹಲವು ಸಂದರ್ಭಗಳಲ್ಲಿ ನಾವು ಕನ್ನಡವನ್ನು ಬಿಟ್ಟು ಬೇರೆ ಭಾಷೆಯಲ್ಲಿ ವ್ಯವಹಾರ ನಡೆಸುತ್ತೇವೆ.

ಆದರೆ ಅಲ್ಲೆಲ್ಲಿಂದಲೋ ಬಂದವರು ಕಷ್ಟಪಟ್ಟಾದರೂ ಕನ್ನಡವನ್ನು ಕಲಿತಾರೆ. ಇನ್ನು ಭಾರತೀಯ ಸಂಸ್ಕೃತಿಗೆ ವಿದೇಶಿಕರು ಮಾರು ಹೋಗಿದ್ದಾರೆ. ಇಲ್ಲಿನ ಭರತನಾಟ್ಯಂ ಇರಬಹುದು ಸಂಸ್ಕೃತ ಶ್ಲೋಕಗಳಾಗಿರಬಹುದು, ಕನ್ನಡ ಪದ್ಯಗಳಾಗಿರಬಹುದು ಎಲ್ಲವನ್ನು ಕಲಿತು ಕನ್ನಡಿಗರಿಗೆ ಕಲಿಸುವ ಅಷ್ಟರ ಮಟ್ಟಿಗೆ ಬೆಳೆದಿದ್ದಾರೆ ಅಂದ್ರೆ ಕನ್ನಡದ ಕೀರ್ತಿ ಎಲ್ಲಿಯವರೆಗೆ ಹಬ್ಬಿದೆ ಅನ್ನೋದು ಅರ್ಥವಾಗುತ್ತೆ.




ಇಂದು ಸೋಶಿಯಲ್ ಮೀಡಿಯಾವನ್ನು ನೋಡಿದರೆ ವಿದೇಶಿಗರು ಕನ್ನಡದಲ್ಲಿ ಮಾತನಾಡಿದ ಹಲವು ವಿಡಿಯೋಗಳು ವೈರಲ್ ಆಗಿರುವುದನ್ನು ನೋಡಬಹುದು. ಎರಡು ದಿನಗಳ ಹಿಂದೆ ಎಷ್ಟೇ 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ನಮ್ಮೊಂದಿಗೆ ನಮ್ಮ ಸಂತೋಷದಲ್ಲಿ ವಿದೇಶಿಗರು ಕೂಡ ಭಾಗಿಯಾಗಿದ್ದಾರೆ. ಅಂಥವರಲ್ಲಿ ಜರ್ಮನಿಯ ಜನಿಫರ್ ಕೂಡ ಒಬ್ಬರು. ಜನಿಫರ್ ಜರ್ಮನಿಯ ಟಿಕ್ ಟಾಕ್ ಸ್ಟಾರ್.

ಇವರಿಗೆ ಅವರದ್ದೇ ಆದ ಭಾಷೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೂ ಕೂಡ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ. ಆದರೆ ಜನಿಫರ್ ಗೆ ಕನ್ನಡ ಅಂದ್ರೆ ಬಹಳ ಪ್ರೀತಿ. ಕನ್ನಡಿಗರೊಂದಿಗೆ ಕನ್ನಡಿಗರ ರೀತಿಯಲ್ಲಿಯೇ ಬೆರೆತು ಹೋಗಿರುವ ಜನಿಫರ್ ಇದೀಗ ಕನ್ನಡ ಮಾತನಾಡುವುದನ್ನು ಕೂಡ ಕಲಿತಿದ್ದಾರೆ. ಜರ್ಮನಿಯ ಮೂಲದ ಜನಿಫರ್ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ವಿಧಾನಸೌಧದ ಎದುರು ಮೀಡಿಯಾದೊಂದಿಗೆ ಮಾತನಾಡಿದ್ದಾರೆ ಇದರಲ್ಲಿ ವಿಶೇಷ ಅಂದ್ರೆ ಅವರು ಕನ್ನಡದಲ್ಲಿಯೂ ಮಾತನಾಡಿದ್ದು.

ಜನಿಫರ್ ಭಾರತ ದೇಶದ ಬಗ್ಗೆ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿದ್ದಾರೆ. ಸ್ವತಂತ್ರೋತ್ಸವದ ದಿನವೇ ಮಾತನಾಡಿದ ಜನಿಫರ್ ‘ನಿಜಕ್ಕೂ ಖುಷಿ ಅನಿಸುತ್ತೆ ಎಂದು ದೇಶದಲ್ಲಿ ಸ್ವಾತಂತ್ರ್ಯದ ಸಂಭ್ರಮ ಬಹಳ ಕಷ್ಟಪಟ್ಟು ಸ್ವಾತಂತ್ರವನ್ನು ಪಡೆದಿದ್ದಾರೆ ಭಾರತೀಯರು. ಈ ಸಂದರ್ಭದಲ್ಲಿ ನಾನು ಭಾಗವಹಿಸಿದ್ದು ನಿಜಕ್ಕೂ ಸಂತೋಷವೆನಿಸಿದೆ. ಕಳೆದ ಎರಡು ವರ್ಷಗಳಿಂದ ಯಾವ ಆಚರಣೆಯನ್ನು ಮಾಡುವ ಹಾಗಿರಲಿಲ್ಲ.

ಆದರೆ ಇದೀಗ ಕರೋನ ಭೀತಿ ಮುಕ್ತವಾಗಿ ಸಂಭ್ರಮದಿಂದ ಕಾರ್ಯಕ್ರಮಗಳನ್ನ ಆಚರಿಸಬಹುದು. ಇದೊಂದು ದೊಡ್ಡ ದಿನ ಪ್ರತಿ ವರ್ಷ ಈ ದಿನವನ್ನು ಹೀಗೆ ಆಚರಿಸಬೇಕು ಜೈ ಹಿಂದ್ ಅಂತ ಹೇಳಿದ್ದಾರೆ. ಇನ್ನು ಈ ಸಂದರ್ಭದಲ್ಲಿ ನಿಮಗೆ ಕನ್ನಡ ಮಾತನಾಡಲು ಬರುತ್ತಾ ಅಂತ ಮಾಧ್ಯಮದವರು ಕೇಳಿದ್ದಾರೆ. ಇದಕ್ಕೆ ಬಹಳ ಸುಂದರವಾಗಿ ನಕ್ಕು ಜನಿಫರ್ ಕನ್ನಡದಲ್ಲಿ ಮಾತನಾಡಲು ಆರಂಭಿಸಿದರು.

‘ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ. ನನ್ನ ಹೆಸರು ಜನಿಫರ್ ನಾನು ಚೆನ್ನಾಗಿದ್ದೇನೆ ನೀವೆಲ್ಲರೂ ಹೇಗಿದ್ದೀರಿ’. ಹೀಗೆ ಜನಿಫರ್ ಕನ್ನಡದಲ್ಲಿ ಕೆಲವು ಪದಗಳನ್ನು ಮಾತನಾಡಿದ್ದಾರೆ. ನಿಜಕ್ಕೂ ಇಂತಹ ಪ್ರವಾಸಿಗರನ್ನು ನೋಡಿದ್ರೆ ಕನ್ನಡಿಗರು ಪುಣ್ಯವಂತರು ಅಂತ ಅನಿಸುತ್ತೆ. ಆಕೆಯ ಬಾಯಲ್ಲಿ ಕನ್ನಡವನ್ನು ಕೇಳುವುದಕ್ಕೆ ಬಹಳ ಇಂಪಾಗಿತ್ತು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.