ಬಿಗ್ ಬಾಸ್ ಸೀಸನ್ ಒಂಭತ್ತು ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಓಟಿಟಿ ಸೀಸನ್ ನ ನಿರಾಸೆಯನ್ನು ಹೋಗಲಾಡಿಸಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.. ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬರುವುದಾದರೆ ಬಿಗ್ ಬಾಸ್ ನಲ್ಲಿ ಆರ್ಯವರ್ಧನ್ ಗುರೂಜಿ.. ಅರುಣ್ ಸಾಗರ್.. ದೀಪಿಕಾ ದಾಸ್ ನೇಹಾ ಗೌಡ.. ನವಾಜ್.. ರಾಕೇಶ್ ಅಡಿಕ.. ರೂಪೇಶ್ ಶೆಟ್ಟಿ.. ರೂಪೇಶ್ ರಾಜಣ್ಣ.. ಪ್ರಶಾಂತ್ ಸಂಬರ್ಗಿ.. ಅನುಪಮಾ ಗೌಡ.. ಗೊಬ್ರಗಾಲ.. ಹೀಗೆ ಸಾಕಷ್ಟು ಮಂದಿ ಸಾಕಷ್ಟು ವಿಚಾರಗಳಿಗೆ ಜನರಿಗೆ ಇಷ್ಟವಾಗುತ್ತಿದ್ದು ಮನರಂಜನೆ ವಿಚಾರದಲ್ಲಿ ಈ ಸೀಸನ್ ಪಾಸ್ ಆಗಿದೆ ಎನ್ನಬಹುದು..
ಇನ್ನು ಈ ನಡುವೆ ಆರ್ಯವರ್ಧನ್ ಗುರೂಜಿ ಅವರು ಕಮಲಿ ನಟಿ ಅಮೂಲ್ಯ ಗೌಡ ಅವರ ತುಟಿ ನೋಡಿ ತಡೆಯಲಾಗದೆ ತಮ್ಮ ಅಭ್ಯಾಸವನ್ನು ಬಿಡಲಾಗದೆ ಎಡವಟ್ಟು ಮಾಡಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಹಾಗೂ ಟ್ರೋಲ್ ಗೆ ಒಳಗಾಗಿದೆ.. ಅಷ್ಟೇ ಅಲ್ಲದೇ ಆರ್ಯವರ್ಧನ್ ಗುರೂಜಿ ಅವರು ಮಾಡಿದ ಕೆಲಸಕ್ಕೆ ಖುದ್ದು ಬಿಗ್ ಬಾಸ್ ಸ್ಪರ್ಧಿಗಳೇ ಟೀಕಿಸಿದ್ದು ಆರ್ಯವರ್ಧನ್ ಗುರೂಜಿಗೆ ಮುಜುಗರ ತಂದಂತಾಗಿದೆ..

ಹೌದು ಆರ್ಯವರ್ಧನ್ ಗುರೂಜಿ ಅವರು ತಮ್ಮ ಸಂಖ್ಯಾಶಾಸ್ತ್ರದ ಭವಿಷ್ಯ ಹೇಳುವ ಮೂಲಕವೇ ಫೆಮಸ್ ಆದವರು ಎಂಬುದು ಎಲ್ಲರಿಗೂ ತಿಳಿದೇ ಇದೆ.. ಅದರಲ್ಲೂ ಐಪಿ ಎಲ್ ಮ್ಯಾಚುಗಳಿಗೆ ಬಂದು ನೂರಕ್ಕೆ ತೊಂಬತ್ತರಷ್ಟು ಮ್ಯಾಚ್ ಗಳಿಗೆ ಉಲ್ಟಾ ಭವಿಷ್ಯ ಹೇಳಿ ಅವರು ಗೆಲ್ಲುವುದು ಎಂದ ತಂಡ ಸೋಲುವುದು.. ಸೋಲುತ್ತದೆ ಎಂಬ ತಂಡ ಗೆಲ್ಲೋದು ಸಾಮಾನ್ಯವಾಗಿ ಬಿಟ್ಟಿತ್ತು.. ಜೊತೆಗೆ ಟ್ರೋಲ್ ಕೂಡ ಸಾಮಾನ್ಯವಾಗಿತ್ತು.. ಆದರೆ ಬೇರೆ ವಿಚಾರಗಳನ್ನು ಹೊರತು ಪಡಿಸಿ ಬಿಗ್ ಬಾಸ್ ಮನೆಗೆ ಬಂದ ನಂತರ ಆರ್ಯವರ್ಧನ್ ಗುರೂಜಿ ಅವರ ಮುಗ್ಧತೆ ಇಂದಾಗಿ ಕೆಲವರಿಗೆ ಇಷ್ಟವಾಗಿದ್ದೂ ಉಂಟು..
