ಕಮಲಿ ಧಾರಾವಾಹಿ ಮೂಲಕ ಎಲ್ಲರಿಗೂ ಚಿರಪರಿಚಿತರಾದ ನಟಿ ಎಂದರೆ ಕಮಲಿ ಪಾತ್ರದಾರಿ ಅಮೂಲ್ಯ ಗೌಡ ಅವರು. ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಳ್ಳುವ ಈ ನಟಿ ನಿಜ ಜೀವನದಲ್ಲಿ ಮಾತ್ರ ಸಖತ್ ಮಾಡರ್ನ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಾಟ್ ಲುಕ್ ನೋಡಿ ನಿಬ್ಬೆರಗಾಗದವರೇ ಇಲ್ಲ ಎಂದೇ ಹೇಳಬಹುದು. ಹೌದು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುವ ಈ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವಾರು ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಲೆ ಇರುತ್ತಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಇವರೇನಾ ಕಮಲಿ ಪಾತ್ರಕ್ಕೆ ಬಣ್ಣ ಹಚ್ಚಿದವರು ಎಂದು ಅಚ್ಚರಿ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಅಮೂಲ್ಯ ಅವರು ಮಾಡಿಸಿರುವ ಫೋಟೋಶೂಟ್ ಗಳು ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸುವಂತಿದೆ. ಮುದ್ದು ಮುಖದ ಮುಗ್ಧ ಮನಸ್ಸಿನ ಕಮಲಿ ಅಮೂಲ್ಯ ಅವರ ಸೌಂದರ್ಯಕ್ಕೆ ಇಡೀ ಕರ್ನಾಟಕ ಜನತೆಯೇ ಮನಸೋತಿದ್ದಾರೆ.
ಈ ಹಿಂದೆ ನಟಿ ಅಮೂಲ್ಯ ಗೌಡ ಅವರು ಅರಮನೆ ಎಂಬ ಧಾರಾವಾಹಿಯಲ್ಲಿ ಸಖತ್ ಮಾಡರ್ನ್ ಆಗಿ ಹಾಗೂ ಬೋಲ್ಡ್ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಧಾರಾವಾಹಿ ಅಷ್ಟೊಂದು ಖ್ಯಾತಿ ತಂದುಕೊಟ್ಟಿರಲಿಲ್ಲ. ಅದ್ಯಾವಾಗ ಕಮಲಿ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡರೋ ಕರ್ನಾಟಕದ ಮನೆಮಾತಾಗಿ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಲವು ಫೋಟೋಗಳನ್ನು ನೋಡುತ್ತಿದ್ದರೆ ಈಕೆ ಮಾಡರ್ನ್ ಉಡುಗೆಗೂ ಜೈ ಟ್ರೆಡಿಷನಲ್ ಉಡುಗೆಗೂ ಸೈ ಎನ್ನುವ ಹಾಗಿದೆ ಅವರ ಮಾಡರ್ನ್ ಲುಕ್ ಗಳು. ಇನ್ನು ಮಾಡ್ರನ್ ಫೋಟೋಗಳನ್ನು ನೋಡಿದ ಹಲವರು ಆಕೆಯ ಡ್ರೆಸ್ ಬಗ್ಗೆ ಕಾಮೆಂಟ್ ಮಾಡಿದ್ದರು. ಈ ಎಲ್ಲಾ ಕಮೆಂಟ್ ಗಳಿಗೂ ತಲೆಕೆಡಿಸಿಕೊಳ್ಳದ ಅಮೂಲ್ಯ ತಮಗೂ ಸ್ವಂತವಾದ ಜೀವನವಿದೆ.
ಧಾರಾವಾಹಿಗಳಲ್ಲಿ ಅಭಿನಯಿಸುವ ಪಾತ್ರಗಳೇ ಬೇರೆ ನಮ್ಮ ನಿತ್ಯ ಜೀವನವೇ ಬೇರೆ ಎಂದು ಹೇಳಿಕೊಳ್ಳುತ್ತಾರೆ. ಲಂಗ ದಾವಣಿ ಎರಡು ಜಡೆ ಈ ರೀತಿ ಉಡುಪನ್ನು ಹೆಚ್ಚಾಗಿ ಇಷ್ಟಪಡದ ಇವರು ಮಾಡ್ರನ್ ಡ್ರೆಸ್ ಗಳನ್ನು ಧರಿಸಲು ಇಷ್ಟ ಪಡುತ್ತಾರಂತೆ.ಅಮೂಲ್ಯ ಗೌಡ ಆವರು ಡಿಪ್ಲೊಮೋ ವ್ಯಾಸಾಂಗ ಮಾಡುತ್ತಿರುವ ಸಂದರ್ಭದಲ್ಲಿಯೇ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಇದೇ ಸಂಧರ್ಭದಲ್ಲಿ ಅವರಿಗೆ ಧಾರಾವಾಹಿಗಳ ಆಫರ್ ಬರುತ್ತದೆ . ಆ ನಂತರ ಸ್ವಾತಿ ಮತ್ತು ಪುನರ್ ವಿವಾಹ ಅರಮನೆ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಇವರು ಈ ಎಲ್ಲ ಪಾತ್ರಗಳಲ್ಲಿ ಮಾರ್ಡನ್ ಹುಡುಗಿಯಾಗಿ ಅಭಿನಯಿಸಿದ್ದಾರೆ.
