ಈ ದೇವಸ್ಥಾನಕ್ಕೆ ಒಂದು ಬಾರಿ ನೀವು ಹೋಗಿ ಬಂದರೆ 1 ವರ್ಷದ ಒಳಗೆ ಕಂಕಣಬಲ ಕೂಡಿ ಬರುತ್ತದೆ. ಸಾಂಸಾರಿಕ ತೊಂ’ದರೆ ದಾಂಪತ್ಯ ಜೀವನದಲ್ಲಿ ಏನೇ ತೊಂದರೆ ಇದ್ದರೂ ನಿವಾರಣೆಯಾಗುತ್ತದೆ.

Today News / ಕನ್ನಡ ಸುದ್ದಿಗಳು

ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಬಹಳಷ್ಟು ಹಿರಿಯರು ಹೇಳಿರುವುದನ್ನು ನಾವು ಕೇಳಿದ್ದೇವೆ ಹೌದು ಮದುವೆ ಆಗಿರಬಹುದು ಅಥವಾ ನಮ್ಮ ಜೀವನದಲ್ಲಿ ನಡೆಯುವಂತಹ ಆಗುಹೋಗುಗಳ ಆಗಿರಬಹುದು ಇವೆಲ್ಲವನ್ನು ಕೂಡ ವಿಧಿ ಬರಹ ಎಂದು ಪರಿಗಣನೆ ಮಾಡಲಾಗುತ್ತದೆ. ಇವೆಲ್ಲವನ್ನೂ ಕೂಡ ಮೊದಲ ದೇವರು ನಮ್ಮ ಹಣೆ ಬರಹದಲ್ಲಿ ಬರೆದಿದ್ದಾನೆ

ಎಂದು ಸಾಕಷ್ಟು ಜನ ಹೇಳಿರುವುದನ್ನು ನಾವು ನೋಡಬಹುದಾಗಿದೆ. ಆದರೂ ಕೂಡ ಕೆಲವೊಮ್ಮೆ ವಿವಾಹ ವಿಳಂಬವಾಗಬಹುದು ಅಥವಾ ನಮ್ಮ ಮಕ್ಕಳ ಮದುವೆ ಆಗಿರಬಹುದು ಅಥವಾ ನಮ್ಮ ಅಣ್ಣ-ತಮ್ಮಂದಿರ ಅಕ್ಕ-ತಂಗಿಯರ ಮದುವೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇರುವುದನ್ನು ನಾವು ನೋಡಬಹುದಾಗಿದೆ. ನಿಮಗೆಲ್ಲರಿಗೂ ಕೂಡ ಒಂದು ಅನುಮಾನ ಬರಬಹುದು ವಿವಾಹ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾದರೆ ಭೂಮಿಯಲ್ಲಿ ನಾವು ಜನಿಸಿದ ನಂತರವೇ ಮದುವೆ ಆಗುವುದು ಯಾಕೆ ವಿಳಂಬವಾಗುತ್ತಿದೆ ಅಂತ.

ಈ ರೀತಿ ಮದುವೆಗಳು ವಿಳಂಬ ಆಗುವುದಕ್ಕೆ ಸಾಕಷ್ಟು ಕಾರಣಗಳು ಇರುವುದನ್ನು ನಾವು ನೋಡಬಹುದಾಗಿದೆ ಆ ಕಾರಣಗಳು ಏನು ಅಂದರೆ ನಮ್ಮ ಜಾತಕ ದೋಷಗಳು ಆಗಿರಬಹುದು ಅಥವಾ ನಮ್ಮ ಪೂರ್ವಜನಾದ ಪಾಪಗಳು ಆಗಿರಬಹುದು ಅಥವಾ ಈ ಜನ್ಮದಲ್ಲಿ ಮಾಡಿದಂತಹ ಕರ್ಮಫಲಗಳು ಆಗಿರಬಹುದು ಇವೆಲ್ಲದರ ಕಾರಣದಿಂದಾಗಿ ನಮ್ಮ ಜಾತಕದಲ್ಲಿ ಕೆಲವೊಂದಷ್ಟು ಪರಿಣಾಮಕಾರಿ ದೋಷಗಳು ಉಂಟಾಗುತ್ತದೆ.

