kannada-actress-lalitamma

ಸಿನಿಮಾಗಳಲ್ಲಿ ಅವಕಾಶಗಳಿಲ್ಲದೆ ಈ ಕನ್ನಡದ ನಟಿಗೆ ಎಂಥ ಪರಿಸ್ಥಿತಿ ಬಂದಿದೆ ಗೊತ್ತೇ! ಕಣ್ಣೀರು ಬರುತ್ತೆ..

CINEMA/ಸಿನಿಮಾ

ನಮಸ್ಕಾರ ‌ಸ್ನೇಹಿತರೆ ಕಿರುತರೆ ಅಥವಾ ಬೆಳ್ಳಿತರೆ ಯಾಗಲಿ ಅದೃಷ್ಟ, ಅನುಭವ ಹಾಗೂ ಶ್ರಮ ಆಳ ನೋಡಿ ಗಾಳ ಹಾಕುತ್ತದೆ. ಈ ಸಿನೆಮಾ ಪ್ರಪಂಚ ಕೆಲವೂಬ್ಬರನ್ನು ಕೈ ಹಿಡಿದರೆ ಇನ್ನೂಬ್ಬರ ಕೈ ಬಿಟ್ಟು ಬಿಟ್ಟಿರುತ್ತದೆ. ಅದೆಷ್ಟೊ ಕಲಾವಿದರು ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿ ಸಿನಿಮಾ ರಂಗ ಸೇರಿದರೆ, ಕೆಲವು ಕಲಾವಿದರೂ ಸಿನೆಮಾ ರಂಗದಿಂದ ಕಿರುತೆರೆಯತ್ತ ಮುಖ‌ ಮಾಡುತ್ತಾರೆ

ಇದು ಒಂದು ಕಡೆಯಾದರೆ ಇನ್ನುಳಿದವರು ಸಿನೆಮಾ ಧಾರಾವಾಹಿಗಳಲ್ಲಿ ಅವಕಾಶವೇ ಸಿಗದೆ ತರೆಮರೆಯಾಗಿಬಿಟ್ಟಿರುತ್ತಾರೆ. ಹೀಗೆ ನಟನೆಯಿಂದ ಅವಕಾಶ ವಂಚಿತರಾಗಿ ಬದುಕಿನ ನಿಲುವಿಗೆ ಬೇರೆ ಯಾವುದೂ ಬಣ್ಣ ಬಳಿದು ಬದುಕು‌ ನಡೆಸುತ್ತಿರುವ ಕಲಾವಿದರೂ ನಮ್ಮ ಮಧ್ಯ ಇದ್ದಾರೆ, ಅವರಲ್ಲಿ ಲಲಿತಮ್ಮ ಕೂಡ ಒಬ್ಬರು, ಯಾರು ಈ ಲಿಲತಮ್ಮ, ಸನೆಮಾ‌ ರಂಗದಿಂದ ಮರೆಯಾಗಿದ್ಯಾಕೆ ,ಈಗಾ ಎಲ್ಲಿದ್ದಾರೆ ಎನ್ ಮಾಡ್ತಿದ್ದಾರೆ ಗೊತ್ತಾ..

ಲಲಿತಮ್ಮ ಕನ್ನಡ ಕಿರುತೆರೆಯ ಮೂಲಕ‌ ಸಿನೆಮಾ ರಂಗಕ್ಕೆ ಕಾಲಿಟ್ಟವರು. ಬಿಎ ಪದವಿ ಪಡೆದ ಲಲಿತಮ್ಮನಿಗೆ ಹಾಡುವುದೆಂದರೆ ಮೊದಲಿನಿಂದಲೂ ಎಲ್ಲಿಲ್ಲದ ಆಸಕ್ತಿ ಆದರೆ ಅದಕ್ಕಿಂತ ಹೆಚ್ಚು ನಟಿಸುವ ಹು’ಚ್ಚು. ಸದಾ ಅವಕಾಶಕ್ಕಾಗಿ ಕಾಯುತ್ತಿದ್ದ ಇವರಿಗೆ ಇಂದ್ರೇಶ್ ಪಂಡಿತ್ ಎಂಬುವರಿಂದ ನಾಟಕದಲ್ಲಿ ಅವಕಾಶ ಗಿಟ್ಟಿಸಿಕೊಂಡರು .. ಇವರ ಅಭಿನಯಕ್ಕೆ ತಕ್ಕ ಹಾಗೆ ಕಿರುತೆರೆಯಲ್ಲಿ ಅವಕಾಶ ಒದಗಿ ಬಂತು..

ಡಿಡಿ ಒನ್, ಟಿ.ಎಸ್.ನಾಗಭರಣ ಸರ್ ಅವರ ನಿರ್ದೇಶನದ ಮಹಾಮಾಯಿ ಧಾರಾವಾಹಿಯಲ್ಲಿ ಅವಕಾಶ ಪಡೆಯುವುದರ ಮೂಲಕ ಒಳ್ಳೆ ಹೆಸರು ಮಡಿಕೊಂಡೆ.. ನಂತರ ರಂಗೋಲಿ ಧಾರಾವಾಹಿ ಅಭಿನಯಿಸುವುದರ ಮೂಲಕ ಅವರ ಪಾತ್ರಕ್ಕೊಂದು ವಿಭಿನ್ನ ಮೆರಗು ನೀಡಿದ್ದರು ಲಲಿತಮ್ಮ. ಈ ಪರದೆಗೆ ಬಣ್ಣ ಹಚ್ಚುವ‌ ಮೊಲದು ಮನೆ ಮನೆಗೆ ಹೋಗಿ ಲಿರಿಲ್ ಸೋಪ್ ಸೇಲ್ಸ್ ಕೆಲಸ ಮಾಡ್ತಾ ಇದ್ದರು, ನಂತರ ಆಫೀಸ‌‌ ಒಂದರಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದರು‌..

