ಮನೆಯಲ್ಲಿ ಕುಡುಕರಿದ್ದರೆ ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ,ಲೈಫ್ ಅಲ್ಲಿ ಎಣ್ಣೆ ಮುಟ್ಟಲ್ಲ

Kaidala Mallikarjuna swamy temple: ಕುಡಿತ ಎನ್ನುವುದು ಒಂದು ಚಟ. ಈ ಚಟ ಇಟ್ಟುಕೊಂಡವರು ಯಾವತ್ತೂ ಉದ್ಧಾರ ಆಗಿಲ್ಲ ಎಂದರೆ ತಪ್ಪಲ್ಲ. ಮದ್ಯಪಾನಕ್ಕೆ ದಾಸರಾಗುವವರು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವುದಲ್ಲದೆ ತಮ್ಮ ಕುಟುಂಬದ ಬದುಕನ್ನು ಹಾಳು ಮಾಡುತ್ತಾರೆ. ಮನೆಯಲ್ಲಿ ಹೆಂಡತಿ, ಮಕ್ಕಳು, ತಂದೆ ತಾಯಿಯನ್ನು ನೋಡಿಕೊಳ್ಳಬೇಕಾದ ಮಗ ಕುಡಿತದ ಚಟಕ್ಕೆ ಸಿಕ್ಕಿ, ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳದೆ ಹೋದರೆ ಅವರ ಪರಿಸ್ಥಿತಿ ಏನಾಗಬಹುದು?

ಇದನ್ನು ಊಹಿಸಿಕೊಳ್ಳುವುದು ಕಷ್ಟವೇ, ಹಲವು ಕುಟುಂಬಗಳಲ್ಲಿ ಇಂಥ ಪರಿಸ್ಥಿತಿ ಇದೆ. ಆದರೆ ನಮ್ಮ ರಾಜ್ಯದಲ್ಲಿ ಮದ್ಯಪಾನ ಮಾರಾಟ ಆಗಲಿ, ಕುಡಿತದ ಚಟ ಕಡಿಮೆ ಮಾಡುವ ಉದ್ದೇಶವಾಗಲಿ ಇಲ್ಲ. ಸರ್ಕಾರಕ್ಕೆ ಆದಾಯ ಜಾಸ್ತಿಯಾಗಲಿ ಎಂದು ಇದಕ್ಕೆ ಸರ್ಕಾರವೇ ಅನುಮತಿ ಕೊಡುತ್ತಿದೆ. ಇದರಿಂದ ಬಹಳಷ್ಟು ಕುಟುಂಬಗಳು ಹಾಳಾಗಿವೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಕುಡಿತದ ಚಟಕ್ಕೆ ಸಿಕ್ಕಿಕೊಂಡಿರುವವರು ಇದ್ದರೆ ಚಿಂತೆ ಮಾಡಬೇಡಿ.

Sri Mallikarjuna Swamy Temple Kaidale - Hindu temple - Kaidale, Karnataka - Zaubee

ಈ ಒಂದು ದೇವಸ್ಥಾನಕ್ಕೆ ಹೋದರೆ ಸಾಕು, ಕುಡಿತದ ಚಟ ಮುಂದುವರೆಯುವುದಿಲ್ಲ. ಈ ದೇವಸ್ಥಾನದಲ್ಲಿ ಮಾಲೆ ಹಾಕಿಕೊಂಡು ಇನ್ಮುಂದೆ ಕುಡಿಯುವುದಿಲ್ಲ ಎಂದರೆ ಅದು ಖಂಡಿತವಾಗಿ ನಡೆಯುತ್ತದೆ. ಈ ದೇವರು ಅಷ್ಟು ಪವರ್ ಫುಲ್, ಈ ದೇವರಿಗೆ ಮಾತು ಕೊಟ್ಟು ನಡೆಸಿಕೊಡದೆ ಹೋದರೆ ಅಪಾಯ ಆಗೋದು ಗ್ಯಾರಂಟಿ, ಹಾಗಾಗಿ ಯಾರು ಕೂಡ ಇಲ್ಲಿಗೆ ಬಂದು ಮಾತು ಕೊಟ್ಟರೆ, ಖಂಡಿತವಾಗಿ ಅದನ್ನು ನಡೆಸಿಕೊಡಬೇಕಾಗುತ್ತದೆ..

