ಕಾಂತಾರ

‘ಕಾಂತಾರ’ ಸಿನಿಮಾ ಸೂಪರ್ ಹಿಟ್ – ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ ತಂಡ..!

CINEMA/ಸಿನಿಮಾ Entertainment/ಮನರಂಜನೆ

ಕಾಂತಾರ ಸಿನಿಮಾವನ್ನು ನಿರ್ದೇಶನ ಮಾಡಿ ನಟನೆಯನ್ನು ಮಾಡಿದ್ದ ರಿಷಬ್ ಶೆಟ್ಟಿ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ಸಿನಿಮಾ ಮಾತ್ರ ಕೊಟ್ಟಿಲ್ಲ, ಅವರು ಈ ಸಿನಿಮಾದ ಮೂಲಕ ತುಳುನಾಡಿನ ದೈವಾರಾಧನೆ ಯಾವ ರೀತಿ ಇರುತ್ತದೆ, ಈಗಲೂ ಕೂಡ ಧರ್ಮ ಹಾಗೂ ದೈವಕ್ಕೆ ಜನ ಎಷ್ಟು ಭಕ್ತಿ ತೋರುತ್ತಾರೆ ಮತ್ತು ನ್ಯಾಯ ಹಾಗೂ ಧರ್ಮ, ಕರ್ಮಗಳ ಕುರಿತ ಅರಿವಿನ ಬೀಜವನ್ನು ಎಲ್ಲರ ಮನಸ್ಸಿನಲ್ಲೂ ಬಿತ್ತಿದ್ದಾರೆ. ಇದೀಗ ಎಲ್ಲರೂ ಕೂಡ ಕಾಂತಾರ ಸಿನಿಮಾದ ಸಂದೇಶದ ಒಳ ಅರ್ಥದ ಕುರಿತು ಚಿಂತಾಕ್ರಾಂತರಾಗಿದ್ದು ತಮ್ಮ ತಮ್ಮ ಆತ್ಮ ಸಾಕ್ಷಿಗಳಲ್ಲಿ ಎಚ್ಚರಿಸಿಕೊಂಡು ನಡೆಯುತ್ತಿದ್ದಾರೆ.

ಈಗಿನ 21ನೇ ಶತಮಾನದಲ್ಲಿ ಕೂಡ ದುರಾಸೆಯಿಂದ ಮೆರೆಯುತ್ತಿದ್ದ ಮನುಜರಿಗೆ ಸರಿದಾರಿ ತೋರಿಸುವ ಪಾಠವಾಗಿ ಈ ಚಿತ್ರ ಬಂದಿದೆ ಎಂದರೆ ಅದು ತಪ್ಪಾಗಲಾರದು. ಈ ಸಿನಿಮಾ ಇಷ್ಟು ಚೆನ್ನಾಗಿ ಮೂಡಿಬರುವುದಕ್ಕೆ ನಿಜವಾಗಿಯೂ ಸಿನಿಮಾ ಮೇಲೆ ಪಂಜುರ್ಲಿ ಹಾಗೂ ಗುಳಿಕ ಮುಂತಾದ ದೈವಗಳ ಆಶೀರ್ವಾದ ಖಂಡಿತ ಇದೆ.

ರಿಷಬ್ ಶೆಟ್ಟಿ ಅವರು ಮೂಲತಃ ತುಳುನಾಡಿನವರು, ಬಾಲ್ಯದಿಂದಲೇ ಈ ಎಲ್ಲಾ ಆಚರಣೆಗಳನ್ನು ನಂಬಿಕೊಂಡು ಪಾಲಿಸಿಕೊಂಡು ಬರುತ್ತಿದ್ದವರಿಗೆ ಇದೆಲ್ಲವೂ ರ’ ಕ್ತಗತವಾಗಿಯೇ ಬಂದಿದೆ. ಇದನ್ನು ಸಿನಿಮಾ ಮೂಲಕ ತರಬೇಕು ಎಂದು ಆಸೆಪಟ್ಟಿದ್ದ ಅವರು ಅದು ಇಷ್ಟು ಸದ್ದು ಮಾಡುತ್ತದೆ ಎಂದು ಊಹೆ ಮಾಡಿರಲಿಲ್ಲ. ದೈವಗಳ ಆಶೀರ್ವಾದದಿಂದ ಇಂದು ಕಾಂತಾರ ಸಿನಿಮಾ ದೇಶದ ಗಡಿ ದಾಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ.

ಇತ್ತೀಚೆಗಷ್ಟೇ ಕಾಂತಾರ ಸಿನಿಮಾ ನಾಲ್ಕು ವಿಭಾಗಗಳಲ್ಲಿ ಆಸ್ಕರ್ಗೆ ನಾಮಿನೇಟ್ ಆಗಿದೆ. ಇಷ್ಟು ದೊಡ್ಡ ಸಾಧನೆ ಮಾಡಿರುವ ಈ ಸಿನಿಮಾ ಆರಂಭಿಸುವ ಮುನ್ನ ರಿಷಭ್ ಅವರು ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿಗಳ ಆಶೀರ್ವಾದ ಪಡೆದು ಮಂಜುನಾಥ ಹಾಗೂ ಅಣ್ಣಪ್ಪ ಸ್ವಾಮಿಯ ಆಶೀರ್ವಾದ ಪಡೆದು ನಂತರ ತಮ್ಮ ಕುಲ ದೈವಗಳಾದ ಪಂಜುರ್ಲಿ ದೈವ ಗುಳಿಕ ದೈವ ಮುಂತಾದವರ ಆಶೀರ್ವಾದ ಪಡೆದು ಆರಂಭಿಸಿದ್ದರು.

