
Kajol : ಇತ್ತೀಚೆಗಿನ ದಿನಗಳಲ್ಲಿ ನಟ ನಟಿಯರು ಸಿನಿಮಾ ಹಾಗೂ ಧಾರಾವಾಹಿಗಳ ಜೊತೆಗೆ ವೆಬ್ ಸಿರೀಸ್ ಗಳತ್ತ ಮುಖ ಮಾಡುತ್ತಿದ್ದಾರೆ.ಈಗಾಗಲೇ ಸಾಕಷ್ಟು ವೆಬ್ ಸಿರೀಸ್ ಗಳು ಪ್ರಸಾರ ಕಂಡು ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದೆ. ಬಾಲಿವುಡ್ ರಂಗದಲ್ಲಿ ವೆಬ್ ಸಿರೀಸ್ ಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚು ಎನ್ನಬಹುದು. ಇದೀಗ ಲಸ್ಟ್ ಸ್ಟೋರೀಸ್ 2 (Last Stories 2) ನಲ್ಲಿ ನಟಿ ಕಾಜೋಲ್ ಅಭಿನಯಿಸಿದ್ದಾರೆ.
ಆದರೆ ಈ ವೆಬ್‌ಸಿರೀಸ್ ಪ್ರಚಾರದ ಸಂದರ್ಭದಲ್ಲಿ ನಟಿ ಕಾಜೋಲ್ (Kajol) ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆಯಲ್ಲಿ ನಟಿಯು ನೀಡಿರುವ ಹೇಳಿಕೆಯೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ತನ್ನ ಬೋಲ್ಡ್ ಉತ್ತರದ ಮೂಲಕ ಎಲ್ಲರ ಗಮನ ಸೆಳೆದುಕೊಂಡಿದ್ದಾರೆ. ಸಂದರ್ಶನದಲ್ಲಿ ಪರದೆಯ ಮೇಲೆ ಸ್ತ್ರೀ ಸಂತೋಷದ ಚಿತ್ರಣವನ್ನು ತೋರಿಸುವ ಬಗ್ಗೆ ಕಾಜೋಲ್ ಅವರಿಗೆ ಪ್ರಶ್ನೆಯನ್ನು ಕೇಳಲಾಗಿದೆ.
ಈ ವೇಳೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಟಿ ಕಾಜೋಲ್, “ಒಂದು ಸಮಯದಲ್ಲಿ ಸಮಾಜವಾಗಿ, ನಾವು ಅದರ ಬಗ್ಗೆ ತುಂಬಾ ಮುಕ್ತವಾಗಿದ್ದೆವು. ಅದು ನಮ್ಮ ಪ್ರಾಚೀನ ಭಾಗವಾಗಿತ್ತು. ಪಠ್ಯಗಳು ಮತ್ತು ನಮ್ಮ ಶಿಕ್ಷಣ, ನಂತರ ನಾವು ಅದರಿಂದ ನಮ್ಮನ್ನು ಮುಚ್ಚಿಕೊಂಡೆವು. ಆದರೆ ಇದು ಜೀವನದ ಅತ್ಯಂತ ಸಾಮಾನ್ಯ ಭಾಗವಾಗಿದೆ. ತಿನ್ನುವುದು ಮತ್ತು ಕುಡಿಯುವುದನ್ನು ನಾವು ಸಾಮಾನ್ಯೀಕರಿಸಿದ ರೀತಿಯಲ್ಲಿಯೇ ಅದನ್ನು ಸಾಮಾನ್ಯಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಅಷ್ಟೇ ಅಲ್ಲದೇ ಕಾಜೋಲ್ ಹಲವಾರು ವರ್ಷಗಳಿಂದ ಕೆಲವು ಅಂಶಗಳು ಎಷ್ಟು ವಿಕಾಸ ಹೊಂದಿದ್ದವು ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಪರದೆಯ ಮೇಲೆ ಒಂದು ಹಂತದಲ್ಲಿ ಕಾ-ಮದ ಪರಿಕಲ್ಪನೆ ತೋರಿಸಲು ಎರಡು ಹೂವುಗಳು ಒಟ್ಟಿಗೆ ಸೇರುತ್ತಿದ್ದವು. ಎರಡು ಕೆಂಪು ಗುಲಾಬಿಗಳು ಒಟ್ಟಿಗೆ ಬರುತ್ತಿದ್ದವು. ಮುಂದೆ, ಅವಳು ಗರ್ಭಿಣಿಯಾಗಿದ್ದಾಳೆ. ಹಾಗಾಗಿ ನಾವು ಒಂದು ಹೆಜ್ಜೆ ಮುಂದೆ ವಿಕಸನಗೊಂಡಿದ್ದೇವೆ ಮತ್ತು ಲಸ್ಟ್ ಸ್ಟೋರಿ2 ಗಳಂತಹ ಬೋಲ್ಡ್ ವೆಬ್‌ಸಿರೀಸ್ ಮಾಡಲು ನಿರ್ಧರಿಸಿದ್ದೇವೆ. ಸಿನಿಮಾ ಸಮಾಜವನ್ನು ಪ್ರತಿಬಿಂಬಿಸುತ್ತದೆ ಎಂದು ನಾನು ನಂಬುತ್ತೇನೆ.ಇದೀಗ, ಚಲನಚಿತ್ರಗಳು ಇಂದು ಪ್ರೀತಿಯನ್ನು ವ್ಯಾಖ್ಯಾನಿಸಿರುವ ಭಾಷೆಯಲ್ಲಿ ಮಾತನಾಡುತ್ತಿವೆ” ಎಂದಿದ್ದಾರೆ ನಟಿ ಕಾಜೋಲ್.
ಲ-ಸ್ಟ್ ಸ್ಟೋರೀಸ್ 2 ಗೆ ಬಧಾಯಿ ಹೋ ಮೇಕರ್ ಅಮಿತ್ ಆರ್. ಶರ್ಮಾ (Badhaayi Ho Mekar Amit R Sharmaa) ಆಕ್ಷನ್ ಕಟ್ ಹೇಳಿದ್ದು, ಒಂದು ವಿಭಾಗದಲ್ಲಿ ಕಾಜೋಲ್ (Kajol) ನಟಿಸಿದ್ದಾರೆ. ಈ ವೆಬ್ ಸಿರೀಸ್ ನಲ್ಲಿ ಕಾಜೋಲ್ ಪತಿಯಾಗಿ ನಟ ಕುಮುದ್ ಮಿಶ್ರಾ (Kumud Mishraa) ನಟಿಸಿದ್ದಾರೆ. ಲಸ್ಟ್ ಸ್ಟೋರೀಸ್ 2 ಜೂನ್ 29 ರಂದು ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ತೆರೆಗೆ ಬರಲಿದ್ದು ಫ್ಯಾನ್ಸ್ ವೆಬ್ ಸಿರೀಸ್ ನೋಡಲು ಕಾತುರರಾಗಿದ್ದಾರೆ.
Comments are closed.