ನನ್ನ ನೋಡಿದ್ರೆ ಕೆಲವರು ನಾನು ಇರುವ ರೀತಿಗೆ ಅವಕಾಶ ಕೊಡ್ತಿರ್ಲಿಲ್ಲ.. ಸಾಧುಕೋಕಿಲ ಸರ್ ನನ್ನ ಫೋಟೋ ನೋಡಿ ಸುಂಟರಗಾಳಿ ಸಿನಿಮಾದಲ್ಲಿ ಅವಕಾಶ ಕೊಟ್ಟರು.. ಉಳಿದವರೆಲ್ಲ ನನ್ನ ನೋಡಿ. ಇವರೆಲ್ಲಾ ಏನ್ ಅಭಿನಯ ಮಾಡ್ತಾರೆ ಅಂತ ನಗುತ್ತಿದ್ದರು.. ಆದರೆ ನಾನು ಯಾರೇ ಏನೇ ಕಮೆಂಟ್ ಮಾಡಿದ್ರು ತಲೆ ಕೆಡಿಸಿಕೊಳ್ಳದೆ ನನ್ನ ಪಾಡಿಗೆ ನಾನು ಇರ್ತೀದ್ದೆ.. ಯಾಕೆಂದರೆ ನನಗೆ ನಟನೆ ಮಾಡುವುದು ಅಷ್ಟೆ ಮುಖ್ಯ.

ಕಲಾವಿದರು ಮೈತುಂಬಾ ಬಂಗಾರ ಆಡಂಬರದ ಬದುಕು ಕಟ್ಟಿಕೊಂಡಿರುತ್ತಾರೆ.. ಆದರೆ ನಾನು ಮಾತ್ರ ಹೀಗೆ ಇರ್ತಿನಿ. ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ.‌ ಅವಕಾಶಗಳಿಲ್ಲದೆ ಖಾಲಿ ಇದ್ದೇನೆ. ಹಲವರಿಗೆ ಚಿನ್ನಹಣ ನೀಡಿದ್ದರು ಮರಳಿ ಕೈ ಸೇರಲಿಲ್ಲ. ತಿಮ್ಮಯ್ಯ ಎಂಬುವವರಿಗೆ ಥಿಯೇಟರ್ ಬುಕ್, ಓಲೆ ಜುಮುಕಿ ಅಡವಿಟ್ಟು ಕಲಾಕ್ಷೇತ್ರ ಬುಕ್ ಮಾಡೋಕೆ ಕೊಟ್ಟಿದ್ದೇನೆ. ಅದಷ್ಟೆ ಅಲ್ಲದೆ ನಮ್ಮ ತಾಯಿದು ನಾಲಕ್ಕು ಬಳೆ ಇತ್ತು..

ಎರಡು ಎಳೆ ಚೈನ್ ಇತ್ತು.. ನಾಲಕ್ಕು ಉಂಗುರ ಇತ್ತು..ಓಲೆ ಜುಮಿಕಿ ಸೇರಿ ಈಗ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಎಂದು ತಾವು ಅನುಭವಿಸುತ್ತಿರವ ಸಮಸ್ಯೆ ಸವಾಲುಗಳನ್ನು ಲಲಿತಮ್ಮ ಹೇಳಿಕೊಂಡಿದ್ದಾರೆ. ಭಜರಂಗಿ 2 ಸಮಯದಲ್ಲಿ ಹತ್ತು ಸಾವಿರ ಹಾಗೂ ಲಾಕ್ ಡೌನ್ ಸಮಯದಲ್ಲಿ ಶಿವಣ್ಣ ನೇರವಾಗಿದ್ದು ಅವರ ಸಹಾಯ ಎಂದು ಮರೆಯುವುದಿಲ್ಲ ಎಂದರು. ಇತ್ತಿಚ್ಚೀಗೆ ಅನೇಕ ಪ್ರತಿಭೆಗಳು ಕಲಾವಿದರೂ ಅವಕಾಶ ಸಿಗದೆ ವಂಚಿತರಾಗಿ ಕಷ್ಟ ಪಡುತ್ತಿದ್ದಾರೆ ಅವರಲ್ಲಿ ‌ಕನ್ನಡ ಸಿನೆಮಾ ಹಾಗೂ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ವಿಭಿನ್ನ ನಟನೆಯ ಮೂಲಕ ಜನರ ಅಭಿನಂದಿಸಿದ ಲಲಿತಮ್ಮನಿಗೆ ಇನ್ನಾದರೂ ಅವಕಾಶಗಳು ಸಿಗಲಿ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.