ಇನ್ನು ಬಿಗ್ ಬಾಸ್ ಮನೆಯಲ್ಲಿಯೂ ನಾನು ಅಂದರೆ ನಂಬರ್.. ನಂಬರ್ ಅಂದರೆ ನಾನು ಎನ್ನುತ್ತಾ ಸಾಕಷ್ಟು ಜನರ ಭವಿಷ್ಯವನ್ನು ಹೇಳಿದ್ದುಂಟು.. ಆದರೆ ಇಷ್ಟು ದಿನ ನಂಬರ್ ನೋಡಿ ಭವಿಷ್ಯ ಹೇಳುತ್ತಿದ್ದ ಗುರೂಜಿ ಇದೀಗ ನಟಿ ಅಮೂಲ್ಯ ಗೌಡ ಅವರ ತುಟಿ ನೋಡಿ ಭವಿಷ್ಯ ಹೇಳ್ತೀನಿ ಅಂತಾ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ..
ಹೌದು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುತಿತ್ತು.. ಮನೆಯಲ್ಲಿ ಎರಡು ತಂಡಗಳಾಗಿದ್ದು ವಜ್ರಕಾಯ ಹಾಗೂ ವಜ್ರಪಡೆ ಎಂಬ ತಂಡಗಳನ್ನು ಮಾಡಿಕೊಂಡಿದ್ದು ರೂಒಏಶ್ ಶೆಟ್ಟಿ ದೀಪಿಕಾ ದಾಸ್.. ದಿವ್ಯಾ ಉರುಡುಗ ಸಾನ್ಯಾ ಅಯ್ಯರ್ ಟಾಸ್ಕ್ ಮಾಡುತ್ತಿದ್ದರು.. ಈ ಸಮಯದಲ್ಲಿ ಉಳಿದ ಎಲ್ಲಾ ಸದಸ್ಯರುಗಳು ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದರು..
ಆ ಸಮಯದಲ್ಲಿ ಅಮೂಲ್ಯ ಗೌಡ ಅವರ ತುಟಿಗಳನ್ನೇ ನೋಡುತ್ತಿದ್ದರು ಆರ್ಯವರ್ಧನ್ ಗುರೂಜಿ.. ಆ ತಕ್ಷಣ ಅಮೂಲ್ಯ ಗೌಡ ಏನು ಎನ್ನಲಾಗಿ.. ಈ ಮುಂದಿನ ತುಟಿ ಇದೆಯಲ್ಲಾ ಅದನ್ನು ನೋಡಿ ಭವಿಷ್ಯ ಹೇಳಬಹುದು ಅದಕ್ಕೇ ನೋಡ್ತಾ ಇದ್ದೀನಿ ಎಂದರು..
ಹಾಗಿದ್ರೆ ಹೇಳಿ ನೋಡೋಣ ಎಂದು ಅಮೂಲ್ಯ ಗೌಡ ಗುರೂಜಿಗೆ ಹೇಳಿದರು.. ಆಗ ತಮ್ಮ ತುಟಿ ನೋಡಿ ಹೇಳುವ ಭವಿಷ್ಯವನ್ನು ಶುರು ಮಾಡಿದ ಆರ್ಯವರ್ಧನ್ ಗುರೂಜಿ.. ತುಟಿ ಮೇಲೆ ಆ ಲೈನ್ ಇದೆಯಲ್ಲಾ ಅದು ಇದ್ದರೆ ತುಂಬಾ ಜನ ನಿಮ್ಮನ್ನ ಇಷ್ಟ ಪಡ್ತಾರೆ ಎಂದರು..
