ಕನ್ನಡ ಸಿನಿಮಾರಂಗದ ಕಡೆ ಬೇರೆ ಸಿನಿಮಾರಂಗದವರು ತಲೆ ಎತ್ತಿ ನೋಡುವಂತೆ ಮಾಡುವ ಪ್ರಯತ್ನದಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕೊಡುಗೆ ಕೂಡ ತುಂಬಾ ಇದೆ ಎಂದರೆ ಅದು ತಪ್ಪಾಗುವುದಿಲ್ಲ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಸಾಕು ಈಗಲೂ ಸಹ ಅದೆಷ್ಟೋ ಜನ ಇಷ್ಟ ಪಟ್ಟು ನೋಡುತ್ತಾರೆ. ಅವರ ಸಿನಿಮಾಗಳ ಮೂಲಕ ಅದೆಷ್ಟೋ ಜನ ನಟಿಯರು ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಹೀರೋಯಿನ್ ಗಳನ್ನು ತುಂಬಾ ಸುಂದರವಾಗಿ ತೋರಿಸುತ್ತಾರೆ ನಟ ಕ್ರೇಜಿ ಸ್ಟಾರ್ ರವಿಚಂದ್ರನ್. ಈ ಮಾತನ್ನು ಅವರ ಸಿನಿಮಾಗಳಲ್ಲಿ ನಟಿಸುವ ಬಹುತೇಕ ನಟಿಯರು ಒಪ್ಪಿಕೊಳ್ಳುತ್ತಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅನೇಕ ಸಿನಿಮಾಗಳು ಇಂದಿಗೂ ಸಹ ಸಾಕಷ್ಟು ಜನರ ಫೇವರೇಟ್. ಅವರ ಪುಟ್ನಂಜ, ಮಲ್ಲ, ಹೂ, ಯುಗ ಪುರುಷ ನಂತಹ ಹಾಲವಾರು ಸಿನಿಮಾಗಳಿಗೆ ಇಂದಿಗೂ ಸಹ ಸಾಕಷ್ಟು ಕ್ರೇಜ್ ಇದೆ. ಇನ್ನು ಮಲ್ಲ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಲ್ಲ ಸಿನಿಮಾದ ಯಮ್ಮು ಯಮ್ಮು ನೋಡ್ದೆ ನೋಡ್ದೆ ಹಾಡು ಇಂದಿಗೂ ಸಕತ್ ಫ್ಹೇಮಸ್. ಇದೀಗ ರವಿಚಂದ್ರನ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು ಇದೀಗ ನಟ ರವಿಚಂದ್ರನ್ ಅವರ ಮಲ್ಲ 2 ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಏನಿದು ಸುದ್ದಿ ಈ ಬಗ್ಗೆ ತಿಳಿಯಲು ಮುಂದಕ್ಕೆ ಓದಿ..

ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆ ಹಾಗೂ ನಿರ್ದೇಶನ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ನಟನೆಯ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಬ್ಲಾಕ್ ಬಾಸ್ಟರ್ ಸಿನಿಮಾ ಮಲ್ಲ. ಈ ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು ಎನ್ನುವುದನ್ನು ಹೇಳ ಬೇಕಿಲ್ಲ. ಇಂದಿಗೂ ಸಹ ಈ ಸಿನಿಮಾದ ಹಾಡುಗಳು ಸಕತ್ ಫ್ಹೇಮಸ್. ಇತ್ತೀಚೆಗೆ ನಡೆದ ಸಿನಿಮಾ ಈವೆಂಟ್ ಒಂದರಲ್ಲಿ ನಟ ರವಿಚಂದ್ರನ್ ಮಲ್ಲ 2 ಸಿನಿಮಾ ಮಾಡುವುದರ ಬಗ್ಗೆ ಸ್ಟೇಜ್ ಮೇಲೆ ಮಾತನಾಡಿದ್ದಾರೆ.
ನಟಿ ಮಾಲಾಶ್ರೀ ಅವರ ಬಳಿ ಅವರ ಪತಿ ಕೋಟಿ ರಾಮು ಬಗ್ಗೆ ಮಾತನಾಡುತ್ತಾ, ನಟ ಮಲ್ಲ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನಟ ರವಿಚಂದ್ರನ್ ನಾನು ಮಲ್ಲ 2 ಮಾಡುತ್ತೀನಿ ಈ ಸಿನಿಮಾಗೆ ನೀನು ಹೀರೋಯಿನ್ ಆಗುತ್ತಿಯಾ? ಅಥವಾ ನಿನ್ನ ಮಗಳ ಜೊತೆ ಮಲ್ಲ ಸಿನಿಮಾ ಮಾಡ್ತೀನಿ ಅಥವಾ ಅದು ಬೇಡ ಅಂದ್ರೆ ನನ್ನ ಮಗ ಹಾಗೂ ನಿನ್ನ ಮಗಳನ್ನು ಇಟ್ಟುಕೊಂಡು ಮಲ್ಲ2 ಸಿನಿಮಾ ಮಾಡ್ತೀನಿ ಎಂದು ಹಾಸ್ಯ ಮಾಡಿದ್ದಾರೆ ನಟ ರವಿಚಂದ್ರನ್. ಈ ಹಾಸ್ಯ ನಿಜವಾಗಲಿ ಎಂದು ಕೆಲ ಅಭಿಮಾನಿಗಳು ಬಯಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಲ್ಲ 2 ಸಿನಿಮಾ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.