
ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೈಲೆಂಟ್ ಆಗಿದ್ದ ಕಂಗನಾ ಮತ್ತೆ ಎಮರ್ಜನ್ಸಿ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದರು. ಆದರೆ ನಟಿ ಕಂಗನಾ ತನ್ನ ಅನುಭವವನ್ನು ಬಿಟ್ಟಿಡುವ ಮೂಲಕ ಸುದ್ದಿಯಾಗಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಟ್ವೀಟ್ ನಲ್ಲಿ ಹೇಳಿದ್ದು,”ಬಾಲಿವುಡ್ ಹೀರೋಗಳು ರೂಮಿಗೆ ಬರುವಂತೆ ಹಲವು ಬಾರಿ ನನ್ನನ್ನ ಒತ್ತಾಯಿಸಿದ್ದಾರೆ. ನಾನು ಅದಕ್ಕೆ ಒಪ್ಪದೇ ಇದ್ದಾಗ ನನ್ನನ್ನು ಹುಚ್ಚಿ ಎಂದು ಕರೆದರೂ. ಬಾಲಿವುಡ್ ಗ್ಯಾಂ-ಗ್ ನನ್ನ ವರ್ತನೆಯನ್ನು ಅಹಂ-ಕಾರಿ ಎಂದು ಕರೆಯುತು.
ನಾನು ಬೇರೆ ಹುಡುಗಿಯರ ಹಾಗೆ ಮುಗುಳುನಗೆ ಬೀರಲಿಲ್ಲ ಐಟಂ ಸಾಂಗ್ ಗೆ ಕುಣಿಯಲಿಲ್ಲ. ಮದುವೆಗಳಲ್ಲಿ ನೃತ್ಯ ಮಾಡಲಿಲ್ಲ, ರಾತ್ರಿ ಸಮಯದಲ್ಲಿ ನಾಯಕ ನಟರು ಕರೆದರೆ ಅವರ ಕೋಣೆಗೆ ಬರುವುದಿಲ್ಲ ಎಂದು ತಿರಸ್ಕರಿಸಿದ್ದೆ. ಇದೆಲ್ಲಾ ನಾನು ಹೇಳಿದ್ದಕ್ಕಾಗಿ ಇಂದು ಎಲ್ಲರ ಬಾಯಲ್ಲಿಯೂ ಹುಚ್ಚಿ ಎನಿಸಿಕೊಂಡಿದ್ದೇನೆ” ಎಂದಿದ್ದಾರೆ.
ಅಷ್ಟೇ ಅಲ್ಲದೇ, ” ತನ್ನನ್ನು ಹುಚ್ಚಿ ಎಂದು ಕರೆದು ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ ಅವರು ಅವರನ್ನು ಸುಧಾರಣೆ ಮಾಡಿಕೊಳ್ಳುವುದನ್ನು ಬಿಟ್ಟು ನನ್ನನ್ನ ಸುಧಾರಣೆ ಮಾಡಲು ಬರುತ್ತಿದ್ದಾರೆ ನನಗೋಸ್ಕರ ಏನು ಬೇಕಾಗಿಲ್ಲ ನನ್ನ ಎಲ್ಲಾ ಆಸ್ತಿಯನ್ನ ಖರ್ಚು ಮಾಡಿ ಸಿನಿಮಾ ಮಾಡುತ್ತಿದ್ದೇನೆ. ರಾಕ್ಷಸರ ನಿರ್ಣಾಮ ಆಗುತ್ತದೆ, ಯಾರು ನನ್ನನ್ನ ದೂಷಿಸಬೇಡಿ ತಲೆಗಳು ಉರುಳಬಹುದು.
ಬಾಲಿವುಡ್ ನಲ್ಲಿ ಬೇರೆಯ ಹುಡುಗಿಯರ ತರ ನಾನು ಇಲ್ಲ. ತೊಂದರೆಗಳನ್ನ ಅನುಭವಿಸಿದೆ ಆದರೆ ಅದರ ವಿರುದ್ಧ ಮಾತನಾಡಿದೆ ಹಾಗಾಗಿ ನನ್ನನ್ನ ಎಲ್ಲರೂ ದುರಹಂಕಾರಿ ಎಂದು ಕರೆಯುತ್ತಾರೆ”ಎಂದು ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ನಡುವೆ ಸುದ್ದಿಯಲ್ಲಿರುವ ಸಿನಿಮಾ ಎಮರ್ಜೆನ್ಸಿ. ಈ ‘ಎಮರ್ಜೆನ್ಸಿ’ ಚಿತ್ರವನ್ನು ಕಂಗನಾ ಅವರೇ ಬರೆದು, ನಿರ್ಮಾಣ ಮಾಡಿ, ನಿರ್ದೇಶನ ಮಾಡಿ, ಅವರೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.
ಶೀಘ್ರದಲ್ಲೇ ತೆರೆ ಕಾಣಲಿರುವ ಎಮರ್ಜೆನ್ಸಿ ಸಿನಿಮಾದಲ್ಲಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ನಟ ಅನುಪಮ್ ಖೇರ್ ದಿವಂಗತ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹಿಮಾ ಚೌಧರಿ ಅವರು ಇಂದಿರಾಗಾಂಧಿ ಅವರ ಸ್ನೇಹಿತೆ ಮತ್ತು ಆಪ್ತ ಪುಪುಲ್ ಜಯಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಲ್ಲದೇ ಈ ಸಿನಿಮಾದಲ್ಲಿ ವಿಶಾಕ್ ನಾಯರ್, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾದ ಬಗ್ಗೆ ಬಹುನಿರೀಕ್ಷೆಯಿದೆ.
Comments are closed.