ಇದಾ ಎಂದು ಅಮೂಲ್ಯ ಗೌಡ ಕೇಳಲಾಗಿ.. ಹೌದು ಅದೇ ಲೈನ್.. ಮುಂದೆ ಚೂಪು ಇದೆಯಲ್ಲಾ ಅದು ಎಲ್ಲರಿಗೂ ಇಷ್ಟವಾಗುತ್ತದೆ ಪ್ರಾಮಿಸ್ ಎಂದರು.. ಹೇಗೋ ಆರ್ಯವರ್ಧನ್ ಗುರೂಜಿಯವರು ಅಮೂಲ್ಯ ಗೌಡ ಅವರ ಸುಂದರ ತುಟಿಗಳ ನೋಡಿ ಭವಿಷ್ಯ ಹೇಳಿಕೊಂಡು ಸುಂದರ ಸಮಯ ಕಳೆಯುತ್ತಿದ್ದರು.. ಆದರೆ ಅದೇ ಸಮಯದಲ್ಲಿ ಅಲ್ಲಿಯೇ ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರಾಕೇಶ್ ಅಡಿಗ ಅವರು ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾರೆ.. ಆ ತಕ್ಷಣ ಪ್ರತಿಕ್ರಿಯೆ ನೀಡಿದ ಆರ್ಯವರ್ಧನ್ ಗುರೂಜಿ ಅವರು ನಿನ್ನನ್ನ ಯಾರೂ ಇಷ್ಟ ಪಡೋದಿಲ್ಲ.. ನೀನು ತುಂಬಾ ಜನರನ್ನ ಇಷ್ಟ ಪಡ್ತೀಯಾ ಅಷ್ಟೇ ಎಂದಿದ್ದಾರೆ..
ಆ ಸಮಯದಲ್ಲಿ ಅರುಣ್ ಸಾಗರ್ ಅವರೂ ಸಹ ನನ್ನ ತುಟಿ ನೋಡಿ ಎಂದಿದ್ದಾರೆ.. ಆಗ ನೀವು ಮೀಸೆ ತೆಗೆದು ಬನ್ನಿ.. ಮೀಸೆ ತುಟಿಯನ್ನು ಮುಚ್ಚಿಕೊಂಡಿದೆ ಹೇಳಕ್ಕಾಗಲ್ಲ ಎಂದಿದಾರೆ.. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯೊಳಗೆ ಆರ್ಯವರ್ಧನ್ ಅವರ ಹೊಸ ರೀತಿಯ ತುಟಿ ಭವಿಷ್ಯ ಕೇಳಿ ಅಲ್ಲಿದ್ದವರು ನಕ್ಕು ಆನಂತರ ಟೀಕಿಸಿದರೆ ಇತ್ತ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಗಳು ಬರುತ್ತಿದ್ದು ಟೀಕೆಗಳು ಕೇಳಿ ಬರುತ್ತಿದೆ.. ಮುಖ ನೋಡಿ ಹಸ್ತ ರೇಖೆ ನೋಡಿ ಜಾತಕ ನೋಡಿ ಭವಿಷ್ಯ ಹೇಳ್ತಾರೆ.. ಇವರು ತುಟಿ ನೋಡೋ ಗೀಳಿಗೆ ಅದರಲ್ಲೂ ಭವಿಷ್ಯ ಹೇಳ್ತೀನಿ ಅಂತಾರಲ್ಲಾ ಎಂಬ ಕಮೆಂಟ್ ಗಳು ಬರುತ್ತಿದ್ದು ಕಂಟ್ರೋಲ್ ಮಾಡಿಕೊಳ್ಳಿ ಗುರೂಜಿ ಎನ್ನುತ್ತಿದ್ದಾರೆ ಪ್ರೇಕ್ಷಕರು..