ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಬೇಸಿಗೆಯ ಉರಿಬಿಸಿಲಿನಲ್ಲೂ ಅವರ ಅಭಿಮಾನಿಗಳಿಗೆ ಅಭಿಮಾನಿಗಳನ್ನು ಮತ್ತಷ್ಟು ಹಾಟ್ ಹಾಟ್ ಆಗಿ ಇಟ್ಟಿದ್ದಾರೆ. ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಹಾಟ್ ಹಾಟ್ ಆಗಿರುವ ಹೊಸ ಫೋಟೋ ಶೂಟ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಈ ನಡೆಗೆ ಇಡೀ ಅಭಿಮಾನಿ ಪಡೆ ದಂಗಾಗಿದೆ.ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದ ಕಂಗನಾ ರಣಾವತ್ ಈ ಬಾರಿ ಹಾಟ್ ಹಾಟ್ ಫೋಟೋ ಕಾರಣದಿಂದಾಗಿ ಪ್ರಚಾರದ ತುತ್ತತುದಿ ಏರಿ ಕೂತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ,
ಬಿಟೌನ್ ಕೂಡ ಶಾಕ್ ಆಗಿ ಕೂತಿದೆ. ಕಂಗನಾ ಅವತಾರ ಕಂಡು ಬೆಚ್ಚಿ ಬಿದ್ದಿದೆ.ಸದ್ಯ ಕಂಗನಾ ರಣಾವತ್ ಲಾಕ್ ಅಪ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಅತೀ ಹೆಚ್ಚು ಸ್ಪರ್ಧಿಗಳಾಗಿದ್ದು ವಿವಾದಿತ ತಾರೆಯರು. ದಿನವೂ ಒಂದಿಲ್ಲೊಂದು ವಿವಾದ ಮಾಡುವ ಮೂಲಕ ಶೋ ಅನ್ನು ಟಾಪ್ ನಲ್ಲಿ ಇಟ್ಟಿದ್ದಾರೆ. ಅವರು ಮಾತ್ರವಲ್ಲ, ಅವರ ಮಾತಿಗೆ ಪ್ರತ್ಯುತ್ತರವಾಗಿ ಮಾತನಾಡುವ ಕಂಗನಾ ಕೂಡ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಲೇ ಇರುತ್ತಾರೆ.
ಇಂದು ಕಂಗನಾ ರಣಾವತ್ ನಟನೆಯ ‘ಧಾಕಡ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇಂದು ರಿಲಿಸ್ ಆದ ಟ್ರೇಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ರಂಗನಾ ಈ ರೀತಿಯ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೆಲವರು ಈ ಫೋಸ್ಟ್ ಗೆ ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ಇದೆಂಥ ಸಂಸ್ಕೃತಿ ಎಂದು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ.
View this post on Instagram