ಈ ದೋಷಗಳು ಇರುವ ಕಾರಣ ನಮಗೆ ಸೂಕ್ತ ಸಮಯದಲ್ಲಿ ವಿವಾಹ ಎಂಬುದು ಆಗುವುದಿಲ್ಲ ಹಾಗಾಗಿ ನಮ್ಮ ಜಾತಕದಲ್ಲಿ ಇರುವಂತಹ ದೋಷಗಳನ್ನು ನಾವು ಮೊದಲು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಈ ಪರಿಹಾರ ಮಾಡಿಕೊಂಡು ವಿವಾಹವೆಂಬುದು ಆಗಿತ್ತದೆ ಇನ್ನು ಈ ಪರಿಹಾರಕ್ಕೆ ನೀವು ಹೆಚ್ಚೇನು ಖರ್ಚು ಮಾಡಬೇಕಾದಂತಹ ಅಗತ್ಯವಿಲ್ಲ ನಿಮಗೆಲ್ಲರಿಗೂ ತಿಳಿದಿರುವಂತೆ ನಾವು ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಬೇಕಾದರೂ ಕೂಡ ಮೊದಲಿಗೆ ದೇವರಿಗೆ ಕೈ ಮುಗಿಯುತ್ತೇವೆ.

Tiruvidandai Nithya Kalyana Perumal Temple

ದೇವರಿಗೆ ನಮಿಸಿ ನೀವು ಪ್ರಾರಂಭ ಮಾಡುವಂತಹ ಪ್ರತಿಯೊಂದು ಕಾರ್ಯದಲ್ಲೂ ಕೂಡ ಯಶಸ್ವಿ ಮತ್ತು‌ಜಯ ಎಂಬುದು ದೊರೆಯುತ್ತದೆ ಯಾರು ಕಠಿಣ ಪರಿಶ್ರಮ ಮತ್ತು ಭಕ್ತಿಪೂರ್ವಕವಾಗಿ ಕೆಲಸ ಮಾಡುತ್ತಾರೆ ಅಥವಾ ದೇವರಿಗೆ ನಮಿಸುತ್ತಾರೆ ಅಂತವರನ್ನು ಎಂದಿಗೂ ಕೂಡ ದೇವರು ಕೈ ಬಿಡುವುದಿಲ್ಲ ಆದಕಾರಣ ನಿಮ್ಮ ವಿವಾಹದಲ್ಲಿ ಏನಾದರೂ ತೊಂದರೆ ಉಂಟಾಗುತ್ತಿದ್ದರೆ, ಸಂಸಾರದಲ್ಲಿ ತೊಂದರೆ ಇದ್ದರೆ,

ಸರಿಯಾದ ಸಮಯಕ್ಕೆ ನಿಮಗೆ ಮದುವೆಯಾಗುತ್ತಿಲ್ಲ ಎಂದರೆ ನಾವು ಹೇಳುವಂತಹ ದೇವಸ್ಥಾನಕ್ಕೆ ಹೋಗಿ ನೀವು ಪೂಜೆ ಮಾಡಿಸಿಕೊಂಡು ಬಂದರೆ ಖಚಿತವಾಗಿ ಕೂಡ ವಿವಾಹ ವಿಳಂಬ ಎಂಬುವುದು ದೂರವಾಗುತ್ತದೆ. ಕೇವಲ ಇದಿಷ್ಟೇ ಅಲ್ಲ ಕೆಲವು ಹೊಸದಾಗಿ ಮದುವೆ ಆದಂತಹ ನವಜೋಡಿಗಳು ಕೂಡ ಸಂಸಾರದಲ್ಲಿ ಹೊಂದಾಣಿಕೆಯಿಲ್ಲ ಹೆಂಡತಿಯನ್ನು ಕಂಡರೆ ಗಂಡನಿಗೆ ಆಗುವುದಿಲ್ಲ ಅಥವಾ ಗಂಡನನ್ನು ಗಂಡ ಹೆಂಡತಿಗೆ ಆಗುವುದಿಲ್ಲ ನಮ್ಮಿಬ್ಬರ ನಡುವೆ ಹೋಲಿಕೆ ಎಂಬುದು ಇಲ್ಲ ಇಂತಹ ಸಮಸ್ಯೆಗಳನ್ನು ನೀವೇನಾದರೂ‌ ಅನುಭವಿಸುತ್ತಿದ್ದರೆ ಅದಕ್ಕೂ ಕೂಡ ನಮ್ಮಲ್ಲಿ ಪರಿಹಾರವಿದೆ. ಹೌದು ನಾವು ಹೇಳುವಂತಹ ದೇವಾಲಯಕ್ಕೆ ಹೋದರೆ ವಿವಾಹವಾಗದ ಯುವಕರಿಗೆ ಅಥವಾ ಯುವತಿಯರಿಗೆ ಕಂಕಣಬಲ ಎಂಬುವುದು ಲಭಿಸುತ್ತದೆ.