ಈ ಧಾರಾವಾಹಿಗಳು ಅಷ್ಟೊಂದು ಹೆಸರು ತಂದು ಕೊಡದೇ ಇದ್ದರೂ ಕಮಲಿ ಧಾರಾವಾಹಿ ಇವರಿಗೆ ಬಹಳಷ್ಟು ಹೆಸರನ್ನು ತಂದುಕೊಟ್ಟಿತು. ಸದಾ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಲುಕ್ ನಿಂದ ಸುದ್ದಿಯಾಗುತ್ತಿದ್ದ ನಟಿ ಅಮೂಲ್ಯ ಈ ಬಾರಿ ಡ್ಯಾನ್ಸ್ ವಿಡಿಯೋಯಿಂದ ಸಖತ್ ಸುದ್ದಿಯಲ್ಲಿದ್ದಾರೆ. ಹೌದು ಇದೀಗ ಟ್ರೆಂಡ್ ಹಾಡೊಂದಕ್ಕೆ ಹಾಟ್ ಆಗಿರುವ ಡ್ರೆಸ್ ಹಾಕಿಕೊಂಡು ಮಾಡಿರುವ ರೀಲ್ಸ್ ಭಾರೀ ವೈರಲ್ ಆಗಿದೆ. ಜೊತೆಗೆ ಸಕತ್ ಕ್ಯೂಟ್ ಆಗಿಯೂ ಕಾಣಿಸುತ್ತಿದ್ದಾರೆ.
ಅಮೂಲ್ಯ ಗೌಡ ಅಂದಾಕ್ಷಣ ಮೊದಲು ಗಮನ ಸೆಳೆಯೋದೇ ಅವರ ಉದ್ದ ಕೂದಲು. ಹೆಚ್ಚಾಗಿ ಕೂದಲು ಬಿಟ್ಟುಕೊಂಡೇ ಇರುವ ಅವರು ಪಕ್ಕ ಹಳ್ಳಿ ಹುಡುಗಿ ಪಾತ್ರಕ್ಕೂ ಸೈ ಅದೇ ರೀತಿ ಮಾಡ್ ಪಾತ್ರಕ್ಕೂ ಸೈ ಅನ್ನುವಂತಿದ್ದಾರೆ. ಕಮಲಿ ಧಾರವಾಹಿಯಲ್ಲಿ ಹಳ್ಳಿ ಸೊಗಡಿನ ಭಾಷೆ ಮಾತನಾಡುವ ಅವರ ಪಾತ್ರದಿಂದಾಗ ಅಮೂಲ್ಯ ಅವರು ಮನೆ ಮಗಳಾಗಿ ಬಿಟ್ಟಿದ್ದಾರೆ.ಅದೆಷ್ಟೋ ಮಂದಿ ಇಷ್ಟೊಂದು ಆಕರ್ಷಕವಾಗಿರುವ ಇವರು ಸಿನಿಮಾ ಕಡೆ ಯಾಕೆ ಹೋಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಇವರಿಗೆ ಅನೇಕ ಅವಕಾಶಗಳು ಬಂದಿದೆಯಂತೆ. ಆದರೆ ಧಾರವಾಹಿಯನ್ನು ಅರ್ಧಕ್ಕೆ ಬಿಟ್ಟು ಹೋಗುವುದು ಸರಿ ಅಲ್ಲ ಅನ್ನುವ ಕಾರಣಕ್ಕೆ ಸಿನಿಮಾ ಅವಕಾಶವನ್ನು ತಳ್ಳಿ ಹಾಕಿದ್ದಾರೆ. ಕಮಲಿ ನಟಿ ಅಮೂಲ್ಯ ಗೌಡ ಅವರ ರೀಲ್ಸ್ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram