ಈ ಸಿನೆಮಾ ನಟಿಯರ ಮದುವೆ ಅಂದರೆ ಅದೊಂದು ಹಬ್ಬದ ರೀತಿಯೇ ಇರುತ್ತದೆ. ಯಾರೇ ಒಬ್ಬ ನಟಿಯ ಮದುವೆ ಸುದ್ದಿ ಗೊತ್ತಾದರೆ ಸೋಶಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಅದರದ್ದೇ ಸುದ್ದಿ ಹರಿದಾಡುತ್ತದೆ. ಇನ್ನುಅಭಿಮಾನಿಗಳು ಕೂಡ ಅವರ ಮದುವೆ ನೋಡಲು ಕಾತುರರಾಗಿರುತ್ತಾರೆ. ಆದರೆ ಈಗಲೂ ಅದೆಷ್ಟೋ ಫೇಮಸ್ ನಟಿಯರು ವಯಸ್ಸು 30 ದಾಟಿದರೂ ಮದುವೆ ಆಗದೆ ಹಾಗೇ ಉಳಿದಿದ್ದಾರೆ. ಅಂತಹ ನಟಿಮಣಿಯರು ಯಾರ್ಯಾರು ಅನ್ನೋದನ್ನು ನಾವಿವತ್ತು ಹೇಳುತ್ತೇವೆ.
ಸ್ಯಾಂಡಲ್ ವುಡ್ ನ ಕ್ವೀನ್ ಎಂದೇ ಕರೆಯಲ್ಪಡುವ ರಮ್ಯಾ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಈಗಲೂ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಕನ್ನಡ ಅಭಿ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ರಮ್ಯಾ ಸಿನಿಮಾ ಬಿಟ್ಟು ರಾಜಕೀಯ ರಂಗಕ್ಕೂ ಹೋಗಿದ್ದಾರೆ. ಆದರೆ ತದ ನಂತರ ಅದಕ್ಕೂ ರಾಜೀನಾಮೆ ಕೊಟ್ಟು ವಿದೇಶಕ್ಕೆ ಹೋಗಿ ಅಲ್ಲೇ ಇದ್ದರು. ಅವರಿಗೆ ನವೆಂಬರ್ 29 ರಂದು 39 ವರ್ಷ ತುಂಬಿತ್ತು. ಆದರೆ ಇನ್ನೂ ಅವರ ಮದುವೆ ಮಾತ್ರ ಆಗದೆ ಹಾಗೇ ಉಳಿದಿದ್ದಾರೆ. ಅಭಿಮಾನಿಗಳು ಇವರ ಮದುವೆ ನೋಡಲು ಅಭಿಮಾನಿಗಳು ಮಾತ್ರ ಕಾದು ಕುಳಿತಿದ್ದಾರೆ.
ಹರಿಪ್ರಿಯಾ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ.. ನೃತ್ಯಗಾರ್ತಿಯಾಗಿದ್ದ ಹರಿಪ್ರಿಯಾ ಅವರು 2008 ರಲ್ಲಿ ಕನ್ನಡದ ಮನಸುಗಳ ಮಾತು ಮಧುರ ಸಿನಿಮಾದಲ್ಲಿ ನಟಿಸಿವ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಉಗ್ರಂ ಸಿನಿಮಾ ಹರಿಪ್ರಿಯಾ ಅವರಿಗೆ ಒಳ್ಳೆಯ ಬ್ರೇಕ್ ಕೊಟ್ಟಿತ್ತು. ಇವರಿಗೆ ಇದೀಗ 32 ವರ್ಷ ಆಗಿದೆ. ಆದರೆ ಇನ್ನೂ ಮದುವೆ ಆಗದೆ ಹಾಗೇ ಉಳಿದಿದ್ದು, ಇವರ ಮದುವೆ ಯಾವಾಗ ಅನ್ನುವ ಪ್ರಶ್ನೆ ಅಭಿಮಾನಿಗಳದ್ದು.
ಕನ್ನಡ ಸಿನಿಮಾ ಜಗತ್ತಿನ ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ಜೊತೆ ಬುಲ್ ಬುಲ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅನೇಕ ಸೂಪರ್ ಸ್ಟಾರ್ ಗಳ ಜೊತೆ ಅಭಿನಯಿಸಿರುವ ರಚಿತಾ ರಾಮ್ ಅವರಿಗೂ 32 ವರ್ಷ ದಾಟಿದೆ. ಆದರೆ ಇವರ ಮದುವೆಯ ಸುದ್ದಿ ಮಾತ್ರ ಈವರೆಗೂ ಕೇಳಿ ಬಂದಿಲ್ಲ.
ಕನ್ನಡದ ಮುಂಗಾರು ಮಳೆ ಅನ್ನುವ ಸೂಪರ್ ಹಿಟ್ ಚಿತ್ರದಲ್ಲಿ ಅನ್ಟಿಸಿ ಸೈ ಅನ್ನಿಸಿಕೊಂಡ ನಟಿ ಪೂಜಾಗಾಂಧಿ. ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡ ಪೂಜಾ ಗಾಂಧಿ ಈ ಹಿಂದೆ ನಿಶ್ವಿತಾರ್ಥ ಆಗಿದ್ದರು. ಆದರೆ ಅದು ಯಾವುದೋ ಕಾರಣದಿಂದ ಮುರಿದು ಬಿದ್ದಿತ್ತು. ಆದರೆ ಇದೀಗ ವಯಸ್ಸು 38 ದಾಟಿದರೂ ಮದುವೆ ಆಗದೆ ಹಾಗೇ ಉಳಿಸಿದ್ದಾರೆ
ಕನ್ನಡ ಸಿನಿಮಾ ರಂಗದ ತುಪ್ಪದ ಬೆಡಗಿ, ಡ್ರ’ಗ್ಸ್ ಮಾ’ಫಿಯಾದಲ್ಲಿ ಹೆಸರು ಕೇಳಿ ಬಂದಿರುವ ನಟಿ ರಾಗಿಣಿ ದ್ವೀವೇದಿ. ಸುದೀಪ್ ಅವರ ಮದಕರಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಚೆಂದುಳ್ಳಿಗೆ ಇದೀಗ 38 ಆಗಿದೆ. ಆದರೆ ಇನ್ನೂ ಮದುವೆ ಯಾಕೆ ಆಗಿಲ್ಲ ಅನ್ನುವುದು ಮಾತ್ರ ಅಭಿಮಾನಿಗಳ ತಲೆ ಕೊರೆಯುತ್ತಿದೆ.