jyothi-rai

Jyothi Rai : ಕೆಂಪು ಬಣ್ಣದ ಸೀರೆಯುಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡ ಕಿರುತೆರೆಯ ನಟಿ ಜ್ಯೋತಿ ರೈ!!

Today News / ಕನ್ನಡ ಸುದ್ದಿಗಳು

Jyothi Rai : ಕನ್ನಡ ಕಿರುತೆರೆ ಲೋಕದಲ್ಲಿ ಕೆಲವು ನಟ ನಟಿಯರು ಇವತ್ತಿಗೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಅದಲ್ಲದೇ ತಮ್ಮಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಪ್ರೇಕ್ಷಕರ ಗಮನ ಸೆಳೆಯುತ್ತಿರುತ್ತಾರೆ. ಈ ವಿಚಾರದಲ್ಲಿ ನಟಿ ಜ್ಯೋತಿ ರೈ ಕೂಡ ಹೊರತಾಗಿಲ್ಲ. ಆದರೆ ಜ್ಯೋತಿ ರೈ (Jyothi Rai)ಯವರು ಇನ್ನುಳಿದ ನಟಿಯರಂತೆ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ಟಿವ್ ಆಗಿಲ್ಲ ಎನ್ನಬಹುದು.

ಆದರೆ ಇದೀಗ ಹೊಸದಾದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಜ್ಯೋತಿ ರೈಯವರು ಕೆಂಪು ಬಣ್ಣದ ಸೀರೆ (Saree) ಯುಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸೀರೆಯುಟ್ಟ ಫೋಟೋ ಶೇರ್ ಮಾಡಿಕೊಂಡು, ‘ನೀವು ಗ್ಲಾಮರಸ್ ಅನ್ನು ಅನುಭವಿಸಿದರೆ ನೀವು ಖಂಡಿತವಾಗಿಯೂ ಗ್ಲಾಮರಸ್ ಆಗುತ್ತೀರಿ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋವು ಹತ್ತೋಂಭತ್ತು ಸಾವಿರಕ್ಕೂ ಅಧಿಕಾ ವ್ಯೂಸ್ ಕಂಡಿದೆ.

Jyothi Rai Reels Video

ಇತ್ತೀಚೆಗಷ್ಟೇ ನಟಿ ಜ್ಯೋತಿ ರೈಯವರು ತನ್ನ ಮಾಡ್ರನ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಫೋಟೋ ನೋಡಿದ ನೆಟ್ಟಿಗರು ಶಾಕ್ ಕೂಡ ಆಗಿದ್ದು ಇದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ನಟಿಯೂ ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿದ್ದರು. ಈ ಹಾಟ್ ಫೋಟೋ ನೋಡಿದ ನೆಟ್ಟಿಗರು ಇದು ಜ್ಯೋತಿ ರೈಯವರ ಎಂದು ಅನುಮಾನ ವ್ಯಕ್ತಪಡಿಸಿದ್ದರು.

Jyothi Rai Reels Video
Jyothi Rai Reels Video

ಸದ್ಯಕ್ಕೆ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಜ್ಯೋತಿ ರೈಯವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ವಿನು ಬಳಂಜ ಅವರ ಬಂದೇ ಬರತಾವ ಕಾಲ ಧಾರಾವಾಹಿಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟರು. ಆದಾದ ಬಳಿಕ ನಟಿಗೆ ಅವಕಾಶಗಳು ಬರುತ್ತಿದ್ದಂತೆ ಪರಭಾಷೆಯಲ್ಲಿಯೂ ಬ್ಯುಸಿಯಾದರು ಕನ್ನಡ (Kannada), ತೆಲುಗು (Telugu), ತಮಿಳು (Tamil), ತುಳು (Tulu), ಕೂರ್ಗ್‌ (Coorg) ಭಾಷೆ ಬಲ್ಲವರಾಗಿದ್ದಾರೆ.

ಈಗಾಗಲೇ ಹದಿನೈದಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಲೀಡ್ ಆಗಿ ನಟಿಸಿದ್ದಾರೆ. ನೆಗೆಟಿವ್ ಪಾತ್ರಗಳನ್ನು ಸೇರಿದಂತೆ ಎಲ್ಲಾ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಜ್ಯೋತಿ ರೈಯವರು, ‘ಬಂದೆ ಬರತಾವ ಕಾಲ, ( Bande Barataava Kala), ಗೆಜ್ಜೆಪೂಜೆ (Gejje Pooje), ಅನುರಾಗ ಸಂಗಮ (Anuaraga Sangama), ಕನ್ಯಾದಾನ (Kanyadana), ಜೋಗುಳ (Jogula), ಲವಲವಿಕೆ (Lavalavike), ಮೂರುಗಂಟು (Murugantu), ಪ್ರೇರಣಾ (Prerana), ಕಿನ್ನರಿ (Kinnari), ಕಸ್ತೂರಿ ನಿವಾಸ ( Kasturi Nivasa) ನಟಿಸಿದ್ದಾರೆ.

ನಟಿ ಜ್ಯೋತಿ ರೈಯವರು 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಸಿ ಕಿರುತೆರೆ ಪ್ರೇಕ್ಷಕದವರಿಗೆ ಹತ್ತಿರವಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಟನೆಯ ‘ಸೀತಾರಾಮ ಕಲ್ಯಾಣ’ (Seetharama Kalyana) ನಟಿಸಿ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸದ್ಯಕ್ಕೆ ಕನ್ನಡ ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿದ್ದು, ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.