Kaidala Mallikarjuna swamy temple

ಅಷ್ಟಕ್ಕೂ ಈ ದೇವಸ್ಥಾನ ಇರುವುದು ದಾವಣಗೆರೆ ಜಿಲ್ಲೆಯ ಕೈದಾಳ ತಾಲ್ಲೂಕಿನಲ್ಲಿ. ಇದು ಕೈದಾಳ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನ, ಇಲ್ಲಿ ಬಂದು ರುದ್ರಾಕ್ಷಿಯ ಮಾಲೆ ಧರಿಸಿ, ಮತ್ತೆ ಕುಡಿಯುವುದಿಲ್ಲ ಎಂದು ದೇವರಿಗೆ ಆಣೆ ಮಾಡಬೇಕು. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬಕ್ಕೆ ವಿಶೇಷ ಜಾತ್ರೆ ನಡೆಯುತ್ತದೆ. ಅದನ್ನು ನೋಡಲು ರಾಜ್ಯದ ಹಲವೆಡೆ ಇಂದ ಜನರು ಬರುತ್ತಾರೆ..

Sri Mallikarjuna Swamy Temple kaidale in the city Kaidale

ಈ ರೀತಿಯಾಗಿ ದೇವಸ್ಥಾನಕ್ಕೆ ಬಂದು ಮಾಲೆ ಧರಿಸಿ, ದೀಕ್ಷೆ ತೆಗೆದುಕೊಂಡು ಕುಡಿತವನ್ನು ಬಿಟ್ಟವರು ತುಂಬಾ ಜನರಿದ್ದಾರೆ. ಹಲವರು ಈ ದೇವಸ್ಥಾನಕ್ಕೆ ಮನೆಯವರ ಬಲವಂತಕ್ಕೆ ಬರುತ್ತಾರೆ, ಇನ್ನು ಕೆಲವರು ತಮ್ಮಿಷ್ಟದಿಂದ ಬರುತ್ತಾರೆ. ಆದರೆ ಒಮ್ಮೆ ಬಂದು ದೀಕ್ಷೆ ತೆಗೆದುಕೊಂಡರೆ, ಖಂಡಿತವಾಗಿ ಅದನ್ನು ಪಾಲಿಸಲೇಬೇಕು. ದೇವರ ಮೇಲಿನ ಭಯಕ್ಕಾದರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಕೆಲವರು ಮತ್ತೆ ಮದ್ಯಪಾನ ಮಾಡುವ ಸಾಹಸ ಮಾಡಿ, ದೇವರ ಕೋಪಕ್ಕೆ ಗುರಿಯಾಗಿರುವ ಉದಾಹರಣೆ ಇದೆ..

ಹಾಗಾಗಿ ಯಾರು ಕೂಡ ಈ ದೇವಸ್ಥಾನಕ್ಕೆ ಬಂದಮೇಲೆ, ಕೊಟ್ಟ ಮಾತನ್ನು ಮುರಿಯುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಕುಡಿತದ ಸಮಸ್ಯೆ ಇಂದ ತೊಂದರೆ ಅನುಭವಿಸುತ್ತಿರುವವರು ಇದ್ದರೆ, ಕೂಡಲೇ ಆ ವ್ಯಕ್ತಿಯನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಹೆಚ್ಚಿನ ಜನರು ಇಲ್ಲಿಗೆ ಬಂದು ಕುಡಿತದ ಚಟವನ್ನು ಬಿಟ್ಟಿದ್ದಾರೆ.

You might also like

Comments are closed.