Nitya Kalyana Perumal Temple, Thiruvidandai, Tamil Nadu

ಇನ್ನೂ ವಿವಾಹ ಆಗಿರುವಂತಹ ದಂಪತಿಗಳ ಸಂಬಂಧದಲ್ಲಿ ಬಿರುಕು ಅಥವಾ ಮನಸ್ತಾಪ ಕಲಹ ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕೂಡ ಅದು ಕೂಡ ನಿವಾರಣೆಯಾಗಿ ಇಬ್ಬರೂ ಕೂಡ ಅನ್ಯೋನ್ಯವಾಗಿ ಸುಖ ದಾಂಪತ್ಯ ಜೀವನವನ್ನು ನಡೆಸಬಹುದಾಗಿದೆ. ಹೌದ ಅಂತಹ ಅದ್ಭುತ ಶಕ್ತಿಯನ್ನು ಹೊಂದಿರುವಂತಹ ದೇವಾಲಯ ನೆರೆರಾಜ್ಯ ತಮಿಳುನಾಡಿನಲ್ಲಿ ಇದೆ ಹೌದು ತಮಿಳುನಾಡಿನ ಕಾಂಚಿಪುರಂನಾ ತಿರುವಿ ಗಂಡೈ ಗ್ರಾಮದಲ್ಲಿ ಈ ಒಂದು ದೇವಸ್ಥಾನ ಇರುವುದನ್ನು ನಾವು ನೋಡಬಹುದಾಗಿದೆ. ಈ ದೇವಸ್ಥಾನದ ಹೆಸರು “ನಿತ್ಯ ಕಲ್ಯಾಣ ಪೆರುಮಾಳ್ ದೇವಾಲಯ” ಈ ದೇವಾಲಯವು ಮಹಾವಿಷ್ಣುವಿಗೆ ಸಂಬಂಧಪಟ್ಟಂತಹ ವರಗ ಅವತಾರಕ್ಕೆ ಒಳಗೊಂಡಿರುವಂತಹ ವಿಗ್ರಹವನ್ನು ನಾವು ಇಲ್ಲಿ ನೋಡಬಹುದಾಗಿದೆ. ನೀವು ಚೆನ್ನೈ ಗೆ ತೆರಳಿದರೆ ಅಲ್ಲಿಂದ ಕೇವಲ 40 ಕಿಲೋಮೀಟರ್ ದೂರವನ್ನು ಕ್ರಮಿಸಿದರೆ ಈ ದೇವಾಲಯ ನಿಮಗೆ ಸಿಗುತ್ತದೆ.

ಕೇವಲ ವಿವಾಹ ವಿಳಂಬವಾಗುವು ಮಾತ್ರವಲ್ಲದೆ ನಿಮ್ಮ ಜಾತಕದಲ್ಲಿ ರಾಹು ಅಥವಾ ಕೇತು ಗ್ರಹ ಅಥವಾ ಸರ್ಪದೋಷ ಇನ್ನಿತರ ಯಾವುದೇ ರೀತಿಯಾದಂತಹ ದೋಷಗಳು ಇದ್ದರೂ ಕೂಡ ಅವುಗಳನ್ನು ಕೂಡ ಪರಿಹರಿಸುವಂತಹ ಶಕ್ತಿ ಈ ದೇವಾಲಯಕ್ಕೆ ಇರುವುದನ್ನು ನಾವು ನೋಡಬಹುದಾಗಿದೆ. ಈ ಒಂದು ಕಾರಣಕ್ಕಾಗಿಯೇ ಈ ದೇವಾಲಯಕ್ಕೆ ಪ್ರತಿನಿತ್ಯವೂ ಕೂಡ ಸಾವಿರಾರು ಜನ ಭಕ್ತಾದಿಗಳು ಬಂದು ತಮ್ಮ ಮನಸ್ಸಿನಲ್ಲಿ ಇರುವಂತಹ ಇಚ್ಛೆಗಳನ್ನು ಹಾಗೂ ಕೋರಿಕೆಗಳನ್ನು ದೇವರಿಗೆ ಹೇಳಿ ಹೋಗುತ್ತಾರೆ.