ಅಷ್ಟೇ ನೇಮವಾಗಿ ಚಿತ್ರೀಕರಣ ಮುಗಿಯುವವರೆಗೂ ನಡೆದುಕೊಂಡಿದ್ದಾರೆ, ಅವರ ಆ ಭಕ್ತಿ ಭಾವದಿಂದಲೇ ಸಾಮಾನ್ಯ ಬಜೆಟಿನ ಸಿನಿಮಾವೊಂದು ಈಗ ಈ ಮಟ್ಟದಲ್ಲಿ ದಾಖಲೆ ಮಾಡಿರುವುದು. ಸಿನಿಮಾ ಗೆದ್ದ ಸಂಭ್ರಮವನ್ನು ಆಚರಿಸುತ್ತಾ ಜೊತೆಗೆ ತಾವು ಕಟ್ಟಿಕೊಂಡಿದ್ದ ಹರಕೆಗಳನ್ನು ತೀರಿಸಲು ಬ್ರೇಕ್ ತೆಗೆದುಕೊಂಡಿರುವ ರಿಷಭ್ ಅವರು ಎಲ್ಲಾ ದೇವಸ್ಥಾನಗಳಿಗೂ ಬೇಟಿಕೊಟ್ಟು ಇದೀಗ ಊರಿನಲ್ಲಿ ಕೋಲ ಕೂಡ ನಡೆಸಿದ್ದಾರೆ.

ಅವರು ಕೋಲ ನಡೆಸಿ ದೈವಗಳನ್ನು ಕರೆಸಿ ಪೂಜೆ ಸಲ್ಲಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡುತ್ತಿದ್ದರೆ ಕಾಂತಾರ ಸಿನಿಮಾವನ್ನು ನೋಡಿದ ರೀತಿ ಆಗುತ್ತದೆ. ಆ ವಾತಾವರಣ ಪೂರ್ತಿ ದೈವಿಕ ಶಕ್ತಿಯಿಂದ ತುಂಬಿದ್ದು ಅಲ್ಲಿ ದೈವಗಳು ಬಂದು ರಿಷಬ್ ಶೆಟ್ಟಿ ಅವರಿಗೆ ಅಪ್ಪಣೆ ಕೊಟ್ಟು ಆಶೀರ್ವಾದ ಮಾಡಿರುವುದನ್ನು ನೋಡಬಹುದಾಗಿದೆ.

ರಿಷಬ್ ಶೆಟ್ಟಿ ಅವರ ಜೊತೆಗೆ ನಟಿ ಸಪ್ತಮಿ ಗೌಡ ಹಾಗೂ ರಿಷಭ್ ಶೆಟ್ಟಿ ಅವರ ಅರ್ಧಾಂಗಿ ಆದ ಪ್ರಣತಿ ಶೆಟ್ಟಿ ಮತ್ತು ಮಕ್ಕಳು, ರಿಷಭ್ ತಂದೆ ತಾಯಿ, ಕಾಂತಾರ ಸಿನಿಮಾದ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಸಂತೋಷ್ ಆನಂದಿ ರಾಮ್, ಪ್ರಮೋದ್ ಶೆಟ್ಟಿ ಮತ್ತು ಇತರೆ ಕಲಾವಿದರುಗಳು ಮತ್ತು ಕಾಂತಾರ ಸಿನಿಮಾದ ಕೆಲವು ತಂತ್ರಜ್ಞರು ಇನ್ನೂ ಅನೇಕರು ಇದರಲ್ಲಿ ಭಾಗಿ ಆಗಿರುವುದನ್ನು ನೋಡಬಹುದು.

ಕೆಲವು ಮಾಹಿತಿಗಳ ಪ್ರಕಾರ ರಿಷಬ್ ಶೆಟ್ಟಿ ಅವರು ಕಾಂತಾರ ಟು ಮಾಡುವುದಕ್ಕೂ ಕೂಡ ಯೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ, ಈ ಸಂದರ್ಭದಲ್ಲಿ ಅವರು ಅದಕ್ಕೂ ಸಹ ಅನುಮತಿ ಕೇಳಿರಬಹುದು. ಒಟ್ಟಿನಲ್ಲಿ ದೈವ ಬಂದು ರಿಷಭ್ ಅವರ ಕಣ್ಣಿನಲ್ಲಿ ಕಣ್ಣಿಟ್ಟು ತನ್ನ ಇಚ್ಛೆಯನ್ನು ಹೇಳಿರುವುದನ್ನು ಇದರಲ್ಲಿ ನಾವು ಗಮನಿಸಬಹುದಾಗಿದೆ. ನೀವು ಸಹ ಇಂತಹ ಅದ್ಭುತ ವಿಡಿಯೋ ನೋಡಿ ಕಣ್ತುಂಬಿಕೊಳ್ಳಿ.

ಆ ವಿಡಿಯೊ ಕೆಳಗಿದೆ…..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...