ಈ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ ಅಂತವರಿಗೆ ಒಂದು ವರ್ಷದ ಒಳಗಾಗಿ ವಿವಾಹ ಯೋಗ ಒದಗಿ ಬರುತ್ತದೆ. ವಿವಾಹ ಜೀವನದಲ್ಲಿ ಏನಾದರೂ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಅವರ ಜೀವನದಲ್ಲಿ ನೆಮ್ಮದಿ ಎಂಬುದು ದೊರೆಯುತ್ತದೆ. ಇಲ್ಲಿಗೆ ಬಂದಂತಹ ಸಾಕಷ್ಟು ಜನರು ಈ ಒಂದು ಪವಾಡವನ್ನು ನೋಡಿ ಇದೀಗ ಈ ದೇವಾಲಯದ ಬಗ್ಗೆ ಪ್ರಚಾರ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಈ ದೇವಸ್ಥಾನದಲ್ಲಿ ಮುಖ್ಯವಾಗಿ ನಮಗೆ ಕಾಣಸಿಗುವಂತಹ ಸುಂದರ ದೃಶ್ಯ ಏನೆಂದರೆ ಈ ದೇವಾಲಯದಲ್ಲಿ ಸುಮಾರು ಆರೂವರೆ ಅಡಿ ಎತ್ತರದ ವರಹ ನರಸಿಂಹ ದೇವರ ವಿಗ್ರಹ ಕಾಣಿಸುತ್ತದೆ. ಈ ದೇವರು ಒಂದು ಕಾಲನ್ನು ನೆಲದ ಮೇಲೆ ಇಟ್ಟು ಮತ್ತೊಂದು ಕಾಲನ್ನು ಆದಿಶೇಷನ ಮೇಲೆ ಇಡುತ್ತಾರೆ ಅಷ್ಟೇ ಅಲ್ಲದೆ ತನ್ನ ಎಡ ತೊಡೆಯ ಮೇಲೆ ಮಹಾಲಕ್ಷ್ಮಿ ದೇವಿಯನ್ನು ಕೂರಿಸಿಕೊಳ್ಳುತ್ತಾರೆ ಈ ಒಂದು ಭವ್ಯವಾದ ಮೂರ್ತಿಯನ್ನು ನೋಡಿದರೆ ನಿಜಕ್ಕೂ ಕೂಡ ಮನಸ್ಸು ಉಲ್ಲಾಸಭರಿತವಾಗುತ್ತದೆ.

ಈ ದೇವರನ್ನು ನೋಡಿ ನಮ್ಮ ಮನಸ್ಸಿನಲ್ಲಿ ಇರುವಂತಹ ಇಚ್ಛೆಗಳನ್ನು ಆಗುವಂತೆ ಕೋರಿಕೆ ಕೇಳಿಕೊಂಡರೆ ಖಂಡಿತವಾಗಿಯೂ ಕೂಡ ಅವರಿಗೆ ದೇವರು ವರವನ್ನು ಕರುಣಿಸುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ಒಂದು ಕಾರಣಕ್ಕಾಗಿಯೇ ಈ ದೇವಾಲಯಕ್ಕೆ ಸಾಕಷ್ಟು ಜನ ಬಂದು ಹೋಗುವುದನ್ನು ನಾವು ನೋಡಬಹುದಾಗಿದೆ. ನೀವು ಕೂಡ ಒಂದು ಬಾರಿ ಈ ದೇಗುಲಕ್ಕೆ ಹೋಗಿ ಬಂದರೆ ಖಚಿತವಾಗಿಯೂ ಕೂಡ ನಿಮ್ಮ ವಿವಾಹ ಯೋಗ ಆಗಿರಬಹುದು ಕಂಕಣಬಲ ಆಗಿರಬಹುದು ಅಥವಾ ಸಾಂಸಾರಿಕ ತೊಂದರೆಗಳು ಆಗಿರಬಹುದು ಎಲ್ಲವೂ ಕೂಡ ನಿವಾರಣೆಯಾಗುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.